Asianet Suvarna News Asianet Suvarna News

ಬಿಜೆಪಿ ವಿಶ್ವದ ಅತ್ಯಂತ ಪ್ರಮುಖ ಪಕ್ಷ, ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಲೇಖನ!

2014 ಹಾಗೂ 2019ರ ಬೃಹತ್‌ ವಿಜಯದ ಬಳಿಕ ಆಡಳಿತಾರೂಢ ಬಿಜೆಪಿ 2024ರ ಚುನಾವಣೆಯನ್ನೂ ಮರಳಿ ಅಧಿಕಾರ ಹಿಡಿಯುವ ಹಾದಿಯಲ್ಲಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯಲ್ಲಿ ವಾಲ್ಟರ್‌ ರಸೆಲ್‌ ಮೀಡ್‌ ಎನ್ನುವವರು ಲೇಖನ ಬರೆದಿದ್ದಾರೆ.

US academic in Wall Street Journal BJP is world most important party and USA Need India san
Author
First Published Mar 21, 2023, 4:18 PM IST | Last Updated Mar 21, 2023, 4:18 PM IST

ನವದೆಹಲಿ (ಮಾ.21): ದೇಶದಲ್ಲಿ ಬಿಜೆಪಿ ವಿರುದ್ ಪ್ರತಿಪಕ್ಷಗಳು ಆರೋಪಗಳನ್ನು ಮಾಡುತ್ತಿರುವ ನಡುವೆಯೇ, ವಾಣಿಜ್ಯ ಉದ್ದೇಶಿತ ಅಮೆರಿಕದ ಪ್ರಸಿದ್ಧ ಪತ್ರಿಕೆ ವಾಲ್‌ ಸ್ಟ್ರೀಟ್‌ ಜರ್ನಲ್‌ ಭಾರತದಲ್ಲಿ ಆಡಳಿತಾರೂಢ ಬಿಜೆಪಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದೆ. ಇಂದು ಬಿಜೆಪಿಯು ವಿಶ್ವದ ಅತ್ಯಂತ ಪ್ರಮುಖ ಪಕ್ಷವಾಗಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಸಿದ್ಧ ಸಂಶೋಧಕ ವಾಲ್ಟರ್‌ ರಸೆಲ್‌ ಮೀಡ್‌ ಬರೆದಿದ್ದಾರೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳ ದೃಷ್ಟಿಯಲ್ಲೂ ನೋಡುವುದಾದರೆ, ಭಾರತದಲ್ಲಿರುವ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ, ವಿದೇಶದ ಅತ್ಯಂತ ಮಹತ್ವದ ರಾಜಕೀಯ ಪಕ್ಷವಾಗಿದೆ ಎನ್ನುವುದನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಎಂದು ಬರೆಯಲಾಗಿದೆ. 2014 ಹಾಗೂ 2019ರಲ್ಲಿ ದೊಡ್ಡ ಗೆಲುವು ಸಾಧಿಸಿರುವ ಬಿಜೆಪಿ 2024ರಲ್ಲೂ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಇಂಡೋ-ಪೆಸಿಪಿಕ್‌ ವಲಯದಲ್ಲಿ ಅಮೆರಿಕದ ಕಾರ್ಯತಂತ್ರಗಳಿಗೆ ಜಪಾನ್‌ ಎಷ್ಟು ಪ್ರಮುಖವೋ ಆರ್ಥಿಕ ಶಕ್ತಿಯಾಗಿರುವ ಭಾರತ ಕೂಡ ಅಷ್ಟೇ ಪ್ರಮುಖವಾಗಿದೆ. ಇಲ್ಲಿಯವರೆಗೂ ರಕ್ಷಣೆಯ ವಿಚಾರದಲ್ಲಿ ಜಪಾನ್‌ ಅಮೆರಿಕದ ದೊಡ್ಡ ಪಾಲುದಾರನಾಗಿತ್ತು. ಈಗ ಜಪಾನ್‌ನೊಂದಿಗೆ ಭಾರತ ಕೂಡ ಈ ವಲಯದ ಪ್ರಮುಖ ಪಾಲುದಾರನಾಗಿದೆ ಎಂದು ಬರೆಯಲಾಗಿದೆ.

"ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರವು ಯಾರ ಸಹಾಯವಿಲ್ಲದೆ ದೇಶದ ಮೇಲೆ ಬರುವ ಸವಾಲುಗಳನ್ನು ಎದುರಿಸಲಿದೆ. ಏರುತ್ತಿರುವ ಚೀನೀ ಶಕ್ತಿಯನ್ನು ಸಮತೋಲನಗೊಳಿಸುವ ಅಮೆರಿಕದ ಪ್ರಯತ್ನಗಳು ಈ ನಿಟ್ಟಿನಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ" ಎಂದು ಬರೆಯಲಾಗಿದೆ. ಭಾರತೀಯರಲ್ಲದ ಹೆಚ್ಚಿನವರಿಗೆ ಪರಿಚಯವಿಲ್ಲದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದಿಂದ ಬಿಜೆಪಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ಲೇಖಕ ಮೀಡ್ ಬರೆದಿದ್ದಾರೆ.

"ಮುಸ್ಲಿಂ ಬ್ರದರ್‌ಹುಡ್‌ನಂತೆ, ಬಿಜೆಪಿಯು ಪಾಶ್ಚಿಮಾತ್ಯದ ಅನೇಕ ವಿಚಾರಗಳು ಮತ್ತು ಆದ್ಯತೆಗಳನ್ನು ತಿರಸ್ಕರಿಸುತ್ತದೆ, ಅದು ಆಧುನಿಕತೆಯ ಪ್ರಮುಖ ಲಕ್ಷಣಗಳನ್ನು ಅಳವಡಿಸಿಕೊಂಡಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದಂತೆ, ಬಿಜೆಪಿಯು ಒಂದು ಶತಕೋಟಿಗಿಂತ ಹೆಚ್ಚು ಜನರನ್ನು ಹೊಂದಿರುವ ರಾಷ್ಟ್ರವನ್ನು ಜಾಗತಿಕ ಸೂಪರ್ ಪವರ್ ಆಗಲು ಮುನ್ನಡೆಸುವ ಆಶಯವನ್ನು ಹೊಂದಿದೆ. ಇಸ್ರೇಲ್‌ನಲ್ಲಿನ ಲಿಕುಡ್ ಪಕ್ಷದಂತೆಯೇ, ಬಿಜೆಪಿಯು ಮೂಲತಃ ಮಾರುಕಟ್ಟೆ ಪರವಾದ ಆರ್ಥಿಕ ನಿಲುವನ್ನು ಮತ್ತು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಸಂಯೋಜಿಸುತ್ತದೆ ಎಂದು ಬರೆಯಲಾಗಿದೆ.

ಅಮೆರಿಕನ್‌ ವಿಶ್ಲೇಷಕರು ಅದರಲ್ಲೂ ಪ್ರಮುಖವಾಗಿ ಎಡ ಉದಾರವಾದಿಗಳು ನರೇಂದ್ರ ಮೋದಿ ನೇತೃತ್ವದ ಭಾರತ, ಡೆನ್ಮಾರ್ಕ್‌ನಂತೆ ಏಕೆ ಇಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಬಿಜೆಪಿ ನಾಯಕತ್ವದೊಂದಿಗೆ ನಿಕಟ ಸಂಬಂಧ ಹೊಂದಿರುವ ರಾಷ್ಟ್ರವ್ಯಾಪಿ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ನ ಶಕ್ತಿಯ ಬಗ್ಗೆ ಹಲವರು ಭಯಪಡುತ್ತಾರೆ ಎಂದು ಅದರಲ್ಲಿ ಬರೆಯಲಾಗಿದೆ.

ಇಂಡೋ-ಪಾಕ್ ಪಂದ್ಯ ನಡೆಯಲು ಮೋದಿ ಸಾಹೇಬ್ ಅವಕಾಶ ಮಾಡಿಕೊಡಿ: ಅಫ್ರಿದಿ ಮನವಿ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ತೊಡಗಿಸಿಕೊಳ್ಳುವ ಆಹ್ವಾನವನ್ನು ಅಮೆರಿಕನ್ನರು ಸದ್ಯದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ. ಚೀನಾದ ಜೊತೆಗಿನ ಭಿನ್ನಾಭಿಪ್ರಾಯ ಹೆಚ್ಚಾಗಿರುವಂತೆ ಭಾರತವು ಆರ್ಥಿಕ ಮತ್ತು ರಾಜಕೀಯ ಪಾಲುದಾರನಾಗಿ ಅಮೆರಿಕಕ್ಕೆ ಅಗತ್ಯವಿದೆ. 

ಜಪಾನ್‌ ಪ್ರಧಾನಿ ಕಿಶಿದಾ ಜೊತೆ ಪಾರ್ಕ್‌ನಲ್ಲಿ ಗೋಲ್ಗಪ್ಪ, ಲಸ್ಸಿ ಸವಿದ ಪ್ರಧಾನಿ ಮೋದಿ

ಚೀನಾದೊಂದಿಗಿನ ಉದ್ವಿಗ್ನತೆ ಹೆಚ್ಚಾದಂತೆ, US ಗೆ ಭಾರತವು ಆರ್ಥಿಕ ಮತ್ತು ರಾಜಕೀಯ ಪಾಲುದಾರನಾಗಿ ಅಗತ್ಯವಿದೆ. ಭಾರತದೊಂದಿಗೆ ಆರ್ಥಿಕವಾಗಿ ತೊಡಗಿಸಿಕೊಳ್ಳಲು ಬಯಸುವ ಉದ್ಯಮಿಗಳು, ಹೂಡಿಕೆದಾರರು, ರಾಜತಾಂತ್ರಿಕರು ಮತ್ತು ನೀತಿ ನಿರೂಪಕರಿಗೆ ಹಿಂದೂ ರಾಷ್ಟ್ರೀಯತಾವಾದಿ ಚಳವಳಿಯ ಸಿದ್ಧಾಂತ ಮತ್ತು ಪಥವನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

Latest Videos
Follow Us:
Download App:
  • android
  • ios