ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಗಢ್‌ಚಿರೋಲಿ: ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಮಂಗಳವಾರ ಗಢ್‌ಚಿರೋಲಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬೇರೆ ರಾಜ್ಯಗಳ ನಗರ ನಕ್ಸಲರು ವಿದೇಶಗಳಿಂದ ದೇಣಿಗೆ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗಢ್‌ಚಿರೋಲಿ ಜನರನ್ನು ಅಭಿವೃದ್ಧಿ ಮಾರ್ಗದಿಂದ ದೂರವಿಡುತ್ತಿದ್ದಾರೆ. ಇಬ್ಬರು ಕರ್ನಾಟಕದ ಬೆಂಗಳೂರು ಹಾಗೂ ಇನ್ನಿಬ್ಬರು ಕೋಲ್ಕತಾದಲ್ಲಿ ಕುಳಿತು ನಮ್ಮ ಜನರನ್ನು ಸಂವಿಧಾನದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಹಿಂದು, ಬೌದ್ಧ, ಸಿಖ್ ಹೊರತುಪಡಿಸಿ ಮತ್ತೆಲ್ಲರ ಎಸ್‌ಸಿ ಪ್ರಮಾಣಪತ್ರ ರದ್ದು: ದೇವೇಂದ್ರ ಫಡ್ನವಿಸ್
ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಕ್ಕೆ ಸೇರಿದ ವ್ಯಕ್ತಿಯು ವಂಚನೆಯಿಂದ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದರೆ, ಅದನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿದ್ದಾರೆ.
ಸರ್ಕಾರಿ ಉದ್ಯೋಗಗಳಂತಹ ಮೀಸಲಾತಿ ಸೌಲಭ್ಯಗಳನ್ನು ಪಡೆದಿದ್ದರೆ ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ವ್ಯಕ್ತಿಯು ವಂಚನೆಯಿಂದ ಪಡೆದ ಎಸ್‌ಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದರೆ, ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಲಾಗುವುದು ಎಂದು ಫಡ್ನವೀಸ್ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.
'ಗಮನ ಸೆಳೆಯುವ' ಗೊತ್ತುವಳಿಗೆ ಉತ್ತರಿಸಿದ ಅವರು, ಬಲವಂತ ಮತ್ತು ವಂಚನೆಯ ಮೂಲಕ ಧಾರ್ಮಿಕ ಮತಾಂತರದ ಪ್ರಕರಣಗಳನ್ನು ಎದುರಿಸಲು ರಾಜ್ಯ ಸರ್ಕಾರವು ಬಲವಾದ ನಿಯಮಗಳನ್ನು ತರಲು ಉದ್ದೇಶಿಸಿದೆ ಎಂದು ಹೇಳಿದರು.
