ಮುಂಬೈ(ಡಿ.05): ಕಾಂಗ್ರೆಸ್ ಎನ್’ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿರುವ ಉದ್ಧವ್ ಠಾಕ್ರೆ ನಡೆ ಖಂಡಿಸಿ, ಸುಮಾರು 400ಕ್ಕೂ ಅಧಿಕ ಶಿವಸೇನೆ ಕಾರ್ಯಕರ್ತರು ಪಕ್ಷ ತ್ಯಜಿಸಿದ್ದಾರೆ.

ಅಧಿಕಾರಕ್ಕಾಗಿ ಉದ್ಧವ್ ಠಾಕ್ರೆ ಪಕ್ಷದ ತತ್ವ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದು, ಅವರ ಅನುಕೂಲಸಿಂಧು ರಾಜಕಾರಣ ಖಂಡಿಸಿ ಪಕ್ಷ ತ್ಯಜಿಸುತ್ತಿರುವುದಾಗಿ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.

‘ಶಿವಸೇನೆಗೆ ಬೆಂಬಲ ಕಾಂಗ್ರೆಸ್‌ ದುರಂತ’

ಶಿವಸೇನೆ ತ್ಯಜಿಸಿರುವ 400ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರಿದ್ದು, ಹಿಂದುತ್ವಕ್ಕಾಗಿ ಕಮಲ ಪಾಳೆಯ ಸೇರುತ್ತಿರುವುದಾಗಿ ಕಾರ್ಯಕರ್ತರು ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್-ಎನ್’ಸಿಪಿ ವಿರುದ್ಧ ಸೆಣೆಸಿದ್ದ ಶಿವಸೇನೆ, ಇದೀಗ ಅಧಿಕಾರಕ್ಕಾಗಿ ಸಿದ್ದಾಂತ ಬದಿಗಿರಿಸಿದೆ ಎಂದು ಪಕ್ಷ ತ್ಯಜಿಸಿರುವ ನಾಯಕ ರಮೇಶ್ ನಾದರ್ ಹರಿಹಾಯ್ದಿದ್ದಾರೆ.

ಮಹಾರಾಷ್ಟ್ರ ಸರ್ಕಾರ: ಶತ್ರುವಿನ ಜೊತೆ ನಡೆಸುವ ಸಂಸಾರ

ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ತತ್ವಾದರ್ಶಗಳನ್ನು ಉದ್ಧವ್ ಗಾಳಿಗೆ ತೂರಿದ್ದು, ಪಕ್ಷದಲ್ಲಿರಲು ಮನಸ್ಸು ಒಪ್ಪುತ್ತಿಲ್ಲ ಎಂಧು ರಮೇಶ್ ನಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರ ಹಂಚಿಕೊಳ್ಳಲು ಬಿಜೆಪಿ ಒಪ್ಪದ ಕಾರಣಕ್ಕೆ, ಕಾಂಗ್ರೆಸ್-ಎನ್’ಸಿಪಿ ಜೊತೆ ಕೈಜೋಡಿಸಿ ಶಿವಸೇನೆ ಮಹಾರಾಷ್ಟದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ರಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.