12 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಪಾಸಾಗದ ವ್ಯಕ್ತಿ; ನೀವು ಗೆದ್ದೇ ಗೆಲ್ತೀರಿ ಅಂದ್ರು ನೆಟ್ಟಿಗರು
ಸಾಮಾನ್ಯವಾಗಿ ಜಗತ್ತು ಗೆದ್ದವರ ಕತೆ ಮಾತ್ರ ಕೇಳುತ್ತದೆ. ಆದರೆ, 12 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಗೆಲುವು ಕಾಣದ ವ್ಯಕ್ತಿಯೊಬ್ಬನ ಪೋಸ್ಟ್ ವೈರಲ್ ಆಗಿದೆ.
ಯುಪಿಎಸ್ಸಿ 2023 ಫಲಿತಾಂಶ ಹೊರಬಿದ್ದಿದೆ. ಗೆದ್ದವರ ಕತೆಗಳು ಎಲ್ಲೆಡೆ ಹರಿದಾಡ್ತಿವೆ. ಆದರೆ, ಗೆದ್ದವರಷ್ಟೇ, ಕೆಲವರು ಅವರಿಗಿಂತ ಹೆಚ್ಚು ಪ್ರಯತ್ನ ಹಾಕಿಯೂ ಪಾಸಾಗದೆ ಹತಾಶರಾದವರ ಸಂಖ್ಯೆ ದೊಡ್ಡದಿದೆ. ಸಾಮಾನ್ಯವಾಗಿ ಜಗತ್ತು ಗೆದ್ದವರ ಕತೆ ಮಾತ್ರ ಕೇಳುತ್ತದೆ. ಆದರೆ, 12 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರೂ ಗೆಲುವು ಕಾಣದ ವ್ಯಕ್ತಿಯೊಬ್ಬನ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಈತನಿಗೆ ಗೆಲ್ಲುವ ಹುರುಪು ತುಂಬುತ್ತಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಉನ್ನತ ಶಿಕ್ಷಣದ ಬಳಿಕ ಅಯ್ಯಬ್ಬಾ, ಇನ್ನು ಜೀವನದಲ್ಲಿ ಪರೀಕ್ಷೆ ಬರೆಯೋ ಸಾಹಸ ಮಾಡಲ್ಲ ಅಂದುಕೊಳ್ತಾರೆ. ಆದರೆ, ಹೆಚ್ಚಿನದನ್ನು ಸಾಧಿಸುವ ಬಯಕೆ ಇರುವ ಕೆಲವರು ಮಾತ್ರ ಯುಪಿಎಸ್ಸಿ ಸೇರಿದಂತೆ ಒಂದಿಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತೆ ಮತ್ತೆ ಕಟ್ಟಿ ದೊಡ್ಡ ಕನಸು ಕಾಣ್ತಾರೆ.
ಯಾರೇ ಆದರೂ ಯುಪಿಎಸ್ಸಿ ಪರೀಕ್ಷೆಯಲ್ಲಿ 1, 2 ಹೆಚ್ಚೆಂದರೆ ನಾಲ್ಕೈದು ಬಾರಿ ಪ್ರಯತ್ನ ಮಾಡಿ ಕಡೆಗೂ ವಿಫಲವಾದರೆ ಮುಂದೆ ಬೇರೆನು ಮಾಡಬಹುದು ಎಂದು ಬದುಕನ್ನು ಕಂಡುಕೊಳ್ಳುತ್ತಾ ಸಾಗುತ್ತಾರೆ.
ಲವ್ ಫೈಲೂರ್ ಅಂತ ವ್ಯಕ್ತಿ ಆತ್ಮಹತ್ಯೆ ಮಾಡ್ಕೊಂಡ್ರೆ ಹೆಣ್ಣಲ್ಲ ಹೊಣೆ: ಹೈ ಕೋರ್ಟ್
ಆದರೆ, ಈ ವ್ಯಕ್ತಿಯ ಛಲ ನೋಡಿ, 12 ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಾರಂತೆ ಇವರು. 5 ಬಾರಿ ಮೇನ್ಸ್ ಬರೆದಿದ್ದಾರೆ, 5 ಸಂದರ್ಶನಗಳನ್ನೂ ಎದುರಿಸಿದ್ದಾರೆ. ಆದರೆ, ಅವರ ಗೆಲ್ಲುವ ಕನಸು ಮಾತ್ರ ಕೈಗೆ ಸಿಕ್ಕಂತಾಗಿ ಸ್ವಲ್ಪದರಲ್ಲಿ ತಪ್ಪಿಸಿಕೊಂಡು ಕೈ ಜಾರುತ್ತಿದೆ. ಈ ಬಗ್ಗೆ ಬರೆದುಕೊಂಡಿರುವ ವ್ಯಕ್ತಿಯು, ಬಹುಶಃ ಹೋರಾಟವು ಜೀವನಕ್ಕೆ ಮತ್ತೊಂದು ಹೆಸರು ಎಂದಿದ್ದಾರೆ.
ಕುನಾಲ್ ಆರ್. ವಿರುಲ್ಕರ್ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಅವರ ಹತಾಶ ಪೋಸ್ಟ್‌ಗೆ ಸಮಾಧಾನ ಮಾಡಲು ನೆಟ್ಟಿಗರು ಪ್ರಯತ್ನಿಸಿದ್ದಾರೆ. ಬಹಳಷ್ಟು ಜನ 'ನಿಮ್ಮ ಹೆಸರನ್ನು ಅಧಿಕಾರಿಯಾಗಿ ನೋಡಲು ಬಯಸುತ್ತೇನೆ ಸರ್' ಎಂದು ಪ್ರತಿಕ್ರಿಯಿಸಿದ್ದಾರೆ.
'ಬಹುಶಃ ಜೀವನವು ಮುಂದೆ ನಿಮಗಾಗಿ ಇನ್ನೂ ದೊಡ್ಡ ವಿಷಯಗಳನ್ನು ಇಟ್ಟುಕೊಂಡಿರಬಹುದು. ನಿಮ್ಮ ಹೋರಾಟ ಮತ್ತು ಪರಿಶ್ರಮವನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ನೀವು ಅದನ್ನು ಚೆನ್ನಾಗಿ ಮಾಡಿದ್ದೀರಿ ಮತ್ತು ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ನೀವು ಪ್ರತಿ ಬಾರಿ ಗೆದ್ದಿದ್ದೀರಿ' ಎಂದೊಬ್ಬರು ಭರವಸೆ ತುಂಬಿದ್ದಾರೆ.
ಕೆಲವರಿಗೆ ಬರೀ ಗಂಡುಮಕ್ಕಳೇ ಆಗೋದೇಕೆ? 5 ಗಂಡುಮಕ್ಕಳ ತಂದೆ ದ್ವಾರಕೀಶ್ ಹೇಳಿದ್ದೇನು?
ಈ ಪೋಸ್ಟ್ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಈಗಾಗಲೇ 34 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 2 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.
'ಈ ಪೋಸ್ಟ್ ಸುಖಾಂತ್ಯ ಪಡೆಯದ ಎಲ್ಲರ ಬಗ್ಗೆ ನಮ್ಮ ಯೋಚನೆಗಳನ್ನು ಎಳೆಯುತ್ತಿದೆ' ಎಂದೊಬ್ಬರು ಹೇಳಿದ್ದಾರೆ.
'ನಿಮ್ಮ ಬದ್ಧತೆ ನೋಡಿದರೆ ತಿಳಿಯುತ್ತದೆ, ನಿಮ್ಮ ಗುರಿಗಳನ್ನು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ!' ಎಂದು ಮತ್ತೊಬ್ಬರು ಹುರಿದುಂಬಿಸಿದ್ದಾರೆ.