Asianet Suvarna News Asianet Suvarna News

ಮುಸ್ಲಿಂ ಶಾಸಕಿ ಬಂದು ಹೋದ ಮೇಲೆ ಗಂಗಾಜಲದಿಂದ ದೇವಸ್ಥಾನ ಶುದ್ಧೀಕರಣ

ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕಿರೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಹೊರನಡೆದ ಬಳಿಕ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh)ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

UP Temple cleaning after Muslim MLA comes and goes In a Uttarpradesh Temple akb
Author
First Published Nov 29, 2023, 8:02 AM IST

ಸಿದ್ಧಾರ್ಥನಗರ (ಉ.ಪ್ರದೇಶ): ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕಿರೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಹೊರನಡೆದ ಬಳಿಕ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಣಗೊಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh)ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯ ಜನರ ಆಹ್ವಾನದ ಮೇರೆಗೆ 'ಶತಚಂಡಿ ಮಜಾಯಜ್ಞ'ದಲ್ಲಿ ಭಾಗವಹಿಸಲು ಇಲ್ಲಿನ ಸಮಯ ಮಾತಾ ದೇವಸ್ಥಾನಕ್ಕೆ ದೂಮಾರಿಯಾಗಂಜ್‌ ಶಾಸಕಿ ಸಯೀದಾ ಖಾತೂನ್‌ (Sayeda Khatoon)ಭಾನುವಾರ ಆಗಮಿಸಿದ್ದರು. ಅವರು ನಿರ್ಗಮಿಸಿದ ಬಳಿಕ ಮಂತ್ರಗಳನ್ನು ಪಠಣ ಮಾಡುತ್ತ ಗಂಗಾಜಲದಿಂದ ದೇವಸ್ಥಾನವನ್ನು ಶುದ್ಧಿ ಮಾಡಲಾಗಿದೆ.

ಈ ಶುದ್ಧಿ ಕಾರ್ಯದ ನೇತೃತ್ವ ವಹಿಸಿದ್ದ ಸ್ಥಳೀಯ ನಗರ ಪಂಚಾಯತ್ ಮುಖ್ಯಾಧಿಕಾರಿ ಧರ್ಮರಾಜ್ ವರ್ಮಾ(Dharmaraj Verma), ಕೆಲವು 'ಅನೀತಿವಂತ' ಜನರು ಶಾಸಕಿ ಸಯೀದಾರನ್ನು ಆಹ್ವಾನಿಸಿದ್ದರು. ಸಯೀದಾ ಮುಸ್ಲಿಂ ಆಗಿರುವುದರಿಂದ ಮತ್ತು ಗೋಮಾಂಸ ತಿನ್ನುವುದರಿಂದ, ಅವರ ಭೇಟಿಯು ಪವಿತ್ರ ಸ್ಥಳವನ್ನು ಅಶುದ್ಧಗೊಳಿಸಿದೆ. ಈ ಶುದ್ಧೀಕರಣದ ನಂತರ ಸ್ಥಳವು ಈಗ ಸಂಪೂರ್ಣ ಶುದ್ಧವಾಗಿದೆ ಮತ್ತು ಪೂಜೆಗೆ ಸೂಕ್ತವಾಗಿದೆ ಎಂದಿದ್ದಾರೆ.

ಹಿಂದೂ ಹಬ್ಬಗಳಿಗೆ ರಜೆ ಕಟ್, ಮುಸಲ್ಮಾನ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಳ: ಬಿಜೆಪಿ ಆಕ್ರೋಶ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಯೀದಾ ಇಂತಹ ಕೃತ್ಯವನ್ನು ಎಂದಿಗೂ ಸಹಿಸಬಾರದು. ಜನಪ್ರತಿನಿಧಿಯಾಗಿರುವ ನಾನು ಎಲ್ಲಾ ಧರ್ಮಗಳು ಮತ್ತು ಪಂಗಡಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ ಮತ್ತು ಅಂತಹ ಯಾವುದೇ ಕೃತ್ಯಗಳಿಂದ ಹಿಂಜರಿಯುವುದಿಲ್ಲ ಎಂದಿದ್ದಾರೆ.

ಭಿನ್ನಮತೀಯ ಜೋಡಿ ಸುತ್ತಾಟ, ಭಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ

Follow Us:
Download App:
  • android
  • ios