ಯೋಗಿ ಸರ್ಕಾರದ ದಿಟ್ಟ ಕ್ರಮ, ಪಾತಕಿಯ ಮನೆ ನೆಲಸಮ!
ದಿಟ್ಟ ನಿರ್ಧಾರಗಳಿಗೆ ಹೆಸರಾದ ಉತ್ತರ ಪ್ರದೇಶದ ಯೋಗಿ ಸರ್ಕಾರ/ ಪಾತಕಿ ಮುಖ್ತಾರ್ ಅನ್ಸಾರಿ ಆಸ್ತಿ ನೆಲಸಮ/ ಜೆಸಿಬಿ ಬಳಸಿ ಐಷಾರಾಮಿ ಮನೆ ಕೆಡವಿದ ಸರ್ಕಾರ
ಲಕ್ನೋ(ಆ. 27) ಕಠಿಣ ಕಾನೂನುಗಳಿಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಹೆಸರುವಾಸಿ. ಪಾತಕಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುತ್ತದೆ.
ಪಾತಕಿ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ ಸಹಚರನನ್ನು ಕೆಲ ದಿನಗಳ ಹಿಂದೆ ಎನ್ ಕೌಂಟರ್ ಮಾಡಲಾಗಿತ್ತು. ಇದೀಗ ಅನ್ಸಾರಿಗೆ ಸೇರಿದ ಆಸ್ತಿಗಳನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. ಲಕ್ನೋದ ದಾಲಿಭಾಗ್ ನಲ್ಲಿದ್ದ ಅಕ್ರಮ ಆಸ್ತಿಗಳನ್ನು ಧ್ವಂಸ ಮಾಡಲಾಗಿದೆ.
6 ವರ್ಷದ ಬಾಲಕಿ ಮೇಲೆ ರೇಪ್; ಗುಪ್ತಾಂಗಕ್ಕೆ ಗಾಯ ಮಾಡಿದ ಪಿಶಾಚಿ
2005 ರ ನವೆಂಬರ್ 29 ರಂದು ನಡೆದಿದ್ದ ಮೊಹಮ್ಮದಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ರಾಗಿದ್ದ ಕೃಷ್ಣಾನಂದ ರಾಯ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮುಖ್ತಾರ್ ಅನ್ಸಾರಿ ಜೈಲಿನಲ್ಲಿದ್ದಾನೆ.
ಅನ್ಸಾರಿ ಮನೆಯನ್ನು ಜೆಸಿಬಿ ಬಳಸಿ ನೆಲಸಮ ಮಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಸರ್ಕಾರ ಪಾತಕಿಗಳ ವಿರುದ್ಧ ಇಂಥ ಕ್ರಮ ತೆಗೆದುಕೊಂಡಿದ್ದನ್ನು ಸ್ವಾಗತ ಮಾಡಿದ್ದಾರೆ.