Asianet Suvarna News Asianet Suvarna News

ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಸರ್ಕಾರದ ಗೂಗ್ಲಿ, ಗಂಡ-ಹೆಂಡ್ತಿ ಬದಲು ಅತ್ತೆ-ಸೊಸೆ ಸಮ್ಮೇಳನ!

ಉತ್ತರ ಪ್ರದೇಶ ಸರ್ಕಾರ ಇದೀಗ  ಜನಸಂಖ್ಯಾ ನಿಯಂತ್ರಣಕ್ಕೆ ವಿನೂತನ ಯೋಜನೆ ಜಾರಿಗೊಳಿಸಿದೆ. ಗಂಡ-ಹೆಂಡ್ತಿ ಬದಲು ಅತ್ತೆ-ಸೊಸೆ ಸಮ್ಮೇಳನ ಆಯೋಜಿಸಿದೆ. ಇದರಿಂದ ಜನಸಂಖ್ಯೆ ನಿಯಂತ್ರಣ ಹೇಗೆ ಸಾಧ್ಯ ಅಂತೀರಾ?

UP Govt organize Saas Beta and Bahu summit to control Population through awareness ckm
Author
First Published Jun 14, 2024, 3:53 PM IST

ಲಖನೌ(ಜೂ.14) ಜನಸಂಖ್ಯೆ ನಿಯಂತ್ರಣ ಭಾರತಕ್ಕೆ ಅತ್ಯಂತ ಸವಾಲು. ಇದಕ್ಕೆ ಕಠಿಣ ಕಾನೂನಿಗೆ ಹಲವು ತೊಡಕುಗಳಿವೆ. ಹೀಗಾಗಿ ಜಾಗೃತಿ ಮೂಡಿಸುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಒಂದಿಷ್ಟು ಕೊಡುಗೆ ನೀಡಬಹುದು. ಇದೀಗ ಉತ್ತರ ಪ್ರದೇಶ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.  ಆದರೆ ಜನರು ಕನ್ಫ್ಯೂಸ್ ಆಗಿದ್ದಾರೆ. ಕಾರಣ ಜನಸಂಖ್ಯಾ ನಿಯಂತ್ರಣ ಕುರಿತು ಗಂಡ-ಹೆಂಡತಿ ಸಮ್ಮೇಳನ ಆಯೋಜಿಸುವ ಬದಲು ಅತ್ತೆ-ಸೊಸೆ ಸಮ್ಮೇಳನ ಆಯೋಜಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಸರ್ಕಾರ ಕುಟುಂಬ, ಸಮುದಾಯ, ಜೋಡಿಗಳ ನಡುವೆ ಮುಕ್ತ ಚರ್ಚೆ ಆಯೋಜಿಸುತ್ತಿದೆ. ಇದೀಗ ಅತ್ತೆ-ಸೊಸೆ ನಡುವೆ ಸಮ್ಮೇಳನ ಆಯೋಜಿಸಿದೆ. ಈ ಕಾರ್ಯಕ್ರಮದ ಸಂಪೂರ್ಣ ಹೆಸರು ಅತ್ತೆ, ಸೊಸೆ ಹಾಗೂ ಮಗ ಸಮ್ಮೇಳ. ಈ ಕಾರ್ಯಕ್ರಮದಲ್ಲಿ ಅತ್ತೆ, ಮಗ ಹಾಗೂ ಸೊಸೆ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. 

World Population Day 2023: ಭಾರ​ತ​ದಲ್ಲಿ ಗಂಟೆಗೆ 3321 ಮಕ್ಕಳ ಜನನ ಕಳ​ವ​ಳ​ಕಾ​ರಿ!

ಅತ್ತೆ, ಸೊಸೆ ಹಾಗೂ ಮಗ ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಚರ್ಚೆ ನಡೆಸಲಿದ್ದಾರೆ. ತಜ್ಞರು, ಸರ್ಕಾರದ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಗಳಲ್ಲಿ ಸಂತಾನ ಕುರಿತು ಮುಕ್ತ ಚರ್ಚೆಗಳು ನಡೆಯುವುದಿಲ್ಲ. ಕುಟಂಬಗಳಲ್ಲಿ ಸಂತಾನ ಕುರಿತು ಮಾತುಕತೆ, ಚರ್ಚೆಗಳು ಬೆರೆಳೆಣಿಕೆ. ಹಲವರು ಮುಕ್ತವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಈ ರೀತಿಯ ತೊಡಕುಗಳನ್ನು ತೊಡೆದು ಹಾಕಿ ಮುಕ್ತವಾಗಿ ಚರ್ಚಿಸುವ ಅವಕಾಶ ಬೆಳೆಸಿ ಈ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ.

ಇದು ಸರಣಿ ಕಾರ್ಯಕ್ರಮವಾಗಿದೆ. ಇದೀಗ ಅತ್ತೆ ಸೊಸೆ ಸಮ್ಮೇಳನ ಆಯೋಜಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಪ್ರಮುಖವಾಗಿ ಅತ್ತೆಯ ಒತ್ತಡೆ, ಪತಿಯ ಕುಟುಂಬದವರ ಒತ್ತಡದಿಂದ ಹೆಚ್ಚಿನ ಮಕ್ಕಳು ಪಡೆಯಲಾಗುತ್ತಿದೆ ಅನ್ನೋ ಆರೋಪವಿದೆ. ಜೊತೆಗೆ ಸಂತಾನ ವಿಚಾರದಲ್ಲಿ ಗಂಡ ಹಾಗೂ ಹೆಂಡತಿಯಷ್ಟೇ ಅತ್ತೆ ಹಾಗೂ ಸೊಸೆ ಕೂಡ ಮುಕ್ತವಾಗಿ ಚರ್ಚಿಸಬೇಕು ಅನ್ನೋದು ತಜ್ಞರು ಅಭಿಪ್ರಾಯ. ಹೀಗಾಗಿ ಅತ್ತೆ ಸೊಸೆ ಸಮ್ಮೇಳನ ಮೂಲಕ ಯೋಗಿ ಸರ್ಕಾರ ಕುಟುಂಬದ ಸಂತಾನ ನಿಯಂತ್ರಣಕ್ಕೆ ಗೂಗ್ಲಿ ಹಾಕಿದೆ.

ಜನಸಂಖ್ಯಾ ನಿಯಂತ್ರಣದ ಸಂದೇಶ ಕೊಟ್ಟಿತಾ RSS?

ಅತ್ತೆ ಸೊಸೆ ಸಮ್ಮೇಳನ ಕಾರ್ಯಕ್ರಮ ಜೂನ್ 27ರಿಂದ ಜುಲೈ 10ರ ವರೆಗೆ ನಡೆಯಲಿದೆ. ಉತ್ತರ ಪ್ರದೇಶದ ಬಹುತೇಕ ಭಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದ್ದಾಗ ಬಳಿಕ ಸರಣಿ ಕಾರ್ಯಕ್ರಮ ಜುಲೈ 11ರಿಂದ ಜುಲೈ 24ರ ವರೆಗೆ ಆಯೋಜನೆಗೊಳ್ಳಲಿದೆ. ಪ್ರತಿ ಬಾರಿ ಸಂತಾನ ನಿಯಂತ್ರಣಕ್ಕೆ ಪತಿ ಪತ್ನಿ ಜೊತೆಗೆ ಕುಟುಂಬ ಸದಸ್ಯರಲ್ಲೂ ಅರಿವು ಮೂಡಿಸುವ ನಿಮಿತ್ತ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
 

Latest Videos
Follow Us:
Download App:
  • android
  • ios