ಸರ್ಕಾರಿ ಆಸ್ಪತ್ರೆ ಕುರಿತು ಹಲವು ದೂರುಗಳು ಬಂದಿತ್ತು. ಇದನ್ನು ಪತ್ತೆ ಹಚ್ಚಲು ಐಎಎಸ್ ಅಧಿಕಾರಿ ರೋಗಿಯಂತೆ ಮಾರುವೇಷದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆಸ್ಪತ್ರೆ ಒಂದೊಂದೇ ಕರಾಳ ಅಧ್ಯಾಯಗಳು ಬೆಳಕಿಗೆ ಬಂದಿದೆ. 

ಲಖನೌ(ಮಾ.14) ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಿಗಲ್ಲ, ನಿರ್ಲಕ್ಷ್ಯ, ಔಷದಿ ಇಲ್ಲ, ಶುಚಿಯಾಗಿಲ್ಲ, ಆರೈಗೆ ಸಿಗುತ್ತಿಲ್ಲ ಹೀಗೆ ದೂರು ದುಮ್ಮಾನಗಳ ಪಟ್ಟಿ ಒಂದೆಡೆರಲ್ಲ. ಇನ್ನು ಅಧಿಕಾರಿಗಳು ಭೇಟಿ ನೀಡುವ ಸಂದರ್ಭ ಎಲ್ಲವನ್ನೂ ನಿಭಾಯಿಸಿ ಅತ್ಯುತ್ತಮ ಸೇವೆ ಸಿಗುವ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಆದರೆ ಇಲ್ಲೊಬ್ಬ ಮಹಿಳಾ ಐಎಎಸ್ ಅಧಿಕಾರಿ ಸರ್ಕಾರಿ ಆಸ್ಪತ್ರೆಯ ಬಂಡವಾಳ ಬಯಲು ಮಾಡಲು ರೋಗಿಯಂತೆ ಮಾರುವೇಷದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಒಂದೆಡೆ ವೈದ್ಯರ ಪತ್ತ ಇಲ್ಲ, ನರ್ಸ್‌ಗಳನ್ನು ಕೇಳುವವರೆ ಇಲ್ಲ. ಔಷಧಿಗಳು ಅವಧಿ ಮುಗಿದಿದೆ. ಶೌಚಾಲಯ ಸೇರಿದಂತೆ ಎಲ್ಲಾ ಕಡೆ ಗಲೀಜು. ಅಧಿಕಾರಿಯ ಸಹನೆ ಕಟ್ಟೆ ಒಡೆದಿದೆ. ಅಸಲಿ ಮುಖ ತೋರಿಸಿದಾಗ ಆಸ್ಪತ್ರೆ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ. ಹಾಜರಾತಿ ಹಾಕಿ ಎಲ್ಲೆಲ್ಲೋ ಇದ್ದ ವೈದ್ಯರು ಓಡೋಡಿ ಬಂದಿದ್ದಾರೆ. ಸರಿ ಮಾಡುತ್ತೇವೆ ಮೇಡಂ, ಇವತ್ತು ಸ್ವಲ್ಪ ಅಸ್ತವ್ಯಸ್ತ ಮೇಡಂ, ಇಲ್ಲಾಂದರೆ ಎಲ್ಲವೂ ಸೂಪರ್ ಮೇಡಂ ಎಂದು ಕತೆ ಹೇಳಲು ಮುಂದಾಗಿದ್ದಾರೆ. ಅದರೇ ಖುದ್ದು ಸರ್ಕಾರಿ ಆಸ್ಪತ್ರೆ ಅನುಭವ ಪಡೆದ ಅಧಿಕಾರಿ ಎಲ್ಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್‌ನ ದೀದಾ ಮಾಯಿ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದಿದೆ.

ಫಿರೋಜಾಬಾದ್ ಮಹಿಳಾ ಉಪ ಜಿಲ್ಲಾಧಿಕಾರಿ ಕೃತಿ ರಾಜ್‌ಗೆ ದೀದಿ ಮಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಚಾರಗಳ ಕುರಿತು ಹಲವು ದೂರುಗಳು ಬಂದಿತ್ತು. ಈ ಕುರಿತು ಕೃತಿ ರಾಜ್ ದೂರವಾಣಿ ಮೂಲಕ ಆಸ್ಪತ್ರೆ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಈ ವೇಳೆ ದಾಖಲೆ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ. ಆದರೂ ದೂರುಗಳು ಮಾತ್ರ ಬರುತ್ತಲೇ ಇತ್ತು. ಹೀಗಾಗಿ ಕೃತಿ ರಾಜ್ ಖುದ್ದು ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.

ಬೋಲ್ಡ್‌ & ಬ್ಯೂಟಿಫುಲ್‌ ಈ ಐಎಎಸ್‌ ಆಫೀಸರ್‌, ಸಖತ್ ಹಾಟ್ ಆಗಿರೋ ಪ್ರಿಯಾಂಕ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ!

ಉಪ ಜಿಲ್ಲಾಧಿಕಾರಿಯಾಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರೆ ಎಲ್ಲವೂ ಸರಿಯಾಗೇ ಇರಲಿದೆ. ಕಾರಣ ಭೇಟಿ ಮಾಹಿತಿ ಆಸ್ಪತ್ರೆ ಆಡಳಿತ ಮಂಡಳಿಗೆ ಸಿಗಲಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಇಡುತ್ತಾರೆ. ಇದರಿಂದ ಸಮಸ್ಯೆ ಇದ್ದರೂ ಬಹಿರಂಗವಾಗಲ್ಲ. ಹೀಗಾಗಿ ಕೃತಿ ರಾಜ್ ರೋಗಿಯಂತೆ ಮಾರುವೇಷದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದರೆ.

Scroll to load tweet…

ನಾಯಿ ಕಡಿತಕ್ಕೆ ಇಂಜೆಕ್ಷನ್ ಹಾಕಿಸಿಕೊಳ್ಳಲು ರೋಗಿಯಂತೆ ಆಸ್ಪತ್ರೆಗೆ ತೆರಳಿದ ಅಧಿಕಾರಿ ಮುಖಕ್ಕೆ ಮಾಸ್ಕ್ ಹಾಕಿದ್ದಾರೆ. ಹೀಗಾಗಿ ಸಿಬ್ಬಂದಿಗಳೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆಸ್ಪತ್ರೆ ದುರಾಡಳಿತ, ಅನಾಚರ ನೋಡಿ ಗಾಬರಿಯಾಗಿದ್ದಾರೆ. ಆಗಮಿಸಿದ ರೋಗಿಗಳು ವೈದ್ಯರಿಗಾಗಿ ಕಾಯುತ್ತಲೇ ಇದ್ದಾರೆ. ಎಲ್ಲಾ ಕಡೆ ಪರಿಶೀಲನೆ ನಡೆಸಿದ ಅಧಿಕಾರಿ, ಔಷಧಿ ಕೇಂದ್ರಕ್ಕೆ ತೆರಳಿದ್ದಾರೆ. ಈ ವೇಳೆ ತಾನೂ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ಅಂಕ ಗಳಿಸಿದ್ದ ಈತ ಈಗ ಐಎಎಸ್ ಅಧಿಕಾರಿ; ಯುಪಿಎಸ್‍ಸಿ ತಯಾರಿ ನಡೆಸುವವರಿಗೆ ಕಿವಿಮಾತು

ಗಾಬರಿಯಾದ ವೈದ್ಯರು, ಸಿಬ್ಬಂದಿಗಳು ಎರಡು ದಿನದಿಂದ ಸಿಬ್ಬಂದಿಗಳು ರಜೆಯಲ್ಲಿದ್ದಾರೆ. ಹೀಗಾಗಿ ಅಸ್ತವ್ಯಸ್ತವಾಗಿದೆ ಎಂದು ಕಾರಣ ನೀಡಲು ಮುಂದಾಗಿದ್ದಾರೆ. ಹಾಜರಾತಿ ಪರಿಶೀಲನೆ ಮಾಡಿದಾಗ, ಬಹುತೇಕ ಎಲ್ಲರೂ ಹಾಜರಾಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಾತ್ರ ವೈದ್ಯರೂ ಇಲ್ಲ, ಸಿಬ್ಬಂದಿಗಳು ಇಲ್ಲ. ಇತ್ತ ಔಷಧಿಗಳ ಅವಧಿ ಮುಕ್ತಾಯಗೊಂಡಿರುವುದು ಪತ್ತೆಯಾಗಿದೆ. ಎಲ್ಲರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿ ಬಿಸಿ ಮುಟ್ಟಿಸಿದ್ದಾರೆ. ಇದೀಗ ಈ ವಿಡಿಯೋ ಹರಿದಾಡುತ್ತಿದೆ.