ಆಂಧ್ರಪ್ರದೇಶದಲ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ತಿರುಪತಿಯಲ್ಲಿ ಭಕ್ತ ಪ್ರವಾಹ
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಬುಧವಾರ ಒಂದೇ ದಿನ ಒಂದೇ ದಿನ ಭಾರಿ ಪ್ರಮಾಣದ ಎನ್ನಬಹುದಾದ 81,930, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ.
ತಿರುಮಲ (ಮೇ.19): ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಬುಧವಾರ ಒಂದೇ ದಿನ ಒಂದೇ ದಿನ ಭಾರಿ ಪ್ರಮಾಣದ ಎನ್ನಬಹುದಾದ 81,930, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ.
ಹೀಗಾಗಿ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿಗೆ ಸವಾಲಾಗಿ ಪರಿಣಮಿಸಿದೆ.ಚುನಾವಣೆಗೆ ಮುನ್ನ ಸಾಮಾನ್ಯವಾಗಿ ಸುಮಾರು 60 ಸಾವಿರದ ಆಸುಪಾಸಲ್ಲಿ ಭಕ್ತರು ಭೇಟಿ ನೀಡುತ್ತಿದ್ದರು. ಆದರೆ ಮತದಾನ ಮುಗಿಯುತ್ತಿದ್ದಂತೆಯೇ ರಾಜಕೀಯ ನಾಯಕರು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಸಾಮಾನ್ಯ ಉಚಿತ ದರ್ಶನ ಪಡೆಯಲು ಭಕ್ತರು 24 ತಾಸಿಗೂ ಹೆಚ್ಚು ಸಮಯ ಆಗುತ್ತಿದೆ.
ರಾಹುಲ್ ಗಾಂಧಿ ಹಿಡಿದಿರುವುದು ಭಾರತ ಅಲ್ಲ, ಚೀನಾ ಸಂವಿಧಾನ ಪುಸ್ತಕ : ಹಿಮಂತ
ಇದೇ ವೇಳೆ, ಭಾನುವಾರ ರಜಾದಿನದಂದು ಇನ್ನಷ್ಟು ಭಕ್ತಸಮೂಹ ದೇಗುಲಕ್ಕೆ ಹರಿದು ಬರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಟಿಟಿಡಿ ಮುಖ್ಯಸ್ಥ ಧರ್ಮಾರೆಡ್ಡಿ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಖುದ್ದು ಭಕ್ತ ಸಮೂಹ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಹೆಚ್ಚಿನ ಭಕ್ತಗಣ ಹರಿದುಬಂದಿದ್ದರಿಂದ ದೇಗುಲದ ಅಲ್ಲಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆಗಳು ನಡೆದಿವೆ. ಹೀಗಾಗಿ ಇನ್ನು ಇಂಥ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಿಬ್ಬಂದಿಗೆ ಟಿಟಿಡಿ ಸೂಚಿಸಿದೆ ಹಾಗೂ ಭಕ್ತರಿಗೆ ಇಡೀ ದಿನ ಉಚಿತ ನೀರು ಹಾಗೂ ಆಹಾರ ಲಭ್ಯ ಇರುವಂತೆ ತಾಕೀತು ಮಾಡಿದೆ.