Asianet Suvarna News Asianet Suvarna News

UP Elections 2022: ಮಾಯಾವತಿ ಗೆ "ಪ್ಲಸ್" ನದ್ದೇ ಸಮಸ್ಯೆ!

* 90 ರ ದಶಕದಲ್ಲಿ ರಾಜಕೀಯ ಗುರು ಕಾನ್ಶಿರಾಮ್ ಜೊತೆ  ಯು ಪಿ ಯ ಹಳ್ಳಿ ಹಳ್ಳಿ ಗಳಿಗೆ ಸೈಕಲ್ ಮೇಲೆ ಸುತ್ತಾಡುತ್ತಿದ್ದ ಮಾಯಾವತಿ
* ತಿಲಕ್ ಅಂದರೆ ಬ್ರಾಹ್ಮಣರು ತರಾಜು ಅಂದರೆ ತಕ್ಕಡಿ ತೂಗುವ ಬನಿಯಾ
* 2007 ರಲ್ಲಿ ಬ್ರಾಹ್ಮಣರು ಮಾಯಾವತಿ ಜೊತೆ ಬರಲು ಮೂಲ ಕಾರಣ ಆಗ ಕಲ್ಯಾಣ ಸಿಂಗ್‌ರ ಪಕ್ಷಾಂತರ

UP Elections A Challenge For BSP Leader Mayawati pod
Author
Bangalore, First Published Jan 17, 2022, 12:57 PM IST

ಪ್ರಶಾಂತ್ ನಾತು,  ಇಂಡಿಯಾ ಗೇಟ್, ಸುವರ್ಣ ನ್ಯೂಸ್

ಉತ್ತರ ಪ್ರದೇಶದಂಥ ಪಕ್ಕಾ ಜಾತಿ ಬಾಹುಳ್ಯವೇ ಪ್ರಧಾನ ಆಗಿರುವ ರಾಜ್ಯದಲ್ಲಿ ಮಾಯಾವತಿ ಯಂಥ ಒಬ್ಬ ಅತ್ಯಂತ ಸಾಮಾನ್ಯ ದಲಿತ ಮನೆತನದ ಮಹಿಳೆ ಮುಖ್ಯಮಂತ್ರಿ (Chief Minister) ಆಗಿದ್ದು ನಮ್ಮ ಪ್ರಜಾಪ್ರಭುತ್ವ (Democracy) ಪ್ರಬುದ್ಧ ವಾಗುತ್ತಿದೆ ಎಂಬುದರ ಲಕ್ಷಣ. 90ರ ದಶಕದಲ್ಲಿ ರಾಜಕೀಯ ಗುರು ಕಾನ್ಶಿರಾಮ್ ಜೊತೆ  ಯು ಪಿ ಯ ಹಳ್ಳಿ ಹಳ್ಳಿ ಗಳಿಗೆ ಸೈಕಲ್ ಮೇಲೆ ಸುತ್ತಾಡುತ್ತಿದ್ದ ಮಾಯಾವತಿ 'ತಿಲಕ್ ತರಾಜು ಔರ್ ತಲವಾರ ಇನ್ ಕೋ ಮಾರೋ ಜೂತೆ ಚಾರ್ 'ಎಂದು ಘೋಷಣೆ ಕೂಗುತ್ತಿದ್ದರು.ತಿಲಕ್ ಅಂದರೆ ಬ್ರಾಹ್ಮಣರು ತರಾಜು ಅಂದರೆ ತಕ್ಕಡಿ ತೂಗುವ ಬನಿಯಾ ಗಳು ತಲವಾರ ಹಿಡಿಯುವ ಕ್ಷತ್ರಿಯರ ಬಗ್ಗೆ ಶ್ರೇಣೀಕೃತ ಜಾತಿ ವ್ಯವಸ್ಥೆ ಕಾರಣ ದಿಂದ ಮಾಯಾವತಿ ಕಿಡಿ ಕಾರುತ್ತಿದ್ದ ದಿನಗಳವು.ಆದರೆ ಬರೀ ದಲಿತರ ಮತ ಗಳಿಂದ ಮಾಯಾವತಿ 75ರ ಅಂಕಿ ದಾಟಲು ಸಾಧ್ಯ ಆಗಲಿಲ್ಲ. ಒಮ್ಮೆ ಬಿಜೆಪಿ ಇನ್ನೊಮ್ಮೆ ಸಮಾಜವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತೆ ವಿನಹ, ಸ್ವಂತ ಬಲ ವರ್ಧಿಸಲಿಲ್ಲ.ಆದರೆ 2007 ರ ಹೊತ್ತಿಗೆ ಮಾಯಾವತಿ ಏಕಾಏಕಿ ಬ್ರಾಹ್ಮಣರನ್ನು ಓಲೈಸಿ ಯುಪಿಯಲ್ಲಿ ಅಧಿಕಾರ ಹಿಡಿದರು.ಸೈದ್ಧಾಂತಿಕವಾಗಿ ಬ್ರಾಹ್ಮಣ್ಯದ ವಿರುದ್ಧ ಪುರೋಹಿತ ಶಾಹಿ ವ್ಯವಸ್ಥೆ ವಿರುದ್ಧ ಬಹುಜನರ ಪಕ್ಷ ಕಟ್ಟಿದ್ದ ಮಾಯಾವತಿ ಯು ಪಿ ಯಲ್ಲಿ 12 ಪ್ರತಿಶತ ಇರುವ ಬ್ರಾಹ್ಮಣರನ್ನು (Brahmins) ಜೊತೆಗಿಟ್ಟು ಕೊಂಡು ಏಕಾಂಗಿ ಆಗಿ ಗದ್ದುಗೆ ಏರಿದರು.

UP Elections: ಮತದಾರರ ಒಲವು ಯಾರ ಕಡೆ? ಹೀಗಿದೆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ

2007 ರಲ್ಲಿ ಬ್ರಾಹ್ಮಣರು ಮಾಯಾವತಿ (Mayavati) ಜೊತೆ ಬರಲು ಮೂಲ ಕಾರಣ ಆಗ ಕಲ್ಯಾಣ ಸಿಂಗ್ (Kalyan Singh) ರ ಪಕ್ಷಾಂತರ ಮತ್ತು ಅಟಲ್ ಬಿಹಾರಿ ವಾಜಪೇಯಿ (Atal Bihari Vajapayee) ಅನಾರೋಗ್ಯದ ಕಾರಣದಿಂದ ಬಿಜೆಪಿ ಕಳಾಹೀನ ಗೊಂಡಿತ್ತು ಮತ್ತು ಯಾದವ ಮುಸ್ಲಿಂ ಬಾಹುಳ್ಯದ ಸಮಾಜವಾದಿ ಪಕ್ಷದ ಮೇಲೆ  ಬ್ರಾಹ್ಮಣರು ತೀವ್ರ ಅಸಮಾಧಾನ ಗೊಂಡಿದ್ದರು.ಹೀಗಾಗಿ ಮಾಯಾವತಿ ಗೂ ಅಧಿಕಾರ ಬೇಕಿತ್ತು ಬ್ರಾಹ್ಮಣರಿಗೂ ಅಧಿಕಾರದಲ್ಲಿ ಪಾಲು ಬೇಕಿತ್ತು. ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅರುಣ್ ಜೇಟ್ಲಿ ಜೊತೆ ಆತ್ಮೀಯ ರಾಗಿದ್ದ ಸುಪ್ರೀಂ ಕೋರ್ಟ್ ವಕೀಲ ಸತೀಶ ಚಂದ್ರ ಮಿಶ್ರಾ ತಂತ್ರ ಗಾರಿಕೆಯೇ ಮಾಯಾವತಿ ಮತ್ತು ಬ್ರಾಹ್ಮಣರ ದೋಸ್ತಿಗೆ ಮುಖ್ಯ ಕಾರಣ.

ಆದರೆ ಅಧಿಕಾರದಲ್ಲಿದ್ದಾಗ ಮತ್ತೇ ಪಾರ್ಕು ಪುತ್ಥಳಿಗಳ ಮೇಲಷ್ಟೇ ಆಸಕ್ತಿ ತೋರಿಸಿದ  ಮಾಯಾವತಿ 2012 ರ ಚುನಾವಣೆಯಲ್ಲಿ ಹೀನಾಯವಾಗಿ ಸೋತರು.ಅಷ್ಟೇ ಅಲ್ಲ ನಂತರದ 10 ವರ್ಷಗಳಲ್ಲಿ ಮಾಯಾವತಿ ರಾಜಕಾರಣಕ್ಕೆ ಯಶಸ್ಸು ಸಿಕ್ಕಿಲ್ಲ

2014 ರಲ್ಲಿ ಲೋಕಸಭೆಯಲ್ಲಿ ಶೂನ್ಯ ಸ್ಥಾನ ಗಳಿಸಿದ ಮಾಯಾವತಿ 2019 ರಲ್ಲಿ ಅಖಿಲೇಶ್ ಯಾದವ್ ಜೊತೆ ಮೈತ್ರಿ ಮಾಡಿಕೊಂಡರು ಏನು ಲಾಭ ಆಗಲಿಲ್ಲ .ಮಾಯಾವತಿ ಸಮಸ್ಯೆ ಎಂದರೆ ಮಿತ್ರ ಪಕ್ಷಕ್ಕೆ ಮಾಯಾವತಿ ಯನ್ನು ಬೆಂಬಲಿಸುವ ದಲಿತ ಸಮುದಾಯದ ಮತಗಳು ಬಿದ್ದಿವೆ.ಆದರೆ ಬಹುಜನ ಸಮಾಜ ಪಕ್ಷಕ್ಕೆ ಮಿತ್ರರ ಮತ ಗಳು ದಂಡಿಯಾಗಿ ವರ್ಗಾವಣೆ ಆಗಿಲ್ಲ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿ ಇಂದ ಮಾಯವತಿಗೆ ಲಾಭಕ್ಕಿಂತ ನಷ್ಟ ವಾಗಿದ್ದೆ ಹೆಚ್ಚು.

Uttar Pradesh: 7 ಹಂತದ ಚುನಾವಣೆಯಿಂದ ಅದೃಷ್ಟ!

ಹೀಗಾಗಿ ಈಗ 2022 ರಲ್ಲಿ ಮಾಯಾವತಿಗೆ ತನ್ನ ಜೊತೆ ಇರುವ ದಲಿತರ ವೋಟುಗಳನ್ನು ಸೀಟು ಆಗಿ ಪರಿವರ್ತಿಸಬಲ್ಲ ಮಿತ್ರರು ಬೇಕಾಗಿದ್ದಾರೆ. ರಾಜಕೀಯ ಗಣಿತದ (Political Mathematics) ಭಾಷೆಯಲ್ಲಿ ಮಾಯವತಿಗೆ 'ಪ್ಲಸ್' ಅವಶ್ಯಕತೆ ಜಾಸ್ತಿಯಿದೆ.

Follow Us:
Download App:
  • android
  • ios