Asianet Suvarna News Asianet Suvarna News

ಯೋಗಿ ಸರ್ಕಾರ ರಚನೆಯಾದ್ರೆ ಅಲ್ಲಾಹು ಬಳಿ ಹೋಗುತ್ತೇನೆ, ಈಗೇನು ಮಾಡ್ತಾರೆ ಕವಿ ಮುನವ್ವರ್ ರಾಣಾ?

* ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಬಹುತೇಕ ನಿಶ್ಚಿತ
* ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ್ರೆ ಯುಪಿ ಬಿಡುತ್ತೇನೆಂದಿದ್ದ ಮುನವ್ವರ್ ರಾಣಾ
* ಈಗೇನು ಮಾಡ್ತಾರೆ ಈ ವಿವಾದಿತ ಕವಿ?

UP Election Results 2020 BJP leading in 250 seats Will Munawwar Rana Leave The State pod
Author
Bangalore, First Published Mar 10, 2022, 11:45 AM IST | Last Updated Mar 10, 2022, 1:02 PM IST

ಲಕ್ನೋ(ಮಾ.10): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (UP Vidhansabha Chunav 2022) ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫಲಿತಾಂಶವೂ ಹೊರ ಬೀಳಲಾರಂಭಿಸಿದೆ. ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದ್ದು, ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಖ್ಯಾತ ಕವಿ ಮುನವ್ವರ್ ರಾಣಾರ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದ್ದು, ಅವರು ಉತ್ತರ ಪ್ರದೇಶ ತೊರೆಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. 

ಹೌದು   ಎಕ್ಸಿಟ್ ಪೋಲ್ ಬಿಡುಗಡೆಯಾದ ನಂತರ, ಏಷ್ಯಾನೆಟ್ ನ್ಯೂಸ್ ಖ್ಯಾತ ಕವಿ ಮುನವ್ವರ್ ರಾಣಾ ಅವರೊಂದಿಗೆ ಸಂವಾದ ನಡೆಸಿತ್ತು. ಈ ವೇಳೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಯುಪಿ ಬಿಟ್ಟು ಹೋಗುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಏಷ್ಯಾನೆಟ್ ನ್ಯೂಸ್ ತಂಡ ಮುನವ್ವರ್ ರಾಣಾ ಅವರನ್ನು ಎಲ್ಲಿಗೆ ಹೋಗುತ್ತೀರಿ? ಎಂದು ಪ್ರಶ್ನಿಸಿದಾಗ ಯೋಗಿಯವರ ಸರ್ಕಾರ ರಚನೆಯಾದರೆ ಅಲ್ಲಾಹನ ಮೊರೆ ಹೋಗುತ್ತೇನೆ ಎಂದಿದ್ದರು. 

ಸದ್ಯ ಅವರ ಈ ಹೇಳಿಕೆಯೇ ಅವರನ್ನು ಭಾರೀ ಮುಜುಗರಕ್ಕೀಡು ಮಾಡಿದೆ. ಇಗಾಗಲೇ ಯೋಗಿ ನೇತೃತ್ವದ ಬಿಜೆಪಿ ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ 279 ಸ್ಥಾನಗಳಲಲ್ಇ ಮುನ್ನಡೆ ಸಾಧಿಸಿದೆ. ಗೆಲುವಿಗೆ ಬೇಕಾದ ಬಹುಮತ ಸಾಧಿಸಿದ್ದು, ಮತಗಟ್ಟೆ ಸಮೀಕ್ಷೆಗಳಲ್ಲಿ ನೀಡಲಾದ ಸಂಖ್ಯೆಗಿಂತಲೂ ಹೆಚಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಕವಿ ಮುನ್ನವರ್ ರಾಣಾ ಏನು ಮಾಡ್ತಾರೆ ಎಂಬ ಸವಾಲೆದ್ದಿದೆ. ತಮ್ಮ ಮಾತಿನಂತೆ ಉತ್ತರ ಪ್ರದೇಶವನ್ನು ತೊರೆಯುತ್ತಾರಾ? ಅಥವಾ ಈ ಮಾತುಗಳನ್ನು ಹಿಂಪಡೆದು ಯುಪಿಯಲ್ಲೇ ಉಳಿಯುತ್ತಾರಾ? ಎಂಬುವುದನ್ನು ಕಾಲವೇ ಉತ್ತರಿಸಲಿದೆ. 

ಅಲ್ಲಾಹು ಬಳಿ ಹೋಗುತ್ತೇನೆ ಎಂದಿದ್ದ ಮುನವ್ವರ್ ರಾಣಾ

ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೆ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅದರ ನಂತರ ಏಷ್ಯಾನೆಟ್ ತಂಡವು ಖ್ಯಾತ ಕವಿ ಮುನವ್ವರ್ ರಾಣಾ ಅವರೊಂದಿಗಿನ ಸಂವಾದದ ಸಮಯದಲ್ಲಿ, ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾದರೆ ನೀವು ಎಲ್ಲಿಗೆ ಹೋಗುತ್ತೀರಿ? ಎಂದು ಪ್ರಶ್ನಿಸಿತ್ತು. ಈ ಪ್ರಶ್ನೆಗೆ ಉತ್ತರವಾಗಿ, ತಾನೆಲ್ಲಿಗೆ ಹೋಗುತ್ತೇನೆ ಎಂದು ಹೇಳಲಾಗುವುದಿಲ್ಲ. ಇದೀಗ ನನ್ನ ಆರೋಗ್ಯ ಕೆಟ್ಟಿದೆ, ನಾನು ಅಲ್ಲಾನ ಸ್ಥಳಕ್ಕೆ ಹೋಗುತ್ತೇನೆ ಎಂದು ತೋರುತ್ತದೆ ಎಂದಿದ್ದರು

ಯುಪಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರು ಪ್ರತಿಪಕ್ಷಗಳ ಬಗ್ಗೆ ಹೇಳಿಕೆ ನೀಡಲು ಹಿಂಜರಿಯುವುದಿಲ್ಲ, ಹೀಗಿರುವಾಗಲೇ ವಿವಾದಗಳಿಂದಲೇ ಸದ್ದು ಮಾಡುತ್ತಿದ್ದ ಖ್ಯಾತ ಕವಿ ಮುನವ್ವರ್ ರಾಣಾ ಯುಪಿ ವಿಧಾನಸಭಾ ಚುನಾವಣೆಗೂ ಮುನ್ನವೇ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. . ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾದರೆ ಯುಪಿ ತೊರೆಯುವುದಾಗಿ ಹೇಳಿದ್ದರು. ಯೋಗಿ ಆದಿತ್ಯನಾಥ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದಾಗಿ ರಾಣಾ ಹೇಳಿದ್ದು ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಇದು ಬಿಜೆಪಿಗೆ ನಾಚಿಕೆಗೇಡಿನ ಸಂಗತಿ ಎಂದರು

ಕವಿ ಮುನವ್ವರ್ ರಾಣಾ ಅವರು ಬಿಜೆಪಿ ನನಗೆ ಕಿರುಕುಳ ನೀಡಿಲ್ಲ, ಆದರೆ ಯೋಗಿ ತನ್ನ ವಿರುದ್ಧ ಕೇಸ್ ಮಾಡಿ, ರೇಡ್ ಮಾಡಿದ್ದಾರೆ, ಮಗನಿಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಸಿದ್ಧಾಂತಗಳು ಪರಸ್ಪರ ಘರ್ಷಣೆಯಾಗುತ್ತವೆ, ಆದರೆ ಇಲ್ಲಿ ದ್ವೇಷದ ಮೂಲಕ, ಸಾಮಾನ್ಯ ಮತ್ತು ಬಡವರನ್ನು ಮಾಫಿಯಾದಂತೆ ನಡೆಸಿಕೊಳ್ಳಲಾಗುತ್ತದೆ. ಇದು ನಾಚಿಕೆಗೇಡಿನ ಸಂಗತಿ. ಇದರೊಂದಿಗೆ ಬಿಜೆಪಿಗೂ ಇದು ನಾಚಿಕೆಗೇಡಿನ ಸಂಗತಿ ಎಂದು ಕಮಲಪಾಳಯವನ್ನು ಅವರು ದೂರಿದ್ದರು. 

Latest Videos
Follow Us:
Download App:
  • android
  • ios