UP Elections: ಕಾಂಗ್ರೆಸ್ ಚೇತರಿಕೆ ಕಂಡರೆ ದಿಲ್ಲಿಯಲ್ಲಿ ಹೆಚ್ಚಲಿದೆ ಪ್ರಿಯಾಂಕಾ ರಾಜಕೀಯ ಮಹತ್ವ
ಒಂದೆರಡು ಬಾರಿ ರಾಹುಲ್ ಗಾಂಧಿ (Rahul Gandhi) ಕಾಂಗ್ರೆಸ್ (Congress) ನಲ್ಲಿ ಹೊಸ ಜೀವ ತುಂಬಲು ಪ್ರಯತ್ನಿಸಿದರು ಉಪ ಯೋಗ ಆಗಲಿಲ್ಲ.ಕೊನೆಗೆ ರಾಹುಲ್ ಗಾಂಧಿ 2017 ರಲ್ಲಿ ಅಖಿಲೇಶ ಯಾದವ್ ಜೊತೆ ಹೋದರು ಕೂಡ ಇಬ್ಬರು ನಷ್ಟ ಅನುಭವಿಸಿದರು.
ನವದೆಹಲಿ (ಜ. 24): ಉತ್ತರ ಪ್ರದೇಶದಲ್ಲಿ (Uttar Pradesh) ಗ್ರೌಂಡ್ ರಿಪೋರ್ಟ್ ಗಮನಿಸಿದರೆ ಹಣಾಹಣಿ ಇರುವುದು ಯೋಗಿ ಆದಿತ್ಯನಾಥ ಮತ್ತು ಅಖಿಲೇಶ (Akhilesh Yadav) ನಡುವೆ.ಆದರೆ ಈ ಫೈಟ್ ಅಲ್ಲಿ ಮಾಯಾವತಿ ಯ ಬಿ ಎಸ್ ಪಿ ಮತ್ತು ಪ್ರಿಯಾಂಕಾ ಗಾಂಧಿಯ ಕಾಂಗ್ರೆಸ್ ಎಷ್ಟು ವೋಟು ಮತ್ತು ಸೀಟು ತೆಗೆದು ಕೊಳ್ಳುತ್ತವೆ ಎನ್ನುವುದು ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.
ಹಾಗೆ ನೋಡಿದರೆ 1989 ರಿಂದ ಮಂಡಲ ಮತ್ತು ಕಮಂಡಲ ಪೊಲಿಟಿಕ್ಸ್ ನಲ್ಲಿ ಅಪ್ಪಚ್ಚಿಯಾಗಿ ನೆಲ ಕಚ್ಚಿದ್ದ ಕಾಂಗ್ರೆಸ್ ಆನಂತರ ಯು ಪಿ ಯಲ್ಲಿ ಮೇಲೆಳಲು ಸಾಧ್ಯವೇ ಆಗಿಲ್ಲ.ಯು ಪಿ ಯಲ್ಲಿ ಅವ್ಯಾಹತವಾಗಿ ಬ್ರಾಹ್ಮಣ ಬನಿಯಾ ಮುಖ್ಯಮಂತ್ರಿ ಗಳನ್ನು ಕೊಡುತ್ತಾ ಹೋಗಿದ್ದ ಕಾಂಗ್ರೆಸ ಗೆ ಮಂಡಲ ಕಾರಣದಿಂದ ಬೀಸಿದ ಗಾಳಿ ಎದುರಿಸಿ ನಿಲ್ಲಲು ಸಾಧ್ಯವೇ ಆಗಲಿಲ್ಲ.ಬಿಜೆಪಿ ಕಲ್ಯಾಣ ಸಿಂಗ್ ರಂಥ ಹಿಂದುಳಿದ ನಾಯಕರನ್ನು ಮುಂದಿಟ್ಟು ಮಂಡಲ ರಾಜಕಾರಣ ವನ್ನು ಎದುರಿಸಿತು.ಆದರೆ ಕಾಂಗ್ರೆಸ್ ಗೆ ಸಾಧ್ಯ ಆಗಲಿಲ್ಲ.
ಯು ಪಿ ಯಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಅಂದರೆ ಬ್ರಾಹ್ಮಣ ಬನಿಯಾ ಠಾಕೂರ ಮೇಲು ಜಾತಿಗಳು ಮುಸ್ಲಿಮರು ಮತ್ತು ದಲಿತರು.ಆದರೆ ದಲಿತರು ಮಾಯಾವತಿ ಕಡೆ ಮುಸ್ಲಿಮರು ಯಾದವರ ಸಮಾಜವಾದಿ ಪಕ್ಷದ ಕಡೆ ಮತ್ತು ಬ್ರಾಹ್ಮಣರು ಬಿಜೆಪಿ ಕಡೆ ವಾಲಿ ದ್ದರಿಂದ ಕಾಂಗ್ರೆಸ್ ಗೆ ಪಕ್ಕಾ ವೋಟ್ ಬ್ಯಾಂಕ್ ಉಳಿದಿಲ್ಲ.
UP Elections 2022: ಮಾಯಾವತಿಗೆ "ಪ್ಲಸ್'ನದ್ದೇ ಸಮಸ್ಯೆ!
ಒಂದೆರಡು ಬಾರಿ ರಾಹುಲ್ ಗಾಂಧಿ ಕಾಂಗ್ರೆಸ್ ನಲ್ಲಿ ಹೊಸ ಜೀವ ತುಂಬಲು ಪ್ರಯತ್ನಿಸಿದರು ಉಪ ಯೋಗ ಆಗಲಿಲ್ಲ.ಕೊನೆಗೆ ರಾಹುಲ್ ಗಾಂಧಿ 2017 ರಲ್ಲಿ ಅಖಿಲೇಶ ಯಾದವ್ ಜೊತೆ ಹೋದರು ಕೂಡ ಇಬ್ಬರು ನಷ್ಟ ಅನುಭವಿಸಿದರು.ಹೀಗಾಗಿ ಯು ಪಿ ಆಸೆಯನ್ನು ರಾಹುಲ್ ಕೈ ಬಿಟ್ಟಿದ್ದರು.2019 ರಲ್ಲಿ ಅಮೇಥಿ ಜನತೆ ರಾಹುಲ್ ರನ್ನು ಸೋಲಿಸಿದ ನಂತರವೇ ಪ್ರಿಯಾಂಕಾ ಗಾಂಧಿ ಕೈ ಗೆ ಯು ಪಿ ಹೊಣೆಗಾರಿಕೆ ವಹಿಸಲಾಯಿತು.
ಪ್ರಿಯಾಂಕಾ ಲಾವೋ ದೇಶ ಬಚಾವೋ ಎಂದು ಆಗಾಗ ಕಾಂಗ್ರೆಸ್ಸಿಗರು ಘೋಷಣೆ ಕೂಗುತ್ತಾರೆ.ಆದರೆ ಅದಕ್ಕೂ ಮೊದಲು ಪ್ರಿಯಾಂಕಾ ಯು ಪಿ ಯಲ್ಲಿ ಕಾಂಗ್ರೆಸ್ ಗೆ ಚೇತರಿಕೆ ನೀಡಬೇಕು.ಯು ಪಿ ಯಲ್ಲಿ ಕಾಂಗ್ರೆಸ್ ಗೆ ಒಂದು ರಾಜಕೀಯ ಸ್ಥಿತಿ ಕಲ್ಪಿಸಬೇಕು
ಕಳೆದ ಎರಡು ವರ್ಷ ಗಳಲ್ಲಿ ಪ್ರಿಯಾಂಕಾ ಹಾಥರಸ ಘಟನೆ ಮತ್ತು ಸೋನಭದ್ರ ಹತ್ಯೆ ಗಳ ನಂತರ ಪ್ರಿಯಾಂಕಾ ಯು ಪಿ ಯಲ್ಲಿ ರಾಜಕೀಯ ವಾಗಿ ಸಾಕಷ್ಟು ಸಕ್ರಿಯ ರಾಗಿದ್ದಾರೆ.ಸುದ್ದಿ ಯಲ್ಲಿದ್ದಾರೆ.ಆದರೆ ಅದು ಸೀಟು ಮತ್ತು ವೋಟಿ ನಲ್ಲಿ ಪ್ರತಿಫಲನ ಆಗಬೇಕು
ಯು ಪಿ ಯಲ್ಲಿ ಕಾಂಗ್ರೆಸ್ ಗೆ 8 ರಿಂದ 10 ಸೀಟು ಗಳು ಬರಬಹುದು ಎಂದು ಸರ್ವೇ ಹೇಳುತ್ತಿವೆ. ಹಾಗಾಗಿಯೇ ಎಲ್ಲೂ ಕೂಡ ಪ್ರಿಯಾಂಕಾ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಕೊಂಡಿಲ್ಲ.ಆದರೆ ಈಗ ಬಾಯಿ ತಪ್ಪಿ ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡು ನಾನು ಹಾಗೆ ಹೇಳೇ ಇಲ್ಲ ಎಂದು ಅನ್ನುತ್ತಿದ್ದಾರೆ.
ಪ್ರಿಯಾಂಕಾ ಬಿಜೆಪಿಯ ಹಿಂದೂ ಧ್ರುವೀಕರಣ ಮತ್ತು ಅಖಿಲೇಶರ ಹಿಂದುಳಿದ ಧ್ರುವೀಕರಣ ದ ನಡುವೆ ಮಹಿಳಾ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಹೊರಟಿದ್ದಾರೆ.ಒಟ್ಟು ಸೀಟುಗಳಲ್ಲಿ 40 ಶೇಕಡಾ ಸೀಟು ಮಹಿಳಾ ಅಭ್ಯರ್ಥಿಗೆ ಕೊಡುವುದಾಗಿ ಪ್ರಿಯಾಂಕಾ ಹೇಳಿದ್ದು ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
Amar Jawan Jyoti: ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ
ಒಂದು ವೇಳೆ ಪ್ರಿಯಾಂಕಾ ಸ್ವಲ್ಪ ಯು ಪಿ ಯಲ್ಲಿ ಕಾಂಗ್ರೆಸ್ ಗೆ ಚೇತರಿಕೆ ನೀಡಿದರು ಸಾಕು ದಿಲ್ಲಿಯಲ್ಲಿ ಪ್ರಿಯಾಂಕಾ ರಾಜಕೀಯ ಮಹತ್ವ ಜಾಸ್ತಿ ಆಗಲಿದೆ. ಈಗಾಗಲೇ ರಾಜಸ್ಥಾನ ಪಂಜಾಬ್ ಉತ್ತರಾಖಂಡ್ ಗೋವಾ ಗಳಲ್ಲಿ ಒಳ ಜಗಳ ಬಿಡಿಸುವಲ್ಲಿ ಸಕ್ರಿಯ ಭೂಮಿಕೆ ನಿರ್ವಹಿಸಿದ್ದ ಪ್ರಿಯಾಂಕಾ ರ ಯು ಪಿ ಯಲ್ಲಿ ಏನು ಸಾಧನೆ ಮಾಡಿ ತೋರಿಸುತ್ತಾರೆ ಅನ್ನುವುದು ಕಾಂಗ್ರೆಸ್ ನ ಅಖಿಲ ಭಾರತೀಯ ರಾಜಕಾರಣದ ಮೇಲು ಪರಿಣಾಮ ಬೀರಲಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ