Asianet Suvarna News Asianet Suvarna News

Amar Jawan Jyoti : ತಪ್ಪು ಗ್ರಹಿಕೆ ಬೇಡ, ಅಮರ್ ಜವಾನ್ ಜ್ಯೋತಿ ಆರಿಸುತ್ತಿಲ್ಲ ಎಂದ ಕೇಂದ್ರ ಸರ್ಕಾರ

ಕಳೆದ ಐವತ್ತು ವರ್ಷಗಳಿಂದ ಇಂಡಿಯಾ ಗೇಟ್ ಬಳಿ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ
ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ಲೀನ ಮಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ
ಅಮರ್ ಜವಾನ್ ಜ್ಯೋತಿ ನಂದಿಸುತ್ತಿಲ್ಲ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ

Amar Jawan Jyoti flame at India Gate would be merged with the National War Memorials torch san
Author
Bengaluru, First Published Jan 21, 2022, 10:06 AM IST

ನವದೆಹಲಿ(ಜ. 21): ಕಳೆದ 50 ವರ್ಷಗಳಿಂದ ಬಿಸಿಲು, ಗಾಳಿ, ಮಳೆ ಚಳಿಗೆ ನಿರಂತರವಾಗಿ ಉರಿಯುತ್ತಿದ್ದ ಅಮರವಾಗಿರುವ ದೇಶದ ಹೆಮ್ಮೆಯ ಸೈನಿಕರ ಪ್ರತೀಕವಾಗಿರುವ ಅಮರ್ ಜವಾನ್ ಜ್ಯೋತಿ (Amar Jawan Jyoti) ಇನ್ನು ಮುಂದೆ ನವೆದೆಹಲಿಯ ಇಂಡಿಯಾ ಗೇಟ್ (India Gate) ಹುಲ್ಲುಹಾಸಿನ ಬಳಿ ಕಾಣಸಿಗುವುದಿಲ್ಲ. ದೇಶದ ಗಣರಾಜ್ಯೋತ್ಸವಕ್ಕೆ (Republic Day)ಕೆಲ ದಿನಗಳಿರುವ ವೇಳೆ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ (National War Memorial Flame) ಜ್ಯೋತಿಯಲ್ಲಿ ಅದನ್ನು ಲೀನ ಮಾಡಲಾಗುತ್ತದೆ. ಈ ನಡುವೆ ಕೇಂದ್ರ ಸರ್ಕಾರ ಅಮರ ಜವಾನ್ ಜ್ಯೋತಿಯನ್ನು ಆರಿಸಿ ಹಾಕುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಸರ್ಕಾರ, ಜ್ಯೋತಿಯನ್ನು ಆರಿಸುತ್ತಿಲ್ಲ (not being extinguished). ಇದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ. ಇನ್ನು ಮುಂದೆ ಅಮರರಾದ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ ಎಂದು ಹೇಳಿದೆ.

ಶುಕ್ರವಾರ ಮಧ್ಯಾಹ್ನ 3.30ಕ್ಕೆ ಈ ಕಾರ್ಯಕ್ರಮ ನೆರವೇರಲಿದ್ದು, ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಮಕೃಷ್ಣ (Air Marshal Balabadhra Radha Krishna) ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ಸಮಯದಲ್ಲಿ ಎರಡು ಜ್ವಾಲೆಗಳನ್ನು ನಿರಂತರವಾಗಿ ಉರಿಸುವುದು ಬಹಳ ಕಷ್ಟರವಾಗುತ್ತಿದೆ ಆ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದಲ್ಲದೆ, ಸೇನಾ ಮೂಲಗಳೂ ಕೂಡ ದೇಶದ ಹುತಾತ್ಮ ಸೈನಿಕರಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.

ಸೇನಾ ಸಂಬಂಧಿತ ಕಾರ್ಯಕ್ರಮಗಳ ವೇಳೆ ಗಣ್ಯರು ಯುದ್ಧಸ್ಮಾರಕಕ್ಕೆ ತೆರಳದೆ ಹೋಗುವುದೇ ಇಲ್ಲ. ಇಂಥ ಸಮಯದಲ್ಲಿ ಇಂಡಿಯಾ ಗೇಟ್ ನಲ್ಲಿ ಪ್ರತ್ಯೇಕ ಜ್ವಾಲೆಯ ಅಗತ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಇನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಈಗಾಗಲೇ ಇಂಡಿಯಾ ಗೇಟ್ ನಲ್ಲಿ ಕೆತ್ತಲಾಗಿರುವ ಹುತಾತ್ಮರ ಹೆಸರುಗಳನ್ನೂ ಸಹ ಹೊಂದಿದೆ. ಅದರೊಂದಿಗೆ 1947-48ರ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಕ್ಷಣಾ ಸಿಬ್ಬಂದಿಯ ಹೆಸರು, ಭಯೋತ್ಪಾದಕ ವಿರೋಧಿ ಚಟುವಟಿಕೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರನ್ನೂ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ.
 


ಹೇಗಿದೆ ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿ: ಅಂದಾಜು 40 ಎಕರೆ ಪ್ರದೇಶದಲ್ಲಿ 176 ಕೋಟಿ ರೂಪಾಯಿ ವೆಚ್ಚದಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದ್ದು 2019ರ ಫೆಬ್ರವರಿಯಲ್ಲಿ ನರೇಂದ್ರ ಮೋದಿ ಇದರ ಉದ್ಘಾಟನೆಯನ್ನು ಮಾಡಿದ್ದರು. ಆ ಬಳಿಕ ಇಂಡಿಯಾ ಗೇಟ್ ಬಳಿ ನಡೆಯುತ್ತಿದ್ದ ಎಲ್ಲಾ ಮಿಲಿಟರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರ ಮಾಡಲಾಗಿತ್ತು. ಯುದ್ಧ ಸ್ಮಾರಕದಲ್ಲಿ, ಶಾಶ್ವತ ಜ್ವಾಲೆಯನ್ನು ಕೇಂದ್ರ 15.5 ಮೀ ಒಬೆಲಿಸ್ಕ್‌ನ ಕೆಳಗೆ ಇರಿಸಲಾಗಿದೆ. ನಾಲ್ಕು ಕೇಂದ್ರೀಕೃತ ವೃತ್ತಗಳಿವೆ - "ಅಮರ್ ಚಕ್ರ", "ವೀರತಾ ಚಕ್ರ", "ತ್ಯಾಗ ಚಕ್ರ" ಮತ್ತು "ರಕ್ಷಕ ಚಕ್ರ", ಅಲ್ಲಿ 25,942 ಸೈನಿಕರ ಹೆಸರುಗಳನ್ನು ಗ್ರಾನೈಟ್ ಕಲ್ಲಿನ ಮೇಲೆ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. 1914 ಮತ್ತು 1921 ರ ನಡುವೆ ಮೊದಲ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ಬ್ರಿಟೀಷ್ ಸರ್ಕಾರವು ಇಂಡಿಯಾ ಗೇಟ್ ಅನ್ನು ನಿರ್ಮಿಸಿದೆ. 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದ ಬಳಿಕ ಇಂಡಿಯಾ ಗೇಟ್ ನ ಮುಂದೆ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸಲಾಗಿತ್ತು.

ತಪ್ಪು ಗ್ರಹಿಕೆಗೆ ಕೇಂದ್ರದ ಸ್ಪಷ್ಟೀಕರಣ: ಅಮರ್ ಜವಾನ್ ಜ್ಯೋತಿಯನ್ನು ಆರಿಸಲಾಗುತ್ತಿದೆ ಎನ್ನುವ ತಪ್ಪುಗ್ರಹಿಕೆಗೆ ಕೇಂದ್ರ ಸ್ಪಷ್ಟೀಕರಣ ನೀಡಿದ್ದು, ಇದನ್ನು ಯುದ್ಧಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ ಎಂದು ಹೇಳಿದೆ. 1971 ಹಾಗೂ ಇತರ ಕೆಲವು ಯುದ್ಧಗಳಲ್ಲಿ ಮಡಿದ ಸೈನಿಕರ ಹೆಸರು ಮಾತ್ರವೇ ಅಮರ್ ಜವಾನ್ ಜ್ಯೋತಿಯ ಬಳಿಯಲ್ಲಿದೆ. ಆದರೆ, ಯುದ್ಧ ಸ್ಮಾರಕದಲ್ಲಿ ಈವರೆಗೂ ಎಲ್ಲಾ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಹೆಸರುಗಳಿದೆ. ಆ ಕಾರಣದಿಂದಾಗಿ ಜ್ಯೋತಿ ಅಲ್ಲಿರುವುದೇ ಸೂಕ್ತ ಎಂದು ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದೆ. ತಾನು ಅಧಿಕಾರದಲ್ಲಿದ್ದ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು ಎನ್ನುವ ಯೋಚನೆಯನ್ನೇ ಹೊಂದಿರದ, 7 ದಶಕಗಳ ಕಾಲ ಸುಮ್ಮನೆ ಕುಳಿತಿದ್ದ ಪಕ್ಷದಿಂದ ನಾವು ಕಲಿಯುವ ಅಗತ್ಯವಿಲ್ಲ ಎಂದು ಹೇಳಿದೆ.

ಕೆಲವರಿಗೆ ದೇಶಭಕ್ತಿ ಅರ್ಥವಾಗುವುದಿಲ್ಲ: ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi), ಕೆಲವರಿಗೆ ದೇಶಭಕ್ತಿ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ. "ನಮ್ಮ ವೀರ ಸೈನಿಕರಿಗಾಗಿ ಉರಿಯುತ್ತಿದ್ದ ಅಮರ ಜ್ವಾಲೆ ಇಂದು ನಂದುತ್ತಿರುವುದು ಅತ್ಯಂತ ದುಃಖದ ಸಂಗತಿ" ಎಂದು ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
 

 

Follow Us:
Download App:
  • android
  • ios