Asianet Suvarna News Asianet Suvarna News

ಯುಪಿ ಸಿಎಂ ಮಂಡ್ಯ ಭೇಟಿ ರದ್ದು: ಮಹಾಕುಂಭಮೇಳಕ್ಕೆ ಪತ್ರದ ಮೂಲಕ ಯೋಗಿ ಶುಭಹಾರೈಕೆ

Triveni Sangama Maha Kumbha Mela 2022: ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಮಹಾಕುಂಭಮೇಳಕ್ಕೆ  ಅದ್ಧೂರಿ ಚಾಲನೆ ಸಿಕ್ಕಿದೆ

UP CM Yogi Adityanath not to participate in KR Pet Triveni Sangama Maha Kumbha Mela 2022  Mandya mnj
Author
First Published Oct 15, 2022, 4:36 PM IST | Last Updated Oct 15, 2022, 4:38 PM IST

 ಮಂಡ್ಯ (ಅ. 15): ಮಲೆ ಮಹದೇಶ್ವರರು ಪ್ರಥಮ ಬಾರಿ ಪವಾಡ ಮಾಡುವುದರೊಂದಿಗೆ ಪವಾಡಪುರುಷರೆನಿಸಿಕೊಂಡ ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಮಹಾಕುಂಭಮೇಳಕ್ಕೆ (Maha Kumbha Mela) ಅದ್ಧೂರಿ ಚಾಲನೆ ಸಿಕ್ಕಿದೆ.  ಅ. 16 ಭಾನುವಾರದದಂದು ಮಹಾಕುಂಭಮೇಳದ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನೆರವೇರಿಸಬೇಕಿತ್ತು.  ಆದರೆ  ಕಾರ್ಯಕ್ರಮಕ್ಕೆ ಗೈರಾಗುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraj Bommai) ಯೋಗಿ ಆದಿತ್ಯನಾಥ್‌ ಪತ್ರ ಬರೆದಿದ್ದಾರೆ. 

ಮಹದೇಶ್ವರ ಕುಂಭ ಮೇಳದಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿರುವ ಯೋಗಿ "ಉತ್ತರ ಪ್ರದೇಶದ ಪ್ರಯಾಗ್ ರಾಜ್ 3 ಪವಿತ್ರ ನದಿಗಳ ಸಂಗಮ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಕುಂಭ ಮೇಳ ಆಯೋಜಿಸಲಾಗುತ್ತದೆ. ಕರ್ನಾಟಕದ ತ್ರಿವೇಣಿ ಸಂಗಮದಲ್ಲೂ ಕುಂಭ ಮೇಳ ಆಯೋಜಿಸಿರುವುದು ತಿಳಿದಾಗ ಹೃದಯ ತುಂಬಿ ಬಂತು" ಎಂದಿದ್ದಾರೆ

"ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಸಂಗಮದಲ್ಲಿ ನಡೆಯುವ ಕುಂಭ ಮೇಳಕ್ಕೆ ಬರಲು ಇಚ್ಛಿಸಿದ್ದೆನು. ಆದರೆ ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಾಗಾಗಿ ಕರ್ನಾಟಕದ ಕುಂಭ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಗೈರಾದ ಬಗ್ಗೆ ವಿವರಿಸುತ್ತಾ ಕುಂಭಮೇಳ ಯಶಸ್ವಿಗೆ ಶುಭ ಹಾರೈಸಿರುವ ಯೋಗಿ ಆದಿತ್ಯನಾಥ್ ಈ ಕುಂಭ ಮೇಳವೂ ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆ ಸಾಧಿಸಲಿ ಎಂದಿದ್ದಾರೆ. 

ಕೆ.ಆರ್‌.ಪೇಟೆಯಲ್ಲಿ ಅದ್ಧೂರಿ ಮಹಾಕುಂಭ: ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಸಂಗಮ ಕ್ಷೇತ್ರವೆನಿಸಿರುವ ತ್ರಿವೇಣಿ ಸಂಗಮದಲ್ಲಿ ಎರಡನೇ ಮಹಾಕುಂಭ ಮೇಳ ಮೇಳೈಸಿದ್ದು, ರಾಜ್ಯದ ವಿವಿಧ ಮಠಗಳಿಂದ ಆಗಮಿಸಿದ ಮಠಾಧೀಶರು, ಸಾಧು-ಸಂತರು, ರಾಜಕೀಯ ಪಕ್ಷಗಳ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಹಸ್ರಾರು ಭಕ್ತರು ಕುಂಭಮೇಳದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಹಾಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ತಮಿಳುನಾಡಿನಲ್ಲಿ ವಕ್ಫ್ ಆಸ್ತಿ ಕಬಳಿಸಿದ ಬೆನ್ನಲ್ಲೇ ಅಲರ್ಟ್ ಆದ ಯೋಗಿ , ಕೆರಳಿದ ಒವೈಸಿ!

ತ್ರಿವೇಣಿ ಸಂಗಮಕ್ಕೆ 70 ಸಾರಿಗೆ ಬಸ್ಸುಗಳ ವ್ಯವಸ್ಥೆ: ಮಹಾಕುಂಭಮೇಳ ಆಯೋಜನೆಗೊಂಡಿದ್ದ ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿರುವ ತ್ರಿವೇಣಿ ಸಂಗಮಕ್ಕೆ ಸಾರ್ವಜನಿಕರು ಬರಲು ಅನುಕೂಲವಾಗುವಂತೆ 70 ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕೆ.ಆರ್‌.ಪೇಟೆ ತಾಲೂಕಿನ ವಿವಿಧ ಗ್ರಾಮಗಳಿಂದ ಜನರನ್ನು ಸಾರಿಗೆ ಬಸ್‌ಗಳ ಮೂಲಕ ತಾಲೂಕಿನ ಸೋಮನಹಳ್ಳಿಯ ಸಂಗಮೇಶ್ವರ ಪ್ರೌಢಶಾಲೆಯ ಆವರಣಕ್ಕೆ ಕರೆತರಲಾಗುತ್ತಿತ್ತು. ಅಲ್ಲಿಂದ ಶಾಲಾ ಬಸ್‌ಗಳಲ್ಲಿ ಜನರನ್ನು ತ್ರಿವೇಣಿ ಸಂಗಮಕ್ಕೆ ತಂದು ಬಿಡಲಾಗುತ್ತಿತ್ತು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು: ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿ ಮಹಾಕುಂಭಮೇಳ ಉದ್ಘಾಟನೆಗೊಂಡ ನಂತರ ಮುಖ್ಯ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಜನಮನಸೂರೆಗೊಂಡವು. ಮಳವಳ್ಳಿ ಎಂ.ಮಹದೇವಸ್ವಾಮಿ ಅವರ ಜನಪದ ಗೀತಾ ಗಾಯನ ನಡೆಸಿಕೊಟ್ಟರು.  ಮಲೆ ಮಹದೇಶ್ವರ ಸ್ವಾಮಿ ಕುರಿತಾದ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಜನರಲ್ಲಿ ಭಕ್ತಿಲೋಕಕ್ಕೆ ಕೊಂಡೊಯ್ದರು. ನಂತರ ಪ್ರೊ.ಎಂ.ಕೃಷ್ಣೇಗೌಡ ತಂಡದಿಂದ ಹಾಸ್ಯ ಕಾರ್ಯಕ್ರಮ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ನಂತರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಸ್ಥಳೀಯ ಕಲಾವಿದರಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

Latest Videos
Follow Us:
Download App:
  • android
  • ios