ಊರಿಗೆ ಅರಸನಾದರೂ ತಾಯಿಗೆ ಮಗ: ಆಸ್ಪತ್ರೆಗೆ ದಾಖಲಾದ ಅಮ್ಮನ ಆರೋಗ್ಯ ವಿಚಾರಿಸಿದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿನ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದರು.
ರಿಷಿಕೇಶ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿನ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯ ಆರೋಗ್ಯ ವಿಚಾರಿಸಿದರು. ಯೋಗಿ ಆದಿತ್ಯನಾಥ್ ಅವರ ಪೂರ್ವಾಶ್ರಮದ ತಾಯಿ ಗಾಯತ್ರಿ ದೇವಿ ಅವರು ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಕ್ಕಾಗಿ ರಿಷಿಕೇಶದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಸುಮಾರು ಮೂರು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಸಮಯ ಕಳೆದರು. ಇದೇ ವೇಳೆ ರುದ್ರ ಪ್ರಯಾಗ್‌ನಲ್ಲಿ ನಡೆದ ಭೀಕರ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಕೂಡ ಯೋಗಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದರು. ಅಲ್ಲದೇ ಗಾಯಾಳುಗಳಿಗೆ ಸರ್ಕಾರದ ವತಿಯಿಂದ ಸಾಧ್ಯವಾಗುವ ನೆರವನ್ನು ನೀಡುವುದಾಗಿ ಭರವಸೆ ನೀಡಿದರು. ಶನಿವಾರ ನಡೆದ ಈ ದುರಂತದಲ್ಲಿ ಇವರೆಗೆ 15 ಜನ ಸಾವನ್ನಪ್ಪಿದ್ದಾರೆ.
ರಾಹುಲ್ ಗಾಂಧಿ ಆಕಸ್ಮಿಕ ಹಿಂದೂ ಎಂದ ಯೋಗಿ: ಆಪ್ ಕಿ ಅದಾಲತ್‌ನಲ್ಲಿ ಇನ್ನು ಏನೇನು ಹೇಳಿದ್ರು ಯುಪಿ ಸಿಎಂ
ಉತ್ತರ ಪ್ರದೇಶದ ರುದ್ರಪ್ರಯಾಗ್‌ನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲರೂ ಉತ್ತರ ಪ್ರದೇಶ ನೋಯ್ಡಾ, ಝಾನ್ಸಿ ಹಾಗೂ ಮಥುರಾ ನಿವಾಸಿಗಳಾಗಿದ್ದರು. ಇದಕ್ಕೂ ಮೊದಲು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯೋಗಿ ಆದಿತ್ಯನಾಥ್ ಅವರ ತಾಯಿ ಗಾಯತ್ರಿ ದೇವಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚೆ ನಡೆಸಿದ್ದರು.
ಯೋಗಿ ಆದಿತ್ಯನಾಥ್ ಅವರ ಮೂಲ ಹೆಸರು ಅಜಿತ್ ಮೋಹನ್ ಸಿಂಗ್ ಬಿಸ್ತ್, 2017ರಿಂದಲೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಆದಿತ್ಯನಾಥ್, 1980ರಲ್ಲೇ ಮನೆ ತೊರೆದಿದ್ದು, ಅಯೋಧ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರ ನಾಥ ಸಂಪ್ರದಾಯದ ಮಠ ಆಗಿರುವ ಗೋರಖನಾಥ ಮಠದ ಮಹಾಂತ್‌ನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Narendra Modi: ಮೋದಿ ಬಳಿಕ ಉತ್ತರಾಧಿಕಾರಿಯಾಗ್ತಾರಾ ಯೋಗಿ!? ಮೋದಿ-ಯೋಗಿ..ಎಷ್ಟು ಸಾಮ್ಯತೆ? ಏನು ವ್ಯತ್ಯಾಸ ?