Watch | ಬಿಜೆಪಿ ಸ್ಟಿಕ್ಕರ್‌ ಅಂಟಿಸಿದ ಬೊಲೆರೊ ಬೈಕ್‌ಗೆ ಡಿಕ್ಕಿ, 2 ಕಿ.ಮೀ ಎಳೆದೊಯ್ದ ಭೀಕರ ಅಪಘಾತದ ವಿಡಿಯೋ ವೈರಲ್!

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಬಿಜೆಪಿ ಸ್ಟಿಕರ್ ಅಂಟಿಸಿದ್ದ ಬೊಲೆರೊ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಎರಡು ಕಿಮೀ ದೂರ ಎಳೆದೊಯ್ದಿದೆ. ಘಟನೆಯಲ್ಲಿ ಬೈಕ್ ಸವಾರ ಸುಖ್‌ಬೀರ್ ಮೃತಪಟ್ಟಿದ್ದಾರೆ.

UP Bolero With BJP Sticker Hits Biker in Sambhal Drags Him For 2 KM Horrifying Video Goes Viral rav

ಬಿಜೆಪಿ ಸ್ಟಿಕರ್ ಅಂಟಿಸಿದ್ದ ಅಪರಿಚಿತ ಬೊಲೆರೊ ವಾಹನವೊಂದು ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಸುಮಾರು ಎರಡು ಕಿಮೀ ದೂರದವರೆಗೆ ಎಳೆದೊಯ್ದ ಭೀಕರ ಅಪಘಾತ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ತೀವ್ರ ಗಾಯಗೊಂಡು ಮೃತಪಟ್ಟಿರುವ ಬೈಕ್ ಸವಾರ ಶಹಜಾದ್‌ಖೇರಾ ಗ್ರಾಮದ ನಿವಾಸಿ ಸುಖ್‌ಬೀರ್ ಎಂದು ಗುರುತಿಸಲಾಗಿದೆ. ಭೀಕರ ಅಪಘಾತದ ಮಾಹಿತಿ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು. ತೀವ್ರ ಗಾಯಗೊಂಡಿದ್ದ ಸುಖಬೀರ್‌ನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

7 ವರ್ಷದಲ್ಲಿ 813 ಅಪಘಾತ, 1473 ಜನರ ಸಾವು, ವಿಮಾನ ಪ್ರಯಾಣ ಎಷ್ಟು ಸೇಫ್?

ಘಟನೆ ನಡೆದಿದ್ದು ಹೇಗೆ?

ಭಾನುವಾರ ಸಂಜೆ ಬಸ್ಲಾ ಗ್ರಾಮದ ಅತ್ತೆಯ ಮನೆಯಿಂದ ಬೈಕ್‌ನಲ್ಲಿ ಸುಖಬೀರ್ ಹಿಂತಿರುಗುತ್ತಿದ್ದರು. ಈ ವೇಳೆ ಸಂಭಾಲ್ ಜಿಲ್ಲೆಯ ಸದರ್ ಕೊಟ್ವಾಲಿ ಅಡಿಯಲ್ಲಿ ಅಸ್ಮೋಲಿ ಬೈಪಾಸ್‌ನಕಡೆಯಿಂದದ ವೇಗವಾಗಿ ಬಂದ ಬೊಲೆರೋ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ವಾಜಿದ್‌ಪುರಂ ಬಳಿ ಬೈಕ್‌ ವಾಹನದಡಿ ಸಿಲುಕಿ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ವರೆಗೆ ಎಳೆದೊಯ್ದಿದೆ. ಇದರಿಂದ ರಸ್ತೆಯಲ್ಲಿದ್ದ ಬೈಕ್ ಘರ್ಷಣೆಗೆ ಕಿಡಿಗಳು ಹಾರಿವೆ. ಭೀಕರ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿದ ಬಿಜೆಪಿ ಸ್ಟಿಕ್ಕರ್ ಮತ್ತು ಗ್ರಾಮ ಪ್ರಧಾನ ಎಂಬ ಹೆಸರಿನ ವಾಹನ ಸ್ಥಳೀಯ ಗ್ರಾಮದ ಸರಪಂಚ್‌ಗೆ ಸೇರಿದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಚಾಲಕನ ಪತ್ತೆಗೆ ಮುಂದಾಗಿರುವ ಪೊಲೀಸರು.

ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಕೊಡಗಿನ ಯೋಧ ಹುತಾತ್ಮ!

Latest Videos
Follow Us:
Download App:
  • android
  • ios