ಭಾವ್‌ನಗರ್(ನ.16): ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ, ಕೈಯಲ್ಲಿ ಖಡ್ಗ ಹಿಡಿದು ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.

ಭಾವ್‌ನಗರ್‌ದಲ್ಲಿ ಶ್ರೀ ಸ್ವಾಮಿ ನಾರಾಯಣ್ ಗುರುಕುಲ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ವೇದಿಕೆ ಮೇಲೆ ಸಾಂಸ್ಕೃತಿಕ ನೃತ್ಯ ಮಾಡಿದರು.

ರಾಜಸ್ಥಾನ ಹಾಗೂ ಗುಜರಾತ್‌ನ ಪ್ರಸಿದ್ಧ ಸಾಂಸ್ಕೃತಿಕ ನೃತ್ಯವಾದ 'ತಲ್ವಾರ್ ರಾಸ್' ನೃತ್ಯದಲ್ಲಿ ಸಹ ಕಲಾವಿದರೊಂದಿಗೆ ಸ್ಮೃತಿ ಇರಾನಿ ಖಡ್ಗ ಝಳಪಿಸಿದರು.

ತಮ್ಮ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಆಕರ್ಷವಾಗಿ ತಿರುಗಿಸಿದ ಸ್ಮೃತಿ ಇರಾನಿ, ಸಹಕಲಾವಿದರು ಹೇಳಿದ ಹಾಗೆ ನೃತ್ಯ ಮಾಡುತ್ತಾ ಗಮನ ಸೆಳೆದರು.

ನನ್ನ ಪ್ರೀತಿ, ನನ್ನ ಜೀವ: ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದೆ ಸ್ಮೃತಿ ಇರಾನಿ ಫೋಟೋ!