ನವದೆಹಲಿ[ಮೇ.29]: ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಗೆದ್ದಿರುವ ಸ್ಮೃತಿ ಇರಾನಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಷ್ಟು ದಿನ ಲೋಕಿಸಭಾ ಚುನಾವಣೆ, ಪ್ರಚಾರ, ಸಮಾವೇಶ ಎಂದು ಅಮೇಥಿ ರಾಜಕೀಯದಲ್ಲಿ ಬ್ಯೂಸಿಯಾಗಿದ್ದ ಸ್ಮೃತಿ ಇರಾನಿ ಸದ್ಯ ತಮ್ಮ ಖಾಸಗಿ ಫೋಟೋ ಒಂದರಿಂದ ನೆಟ್ಟಿಗರ ಮನ ಗೆದ್ದಿದ್ದಾರೆ.

ಹೌದು ರಾಜಕೀಯ ಹಾಗೂ ನಟನೆಯ ಹೊರತಾಗಿ ಸ್ಮೃತಿ ಇರಾನಿಗೆ ಖಾಸಗಿ ಜೀವನವಿದೆ. ಹೆಂಡತಿ, ತಾಯಿ, ಸೊಸೆ ಇಂತಹ ಹಲವಾರು ಮಹತ್ವದ ಜವಾಬ್ದಾರಿಗಳಿವೆ. ರಾಜಕೀಯ ಜಂಜಾಟಗಳಲ್ಲಿ ಬ್ಯೂಸಿಯಾಗಿದ್ದ ಸ್ಮೃತಿ ಇರಾನಿ ಕೊಂಚ ಬಿಡುವು ಮಾಡಿಕೊಂಡು ತಮ್ಮ ಮೂವರು ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ.

ಸ್ಮೃತಿ ಇರಾನಿ ತಮ್ಮ ಇನ್ಸ್ಟಾಗ್ರಂ ಖಾತೆಯಲ್ಲಿ ತಮ್ಮ ಮೂವರು ಮಕ್ಕಳೊಂದಿಗಿರುವ ಪೋಟೋ ಒಂದನ್ನು ಶೇರ್ ಮಾಡುತ್ತಾ 'ನನ್ನ ಪ್ರೀತಿ, ನನ್ನ ಜೀವ, ನನ್ನ ಮಕ್ಕಳು' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ನಗುಮೊಗದ, ಖುಷಿಯಲ್ಲಿ ತೇಲಾಡುತ್ತಿರುವ ಸ್ಮೃತಿ ಇರಾನಿ ಭುಜದೆತ್ತರಕ್ಕೆ ಬೆಳೆದಿರುವ ಮಕ್ಕಳೊಂದಿಗೆ ನಿಂತಿರುವುದನ್ನು ನೋಡಬಹುದು.

 
 
 
 
 
 
 
 
 
 
 
 
 

My love , my life , my babies ❤️

A post shared by Smriti Irani (@smritiiraniofficial) on May 28, 2019 at 8:38pm PDT

ತಾಯಿ ಜೊತೆ ಸಮಯ ಕಳೆದ ಮಗ ಜೋಹ್ರ್ ಇರಾನಿ, ಮಗಳು ಜೋಯ್ಶ್ ಇರಾನಿ ಹಾಗೂ ಮಲ ಮಗಳು ಶಾನೆಲ್ ಇರಾನಿ ಮುಖದಲ್ಲೂ ಸಂತೃಪ್ತಿಯ ನಗು ಕಾಣಬಹುದು.