ಕೋವಿಡ್ ಸಾಂಕ್ರಾಮಿಕದಿಂದಾಗಿ 2 ವರ್ಷಗಳ ಕಾಲ ವರ್ಚುವಲ್ ಆಗಿ ನಡೆಯುತ್ತಿದ್ದ ಯೋಗ ಕಾರ್ಯಕ್ರಮ ಈ ಬಾರಿ ಭೌತಿಕ ರೂಪದಲ್ಲಿ ನಡೆಯಲಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ನವದೆಹಲಿ (ಮೇ.24): ಜೂ.21ರ ಯೋಗ ದಿನದ ಮುಖ್ಯ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದಾಗಿ 2 ವರ್ಷಗಳ ಕಾಲ ವರ್ಚುವಲ್ ಆಗಿ ನಡೆಯುತ್ತಿದ್ದ ಕಾರ್ಯಕ್ರಮ ಈ ಬಾರಿ ಭೌತಿಕ ರೂಪದಲ್ಲಿ ನಡೆಯಲಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ಯೋಗ ದಿನಕ್ಕೆ 25 ದಿನಗಳು ಬಾಕಿ ಇರುವಾಗ ಕೌಂಟ್‌ಡೌನ್ ಆರಂಭಕ್ಕೋಸ್ಕರ ಮೇ 27ಕ್ಕೆ ಹೈದರಾಬಾದ್‌ನಲ್ಲಿ ಯೋಗ ಪ್ರದರ್ಶನ ನಡೆಸಲಾಗುತ್ತದೆ. ಇದರಲ್ಲಿ ಸುಮಾರು 10 ಸಾವಿರ ಜನ ಭಾಗಿಯಾಗಲಿದ್ದಾರೆ. ಇದಕ್ಕೂ ಮೊದಲು 50 ದಿನ ಬಾಕಿ ಇರುವಾಗ ಮೇ 2ರಂದು ಶಿವದೋಲ್‌ನಲ್ಲಿ ಮತ್ತು 75 ದಿನಗಳು ಬಾಕಿ ಇರುವಾಗ ಏ.7ರಂದು ಕೆಂಪುಕೋಟೆಯಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು. ಜೂ.21ರಂದು ಮೈಸೂರಿನ ಮುಖ್ಯ ಕಾರ್ಯಕ್ರಮ ಅಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಯೋಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
PM Narendra Modi: ಜೂ. 21ರಂದು ಮೈಸೂರಿಗೆ ಪ್ರಧಾನಿ ಆಗಮನ: ಕಾರಣ ಏನು ಗೊತ್ತಾ?
ಭಾರತೀಯ ವಿದೇಶಿ ಮಿಶನ್ ಅಡಿಯಲ್ಲಿ ಜಪಾನ್‌ನಿಂದ ಆರಂಭಿಸಿ ಸೂರ್ಯ ಚಲಿಸುವ ದಿಕ್ಕಿನಲ್ಲೇ ಬರುವ ದೇಶಗಳಲ್ಲಿ ಯೋಗ ಕಾರ್ಯಕ್ರಮ ನಡೆಸಲಾಗುವುದು. ಪ್ರತಿ ದೇಶದಲ್ಲೂ ಅಲ್ಲಿನ ಸ್ಥಳೀಯ ಸಮಯ 6 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಇದರಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗಿಯಾಗಲಿವೆ. ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಹಾಗಾಗಿ ಈ ದಿನ 75 ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಮೂಲಕ ವಿಶ್ವಮಟ್ಟದಲ್ಲಿ ಭಾರತವನ್ನು ಬ್ರ್ಯಾಂಡ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಭರ್ಜರಿ ಸಿದ್ಧತೆ: 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರು ಸಜ್ಜಾಗುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವುದು ಸ್ಥಳೀಯ ನಾಯಕರಲ್ಲಿ ಹುರುಪು ತಂದಿದೆ. ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಯೋಗ ನಡೆಯೋದು ಅರಮನೆ ಆವರಣವೋ ಅಥವಾ ರೇಸ್ ಕೋರ್ಸ್ ನಲ್ಲಿಯೋ ಇನ್ನಷ್ಟೇ ತೀರ್ಮಾನ ಆಗಬೇಕಿದೆ. ಮೈಸೂರಿನಲ್ಲಿ 2017 ರಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 54 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಒಂದೇ ಸ್ಥಳದಲ್ಲಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಬಾಬಾ ರಾಮ್ ದೇವ್ ಉತ್ತರ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸುವ ಮೂಲಕ ಗಿನ್ನಿಸ್ ಪುಟ ಸೇರಿದ್ದರು.
ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಕೇಸಿಗೆ ಟ್ವಿಸ್ಟ್: ಲವ್ವಿಡವ್ವಿಗೆ ಮಾಡಿದ ನಾಟಕ ಅಬ್ಬಬ್ಬಾ...!
ಈ ಬಾರಿ ಯೋಗ ನಗರಿಯೂ ಆಗಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಪ್ರದರ್ಶನ ಮೆರುಗು ಪಡೆದುಕೊಳ್ಳುತ್ತಿದೆ. ಅದಕ್ಕೆ ಕಾರಣ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೈಸೂರಿನಲ್ಲಿ ಭಾಗವಹಿಸುತ್ತಿರುವುದು. ಈ ಭಾರಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ಮೈಸೂರಿನಲ್ಲಿ ಎರಡು ಸ್ಥಳ ಗುರುತಿಸಲಾಗಿದೆ. ಖುದ್ಧು ಪ್ರಧಾನಮಂತ್ರಿಗಳು ಆಗಮಿಸುತ್ತಿರುವ ಕಾರಣ ಭದ್ರತೆಯ ದೃಷ್ಟಿಯಿಂದ ಯಾವ ಸ್ಥಳದಲ್ಲಿ ಯೋಗವನ್ನ ಮಾಡಬೇಕೆಂಬುದು ಜಿಲ್ಲಾಡಳಿಯ ಚಿಂತನೆ ನಡೆಸುತ್ತಿದೆ.
