Asianet Suvarna News Asianet Suvarna News

ಕನ್ನಡಿಗರ ಸೇವೆಗೆ ಅವಕಾಶ ಸಿಕ್ಕಿದ್ದು ಸೌಭಾಗ್ಯ: ಆರ್‌ಸಿ ಧನ್ಯವಾದ

ತಮಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಪ್ರಮುಖ ಪಾತ್ರ ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಧನ್ಯವಾದವನ್ನು ಅರ್ಪಿಸಿದ ರಾಜೀವ್‌ ಚಂದ್ರಶೇಖರ್‌ 

Union Minister Rajeev Chandrashekhar Talks Over Kannadigas grg
Author
First Published Feb 9, 2024, 4:27 AM IST

ನವದೆಹಲಿ(ಫೆ.09):  ‘ರಾಜ್ಯಸಭಾ ಸದಸ್ಯನಾಗಿ ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ’ ಎಂದು ಸಂಸತ್‌ ಸದಸ್ಯತ್ವದಿಂದ ನಿವೃತ್ತಿ ಹೊಂದುತ್ತಿರುವ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕೃತಜ್ಞತೆ ಸಲ್ಲಿಸಿದರು.

ರಾಜ್ಯಸಭೆಯಲ್ಲಿ ಶುಕ್ರವಾರ ವಿದಾಯ ಭಾಷಣ ಮಾಡಿದ ಅವರು, ‘ಇದುವರೆಗೂ 18 ವರ್ಷಗಳ ಕಾಲ ರಾಜ್ಯಸಭಾ ಸದಸ್ಯನಾಗಿ ರಾಷ್ಟ್ರಸೇವೆ ಮಾಡಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ. ಪ್ರಮುಖವಾಗಿ ನಾನು ಪಕ್ಷೇತರ ಸದಸ್ಯನಾಗಿದ್ದಾಗ 2ಜಿ ಹಗರಣ, ಡೇಟಾ ಸುರಕ್ಷತೆ ಮುಂತಾದ ವಿಷಯಗಳಲ್ಲಿ ಸದನದಲ್ಲಿ ಮಾಹಿತಿ ಹಂಚಿಕೊಂಡಿದ್ದು ಸ್ಮರಣೀಯವಾಗಿದೆ. ಇದುವರೆಗೂ ರಾಜ್ಯಸಭೆಯಲ್ಲಿ ಹಿರಿಯರು ಹಾಕಿಕೊಟ್ಟ ಮಾದರಿಯನ್ನು ಮೀರಿಲ್ಲವೆಂದು ಪರಿಭಾವಿಸುತ್ತೇನೆ ಮತ್ತು ಸದನದಲ್ಲಿ ನನ್ನ ನಡವಳಿಕೆ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

ವಿಕ್ಷಿತ್‌ ಭಾರತದ ನಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದೇವೆ: ರಾಜೀವ್‌ ಚಂದ್ರಶೇಖರ್‌

ಇದೇ ವೇಳೆ ತಮಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಪ್ರಮುಖ ಪಾತ್ರ ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಧನ್ಯವಾದವನ್ನು ಅರ್ಪಿಸಿದರು.

Follow Us:
Download App:
  • android
  • ios