Asianet Suvarna News Asianet Suvarna News

ಮೋದಿ ನಾಯಕತ್ವದ ಗುಣಮಟ್ಟ ಎತ್ತರಿಸಿದ ಧೀಮಂತ : ಆರ್‌ಸಿ

  • ನಾಯಕತ್ವದ ಗುಣಮಟ್ಟಎತ್ತರಿಸಿದ ಧೀಮಂತ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ
  •  ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು ಎಂದು ಸಾರಿ ಹೇಳಿದ ಕೋವಿಡ್‌
  • ಪುಣ್ಯ ನಮಗೆ ಮೋದಿ ನಾಯಕತ್ವ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
Union Minister Rajeev Chandrasekhar wishes PM Narendra Modi on his birthday snr
Author
Bengaluru, First Published Sep 17, 2021, 1:57 PM IST

 ರಾಜೀವ್‌ ಚಂದ್ರಶೇಖರ್‌, ಕೇಂದ್ರ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್‌ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರು

ಕೇಂದ್ರ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ನನ್ನ ರಾಜ್ಯವಾದ ಕರ್ನಾಟಕಕ್ಕೆ ನಾನು ಹಿಂತಿರುಗಿ ಹೋಗಿದ್ದು ಜನಾಶೀರ್ವಾದ ಯಾತ್ರೆಗಾಗಿ. ಈ ಯಾತ್ರೆ 6 ಜಿಲ್ಲೆಗಳಿಗೆ ನನ್ನನ್ನು ಕರೆದೊಯ್ಯಿತು. ನಾಲ್ಕು ದಿನಗಳ ಈ ಯಾತ್ರೆಯು ನೂರಾರು ನಾಗರಿಕರು, ಸಾಮಾಜಿಕ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿತು.

ನನ್ನನ್ನು ಆಶೀರ್ವದಿಸಲು ಹಾಗೂ ಶುಭ ಕೋರಲು ಬಂದವರಿಂದ ಯಾತ್ರೆಯುದ್ದಕ್ಕೂ ಒಂದೇ ಪ್ರತಿಕ್ರಿಯೆ ಇತ್ತು. ಅದು- ಪ್ರಧಾನಿ ಹಾಗೂ ನಾಯಕ ನರೇಂದ್ರ ಮೋದಿ ಅವರಲ್ಲಿ ಜನರು ಕಂಡುಕೊಂಡ ನಂಬಿಕೆ, ವಿಶ್ವಾಸ, ಹೆಮ್ಮೆ. ತನ್ನ ಜೀವನವನ್ನು ಬದಲಿಸಲು ಸರ್ಕಾರ ನೀಡಿದ ನೆರವಿನ ಕಾರಣಕ್ಕೆ ನನಗೆ ಧನ್ಯವಾದ ಹೇಳಿದ ಶಿವಮೊಗ್ಗ ರೈತನಿಂದ; ಶಿರಸಿಯ ಉಜ್ವಲಾ ಫಲಾನುಭವಿ ಗೃಹಿಣಿವರೆಗೆ; ಆಶೀರ್ವಾದ ಬೇಡಲು ನಾನು ತೆರಳಿದ ವಿವಿಧ ಮಠಗಳ ಸ್ವಾಮೀಜಿಗಳವರೆಗೆ; ನಾನು ಭೇಟಿ ಮಾಡಿ ಧನ್ಯವಾದ ಹೇಳಿದ ಆರೋಗ್ಯ ಸೇನಾನಿಗಳು ಹಾಗೂ ಕಾರ್ಯಕರ್ತರವರೆಗೆ ಎಲ್ಲರಲ್ಲೂ ತಾವು ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ಕಲ್ಪನೆಯ ಪಾಲುದಾರರು ಎಂಬ ಭಾವನೆ ಇತ್ತು. ತಮ್ಮ ಹಾಗೆಯೇ ನಾನು ಕೂಡ ನರೇಂದ್ರ ಮೋದಿ ಅವರ ತಂಡದಲ್ಲಿದ್ದೇನೆ ಎಂಬ ಕಾರಣಕ್ಕೆ ಅಪಾರ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದ ನನಗೆ ಅವರಿಂದ ದೊರಕಿತು.

ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’

ಸೆ.17- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಅದು ವಿಶ್ವಕರ್ಮ ದಿನ ಕೂಡ ಹೌದು. ನರೇಂದ್ರ ಮೋದಿ ಅವರ ಜೀವನ ಹಾಗೂ 20 ವರ್ಷಗಳ ಆಡಳಿತವನ್ನು ಬೇರಾವುದರಿಂದಲೂ ಈ ರೀತಿ ಬಣ್ಣಿಸಲಾಗದು. ಸರ್ಕಾರದ ನಾಯಕತ್ವ, ಕಠಿಣ ಪರಿಶ್ರಮ, ನೀತಿ ನಿರೂಪಣೆಯಲ್ಲಿ 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹಾಗೂ 7 ವರ್ಷ ಪ್ರಧಾನಿಯಾಗಿ ಅವರು ಹೊಸ ಗುಣಮಟ್ಟವನ್ನೇ ಸೃಷ್ಟಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲರ ಮಾನದಂಡವನ್ನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದಾರೆ.

ಭಾರತೀಯ ರಾಜಕಾರಣದ ಮೇಲೆ ಮೋದಿ ಅವರ ಪರಿಣಾಮ ಇಷ್ಟಕ್ಕೇ ನಿಲ್ಲುವುದಿಲ್ಲ. ಕಾಯಂ ರಾಜಕೀಯ ವಂಶಪಾರಂಪರ‍್ಯ, ಭ್ರಷ್ಟಾಚಾರ, ನಮ್ಮ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಯಥಾಸ್ಥಿತಿ ವಾದ, 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದುಕೊಂಡ ಬಳಿಕ ಭಯೋತ್ಪಾದನೆಗೆ ಸಂಬಂಧಿಸಿ ನೀಡುತ್ತಾ ಬಂದಿದ್ದ ಪ್ರತಿಕ್ರಿಯೆ ಸೇರಿದಂತೆ ಹಲವು ವಿಷಯಗಳಲ್ಲಿನ ತಪ್ಪುಕಲ್ಪನೆಗಳನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನ ವಿಶ್ವಾಸ, ಮಹತ್ವಾಕಾಂಕ್ಷೆ ಹಾಗೂ ಆಶೋತ್ತರಗಳನ್ನು ಮರುಸ್ಥಾಪಿಸಿದ್ದಾರೆ. 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿರುವ ಹಾಗೂ ಭವಿಷ್ಯದ ಭಾರತಕ್ಕೆ ನಮ್ಮ ದೂರದೃಷ್ಟಿಯನ್ನು ನೆಡುತ್ತಿರುವ ಈ ಕ್ಷಣಕ್ಕೆ ಈ ಸಾಧನೆಗಳು ಗಮನಾರ್ಹವಾದುವು.

ಪ್ರಧಾನಿ ನರೇಂದ್ರ ಮೋದಿ ಅವರ 7ನೇ ವರ್ಷ ಇದು. 2019ರ ಮೇ 30ರಂದು ಮೋದಿ ಅವರು ಪ್ರಚಂಡ, ಐತಿಹಾಸಿಕ ಜನಾದೇಶವನ್ನು ಪಡೆದಿದ್ದರು. ಇತ್ತೀಚಿನ ಇತಿಹಾಸದಲ್ಲೇ ಯಾವುದೇ ನಾಯಕನಿಗೆ ಸಿಕ್ಕ ಅತ್ಯಂತ ನಿರ್ಣಾಯಕ ಬಹುಮತ ಅದು. ರಾಜಕೀಯ ನಾಯಕ ಹಾಗೂ ರಾಜಕೀಯ ಪಕ್ಷವೊಂದಕ್ಕೆ 3 ದಶಕಗಳಲ್ಲೇ ದೊರೆತ ಸ್ಪಷ್ಟಬಹುಮತ. 61 ಕೋಟಿ ಜನರು ಮತದಾನ ಮಾಡಿದ ಬಳಿಕ ಸಿಕ್ಕ ಈ ಜನಾದೇಶ ಮೋದಿ ಅವರ ಮೊದಲ 5 ವರ್ಷಗಳ ಆಡಳಿತಕ್ಕೆ ಸಿಕ್ಕ ಸಮರ್ಥನೆ. ಪಟ್ಟಭದ್ರ ಹಿತಾಸಕ್ತಿಗಳ ಸಮ್ಮಿಶ್ರ ಕೂಟ ನಿರಂತರವಾಗಿ ಸುಳ್ಳು ಹಾಗೂ ಮಿಥ್ಯಾಪವಾದಗಳನ್ನು ಮಾಡುತ್ತಾ ಬಂದಿದ್ದರೂ ದೊರೆತ ಈ ಗೆಲುವು ಅದು.

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

ಮೋದಿ ಅವರ ರಾಜಕೀಯ ಹಾಗೂ ಆಡಳಿತ ತತ್ವ ಸ್ಥಿರವಾಗಿದೆ. ಅದು ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವುದು. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌.

2ನೇ ಅವಧಿಗೆ ಆಯ್ಕೆಯಾದ ಬಳಿಕ ಮೋದಿ ಅವರು ಮೊದಲು ಮಾಡಿದ ಭಾಷಣಗಳ ಪೈಕಿ ಒಂದರಲ್ಲಿ ಅವರು ಹೀಗೆ ಹೇಳಿದ್ದರು. ‘‘ನವ ಭಾರತದ ದೂರದೃಷ್ಟಿಪ್ರಸಿದ್ಧ ಅಧ್ಯಾತ್ಮ ಚಿಂತಕ, ಸಾಮಾಜಿಕ ಸುಧಾರಕ, ಕವಿ ಶ್ರೀ ನಾರಾಯಣಗುರು ಅವರ ಉದಾತ್ತ ಚಿಂತನೆಗಳಿಂದ ಪ್ರೇರಿತವಾಗಿದೆ: ‘ಜಾತಿ-ಭೇದಂ ಮತ- ದ್ವೇಷಂ ಅದುಮಲ್ಲದೇ ಸರ್ವರಂ ಸೋದರ- ತ್ವಯನ್‌ ವಾದುನ್‌ ಮಾತ್ರುಕಸ್ಥಾನ ಮಾನಿತ್‌.’

ಇದರರ್ಥ: ಜಾತಿ ಹಾಗೂ ಧರ್ಮದ ತಾರತಮ್ಯಗಳಿಂದ ಮುಕ್ತರಾಗಿ ಜನರು ಸೋದರರಂತೆ ಬಾಳುವ ಜಾಗವೇ ಆದರ್ಶಮಯ ಸ್ಥಳ.

ನವಭಾರತದ ಹಾದಿಯಲ್ಲಿ ಗ್ರಾಮೀಣ ಭಾರತ ಬಲಿಷ್ಠವಾಗಿರಲಿದೆ. ನಗರ ಭಾರತ ಸಬಲೀಕರಣಗೊಳ್ಳಲಿದೆ. ನವಭಾರತದ ದಾರಿಯಲ್ಲಿ ಉದ್ಯಮ ಭಾರತ ಹೊಸ ಎತ್ತರ ಮುಟ್ಟಲಿದೆ. ಯುವ ಭಾರತದ ಕನಸುಗಳನ್ನು ಈಡೇರಿಸಲಾಗುತ್ತದೆ. ನವಭಾರತದ ಜಾಡಿನಲ್ಲಿ ಎಲ್ಲ ವ್ಯವಸ್ಥೆಗಳೂ ಪಾರದರ್ಶಕವಾಗಿರಲಿವೆ. ಪ್ರಾಮಾಣಿಕ ದೇಶವಾಸಿಯ ಗೌರವ ಇಮ್ಮಡಿಗೊಳ್ಳಲಿದೆ. ನವಭಾರತದ ಹೆಜ್ಜೆಯಲ್ಲಿ 21ನೇ ಶತಮಾನದ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತದೆ. ಬಲಿಷ್ಠ ಭಾರತಕ್ಕೆ ಬೇಕಾದ ಎಲ್ಲ ಸಂಪನ್ಮೂಲವನ್ನೂ ಕ್ರೋಢೀಕರಿಸಲಾಗುತ್ತದೆ.’’

ದಶಕಗಳ ಕಾಲ ಬಹುತೇಕ ಸರ್ಕಾರಗಳಿಂದ ನೀಡಲಾಗದ್ದನ್ನು ನರೇಂದ್ರ ಮೋದಿ ಈ 7 ವರ್ಷಗಳಲ್ಲಿ ಕೊಟ್ಟಿದ್ದಾರೆ. ಹಣಕಾಸು ವಲಯದ ಶುದ್ಧೀಕರಣ, ಸರ್ವರಿಗೂ ಆರ್ಥಿಕ ಅವಕಾಶಗಳ ವಿಸ್ತರಣೆ, ರಾಷ್ಟ್ರೀಯ ಭದ್ರತೆ, ದಾಖಲೆ ಪ್ರಮಾಣದ ಭಾರಿ ಹೂಡಿಕೆ, ತಂತ್ರಜ್ಞಾನ, ಆರ್ಟಿಕಲ್‌ 370, ಲಡಾಖ್‌ ಹೊಸ ರಾಜ್ಯ, ನಾಗರಿಕ ತಿದ್ದುಪಡಿ ಕಾಯ್ದೆ, ರಾಮಮಂದಿರ ವಿವಾದ ಸೌಹಾರ್ದಯುತ ಇತ್ಯರ್ಥ ಸೇರಿದಂತೆ ಹಲವು ವಲಯಗಳವರೆಗೆ ನಾವೆಲ್ಲರೂ ಆಭಾರಿಯಾಗುವಂತೆ ಮಾಡಿದ್ದಾರೆ.

ಕಳೆದ 18 ತಿಂಗಳ ಕೋವಿಡ್‌ ಕಾಲದಲ್ಲಿ ಮೋದಿ ಅವರ ನಾಯಕತ್ವ, ದೂರದೃಷ್ಟಿಹಾಗೂ ಅವಿಶ್ರಾಂತ ಕಠಿಣ ದುಡಿಮೆಗಾಗಿ ನಾವೂ ನಿಜಕ್ಕೂ ಆಭಾರಿಗಳಾಗಬೇಕಾಗಿದೆ.

ಕೊರೋನಾ ಬಿಕ್ಕಟ್ಟಿನ ಉದ್ದಕ್ಕೂ ಮೋದಿ ನಾಯಕತ್ವ ಹಾಗೂ ಆಡಳಿತ ಸಂಪೂರ್ಣ ಅನಾವರಣಗೊಂಡಿತ್ತು. ವೈರಾಣುವಿನ ವಿರುದ್ಧ ದೇಶ ಒಗ್ಗೂಡಿ ಹೋರಾಡುವಂತೆ ಮಾಡಲು ದೇಶದ ಪ್ರತಿಯೊಬ್ಬರನ್ನೂ ಅವರು ಹುರಿದುಂಬಿಸಿದರು. 140 ಕೋಟಿ ಭಾರತೀಯರನ್ನು ಕಠಿಣ ಲಾಕ್‌ಡೌನ್‌ ಎಡೆಗೆ ಶಾಂತ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದರು.

ಕೋವಿಡ್‌ ದೇಶಕ್ಕೆ ಅಪ್ಪಳಿಸಿದಾಗ, ಪಿಪಿಇ ಉತ್ಪಾದನೆಗೆ ಸಂಬಂಧಿಸಿದಂತೆ ನಮ್ಮ ಬಳಿ ಅಲ್ಪ ಸಾಮರ್ಥ್ಯ ಇತ್ತು ಅಥವಾ ಸಾಮರ್ಥ್ಯವೇ ಇಲ್ಲ ಎನ್ನುವ ವಾತಾವರಣ ಇತ್ತು. ಸೀಮಿತ ಆಸ್ಪತ್ರೆ, ಐಸಿಯು ಬೆಡ್‌ಗಳು, ರಾಜ್ಯಗಳ ಆರೋಗ್ಯ ಕ್ಷೇತ್ರದಲ್ಲಿ ಸಾಮರ್ಥ್ಯ ಕೊರತೆ, ಔಷಧ, ಲಸಿಕೆ, ಉಪಕರಣ ಹಾಗೂ ಆರೋಗ್ಯ ಸಿಬ್ಬಂದಿಯಲ್ಲಿ ಮಿತಿ ಇತ್ತು. ಈ ನೈಜ ಸವಾಲುಗಳ ನಡುವೆಯೇ ಮೋದಿ ಅವರು ಉತ್ತರದ ಗಡಿಗಳಲ್ಲಿ ಚೀನಾದ ಕೆಟ್ಟನಡವಳಿಕೆ ಹಾಗೂ ಪಾಕಿಸ್ತಾನದ ನಿರಂತರ ಭಯೋತ್ಪಾದನೆಯನ್ನು ಎದುರಿಸಬೇಕಾಯಿತು. ಜನ ಸೇವೆ ಮಾಡುವ ಸಮಯ ಎಂಬುದನ್ನು ಮರೆತು ಕೋವಿಡ್‌-19 ಅನ್ನು ರಾಜಕೀಯ ಅವಕಾಶವಾಗಿ ಕಂಡ ದೇಶದ ಕೆಲವು ರಾಜಕಾರಣಿಗಳು, ಕೆಲವು ರಾಜ್ಯಗಳ ಅಸಮರ್ಥ ಅಥವಾ ಬೇಜವಾಬ್ದಾರಿ ಮುಖ್ಯಮಂತ್ರಿಗಳನ್ನೂ ನಿರ್ವಹಿಸಬೇಕಾಯಿತು.

ಆದಾಗ್ಯೂ ಮೋದಿ ಅವರು ಎದೆಗುಂದದೆ ನಮ್ಮನ್ನೆಲ್ಲಾ ಮುನ್ನಡೆಸಿದರು. ಕೊರೋನಾ ಉದ್ದಕ್ಕೂ ಮೋದಿ ಅವರ ಸ್ವಪ್ರಯತ್ನ ಅತಿಮಾನುಷವಾಗಿತ್ತು. ಏಕೆಂದರೆ ಅದು ಯಾವುದೇ ಸಾಮಾನ್ಯ ವ್ಯಕ್ತಿಯನ್ನೂ ಹಲವು ಬಾರಿ ಆಯಾಸಗೊಳಿಸಿಬಿಡುತ್ತಿತ್ತು. ವಿಜ್ಞಾನಿಗಳು, ಪರಿಣತರು ಕೂಡ ಸೋಂಕಿನ ಕಾರಣ, ಪರಿಣಾಮ ಹಾಗೂ ಪರಿಹಾರ ಹುಡುಕಲು ಪರದಾಡುತ್ತಿದ್ದಾಗ ಮೋದಿ ಅವರು ಪ್ರತಿಕ್ರಿಯೆ ತೋರಲು ವ್ಯವಸ್ಥೆ ಸಿದ್ಧಪಡಿಸುವ ಸವಾಲನ್ನು ಎದುರಿಸಿದ್ದು ಉತ್ಪ್ರೇಕ್ಷೆಯೇನಲ್ಲ.

ಕೊರೋನಾ ವಿಪತ್ತಿನ ಸಂದರ್ಭದಲ್ಲಿ ಭಾರತ ಪುಟಿದೆದ್ದು ಉತ್ತಮ ಪ್ರತಿಕ್ರಿಯೆ ನೀಡಲು ನರೇಂದ್ರ ಮೋದಿ ಅವರ ಮೊದಲ ಅವಧಿಯ ದೂರದೃಷ್ಟಿಯ ನಿರ್ಧಾರಗಳಿಂದ ಸಾಧ್ಯವಾಯಿತು. ಅವರ ದೂರದೃಷ್ಟಿಗೆ ನಿರ್ವಿವಾದ ಸಾಕ್ಷ್ಯ ಇದು. ಕೋವಿಡ್‌ ಆಘಾತದಿಂದ ಹೆಚ್ಚು ದುಷ್ಪರಿಣಾಮಕ್ಕೆ ಈಡಾದ ಬಡವರು ಹಾಗೂ ದುರ್ಬಲ ವರ್ಗದವರಿಗೆ ತ್ವರಿತವಾಗಿ ಹಣಕಾಸು ನೆರವನ್ನು ಒದಗಿಸಲಾಯಿತು. ಮೋದಿ ಅವರು ಮೊದಲ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಬ್ಯಾಂಕ್‌ ಖಾತೆ ತೆರೆಯಲು ಜನಧನ ಯೋಜನೆ ತಂದಿದ್ದರು. ಅದರ ಮೂಲಕವೇ ಆರ್ಥಿಕ ನೆರವು ನೀಡಲಾಯಿತು. ಜನಧನ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ, ಪಡಿತರ ವಿತರಣೆ ಹಾಗೂ ಪಿಎಂ- ಕಿಸಾನ್‌ ಯೋಜನೆಗಳು ಗ್ರಾಮೀಣ ಜನರು, ರೈತರು ಹಾಗೂ ಬಡವರಿಗೆ ಸೋರಿಕೆ ಇಲ್ಲದೆ ಸರ್ಕಾರದಿಂದ ನೇರವಾಗಿ ಆರ್ಥಿಕ ಬಲವನ್ನು ತುಂಬಿದವು. ಮಾಹಿತಿಗಾಗಿ ಸಂಪರ್ಕ ಹೊಂದಲು ಹಾಗೂ ಎಲ್ಲಿ ಬೇಕಾದರೂ ಕೆಲಸ ಉದ್ಯಮ ಮುಂದುವರಿಸಲು ಡಿಜಿಟಲ್‌ ಇಂಡಿಯಾ ಯೋಜನೆ ಕೋಟ್ಯಂತರ ಜನರಿಗೆ ನೆರವಾಯಿತು. ಅಡುಗೆ ಅನಿಲ ಸಂಪರ್ಕ ನೀಡುವ ಉಜ್ವಲಾ, ಜನೌಷಧಿ ಯೋಜನೆ ಹಾಗೂ ಪ್ರಧಾನಮಂತ್ರಿ ಆಯುಷ್ಮಾನ್‌ನಂತಹ ಯೋಜನೆಗಳು ಸಾಂಕ್ರಾಮಿಕದ ಸಂದರ್ಭದಲ್ಲಿ ಶ್ರೀಸಾಮಾನ್ಯರಿಗೆ ಹೆಚ್ಚಿನ ರೀತಿಯಲ್ಲಿ ನೆರವಾದವು. ಕೋವಿಡ್‌ ಆಘಾತವನ್ನು ಭಾರತ ನಿರ್ವಹಿಸುವಂತೆ ಮೋದಿ ನಾಯಕತ್ವ ನೋಡಿಕೊಂಡಿತು. ಅತ್ಯಂತ ಮುಂದುವರಿದ ದೇಶಗಳು ಹಾಗೂ ಇತರ ದೇಶಗಳಿಗಿಂತ ಭಾರತದಲ್ಲಿ ಸಾವು ಕಡಿಮೆ ಇರುವಂತೆ ಮಾಡಿತು.

ಪ್ರತಿಕೂಲ ಪರಿಸ್ಥಿತಿಯಲ್ಲೂ ದೇಶವನ್ನು ಮುನ್ನಡೆಸಿಕೊಂಡುವ ಹೋಗುವ ಸಾಮರ್ಥ್ಯವಿರುವ ಬಲಿಷ್ಠ ನಾಯಕತ್ವ ದೇಶಕ್ಕೆ ಬೇಕಾಗಿದೆ ಎಂಬುದನ್ನು ಕಳೆದ 18 ತಿಂಗಳ ಅವಧಿ ಭಾರತಕ್ಕೆ ತೋರಿಸಿದೆ. ಪುಣ್ಯವೆಂದರೆ ನಮಗೆ ಮೋದಿ ಅವರ ನಾಯಕತ್ವ ಹಾಗೂ ದೂರದೃಷ್ಟಿಲಭಿಸಿದೆ. ಸೆ.13ರಂದು 75 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಿದ್ದೂ ಸೇರಿ ಕೋವಿಡ್‌ ವಿರುದ್ಧದ ನಮ್ಮ ಹೋರಾಟದಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸಾಧಿಸಲು ಇವೆರಡೂ ಮುಖ್ಯವಾದವು.

ಕೋವಿಡ್‌ ನಂತರ ವಿಶ್ವದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿವೆ. ಭಾರತ ಕೂಡ ಪ್ರಬಲವಾಗಿ ಪುಟಿದೇಳುತ್ತಿದೆ, ತನ್ನ ಭವಿಷ್ಯದ ಬಗ್ಗೆ ದೃಢ ವಿಶ್ವಾಸ ಹಾಗೂ ಮಹತ್ವಾಕಾಂಕ್ಷೆ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ದೂರದೃಷ್ಟಿ, ಭಾರತದ ಸಮಯ ಈಗ ಬಂದಿದೆ ಎಂಬ ನಂಬುಗೆಯ ನಾಯಕತ್ವದೊಂದಿಗೆ. ಮೋದಿ ಅವರು ಆ.15ರಂದು ಹೇಳಿದಂತೆ, ಇದು ನಮ್ಮ ಸಮಯ. ಇದು ನಮ್ಮ ಸಮಯ.

ಸಾರ್ವಜನಿಕ ಸೇವಾ ಕ್ಷೇತ್ರ ಪ್ರವೇಶಿಸಿ ನಾನು ಇದೇ ವರ್ಷ 15 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ನರೇಂದ್ರ ಮೋದಿ ಅವರ ನಾಯಕತ್ವದ ಸಂದರ್ಭದಲ್ಲಿ ಸೇವೆ ಮಾಡುವ ಅವಕಾಶ ದೊರೆತಿದೆ ಹಾಗೂ ನರೇಂದ್ರ ಮೋದಿ ನಾಯಕತ್ವದಡಿ ನಮ್ಮ ದೇಶ ಹಿಮ್ಮುಖವಾಗದ, ತಡೆಯಲಾಗದ ರೀತಿ ಬೆಳವಣಿಗೆ ಹೊಂದುತ್ತಿರುವ ಘಳಿಗೆಗೆ ಸಾಕ್ಷಿಯಾಗುತ್ತಿದ್ದೇನೆ ಎಂಬುದು ಗೌರವ ಎಂದು ನಾನು ಪರಿಭಾವಿಸುತ್ತೇನೆ.

ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಅತ್ಯುತ್ತಮ ರೀತಿಯಲ್ಲಿ ಆಚರಿಸುವುದೆಂದರೆ ಅವರಲ್ಲಿ ನಂಬಿಕೆ ಇಡುವುದು ಹಾಗೂ ಸರ್ವರಿಗೂ ಬಲಿಷ್ಠ, ಸಂಪದ್ಭರಿತ ಭಾರತ ನೀಡಬೇಕೆಂಬ ಅವರ ಕನಸು ನನಸಿಗೆ ಕೆಲಸ ಮಾಡುವುದು. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌. ಮೋದಿ ಅವರಿಗೆ ಉತ್ತಮ ಆರೋಗ್ಯ ಸಿಗಲಿ, ನಮ್ಮ ತಾಯ್ನಾಡಿಗೆ ಮತ್ತಷ್ಟುಸೇವೆ ಸಲ್ಲಿಸಲಿ ಎಂದು ಈ ದಿನ ಹಾರೈಸುತ್ತೇನೆ.

Follow Us:
Download App:
  • android
  • ios