Asianet Suvarna News Asianet Suvarna News

ಕೇರಳದಲ್ಲಿ ಕೇಂದ್ರ ಸಚಿವರ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ಅಪರಿಚಿತ ದುಷ್ಕರ್ಮಿಗಳು ಕೇಂದ್ರ  ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರ ತಿರುವನಂತಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ  ಮನೆ ಕಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ.

Union Minister of State for External Affairs V Muraleedharan house attacked by miscreants in Kerala akb
Author
First Published Feb 9, 2023, 4:55 PM IST

ತಿರುವನಂತಪುರ: ಅಪರಿಚಿತ ದುಷ್ಕರ್ಮಿಗಳು ಕೇಂದ್ರ  ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರ ತಿರುವನಂತಪುರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ  ಮನೆ ಕಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ.  ಬುಧವಾರ ರಾತ್ರಿ  ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.  ಮನೆಯ ಎರಡು ಕಿಟಕಿಗಳ ಗಾಜುಗಳನ್ನು ಕಲ್ಲುಗಳಿಂದ ಹೊಡೆದು ಒಡೆದು ಹಾಕಲಾಗಿದೆ. ಅಲ್ಲದೇ ಒಡೆದ ಕಿಟಕಿ ಬಳಿ ರಕ್ತದ ಕಲೆಗಳು ಕಂಡು ಬಂದಿವೆ. 

ಸಚಿವ ವಿ ಮುರಳೀಧರನ್ (V Muraleedharan) ಅವರು ರಾಜ್ಯ ರಾಜಧಾನಿಗೆ ಬಂದಾಗಲೆಲ್ಲ ಈ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಿದ್ದರು.  ಕಣ್ಣೂರಿನ ತಲಸ್ಸೇರಿ ಮೂಲದವರಾದ  ವಿ ಮುರಳೀಧರನ್ ಅವರು ತಿರುವನಂತಪುರ (Thiruvananthapuram) ನಗರದ ಹೊರವಲಯದಲ್ಲಿ ಬರುವ ಕೊಚ್ಚುಲೂರಿನ  ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಇರುವ ಈ ಮನೆಯನ್ನು ತಿರುವನಂತಪುರಕ್ಕೆ ಬಂದಾಗ ವಾಸ ಮಾಡಲು ಬಳಸುತ್ತಿದ್ದರು.  ಅಲ್ಲದೇ ಸಚಿವರ ಕಚೇರಿಯೂ ಕೂಡ ಇಲ್ಲಿಗೆ ಸಮೀಪದಲ್ಲೇ ಇತ್ತು.  ಘಟನೆಗೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಪಿ ಅಜಿತ್ ಅವರ ಮೇಲುಸ್ತುವಾರಿಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ವಿಧಿ ವಿಜ್ಞಾನ ಪ್ರಯೋಗಾಲಯವೂ ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. 

ಕೇರಳ ಮಹಿಳೆಯಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ!

ಇನ್ನು ಈ ಘಟನೆಯನ್ನು ಕೇರಳ ಬಿಜೆಪಿ ಖಂಡಿಸಿದ್ದಾರೆ. ಕೇರಳ ಬಿಜೆಪಿ ಮುಖ್ಯಸ್ಥ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದಾದ ಬಳಿಕ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಹಾಗೂ ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿತು ಎಂದು ತಿಳಿದು ಬಂದಿದೆ.  ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ( K Surendran) ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವರಿಗೆ ಘಟನೆಯ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.  ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ.  ರಾಜ್ಯ ರಾಜಧಾನಿಯಲ್ಲೇ ಕೇಂದ್ರ ಸಚಿವರ ಮನೆಗೆ ಭದ್ರತೆ ಒದಗಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದ್ದಾರೆ. 

ಬಿಜೆಪಿ ಸೇರ್ತಿಲ್ಲ, ಆದರೆ ದೇಶ ದುರ್ಬಲ ಮಾಡುವ ಶಕ್ತಿಗಳ ವಿರುದ್ಧವಿದ್ದೇನೆ: ಅನಿಲ್‌ ಆಂಟನಿ!

 

Follow Us:
Download App:
  • android
  • ios