RSS ಆಸ್ಪತ್ರೆ ಕೇವಲ ಹಿಂದೂಗಳಿಗಾ? ರತನ್ ಟಾಟಾ ಪ್ರಶ್ನೆಗೆ ಗಡ್ಕರಿ ಉತ್ತರ!
ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದ ಘಟನೆಯನ್ನು ನೆನಪಿಸಿಕೊಂಡ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ರತನ್ ಟಾಟಾ ಅವರೊಂದಿಗೆ ನಡೆದ ಆರ್ ಎಸ್ ಎಸ್ ಕುರಿತಾದ ಮಾತುಕತೆಯನ್ನು ನೆನಪಿಸಿಕೊಂಡರು.
ಪುಣೆ ( ಏ.14): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್ ) ಧರ್ಮದ ಆಧಾರದಲ್ಲಿ ಎಂದಿಗೂ ತಾರತಮ್ಯ ಮಾಡೋದಿಲ್ಲ ಎಂದು ದೇಶದ ಅಗ್ರ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರಿಗೆ ಹಿಂದೊಮ್ಮೆ ಹೇಳಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ಇಲ್ಲಿನ ಸಿನ್ಹಗಡ ಪ್ರದೇಶದಲ್ಲಿ ಗುರುವಾರ ಚಾರಿಟಬಲ್ ಆಸ್ಪತ್ರೆಯನ್ನು ಉದ್ಘಾಟಿಸಿದ ಬಿಜೆಪಿಯ (BJP) ಹಿರಿಯ ನಾಯಕ ಈ ವೇಳೆ ಹಿಂದಿನ ಕೆಲ ವಿಚಾರಗಳನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ (Shiv Sena-BJP) ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದ ಘಟನೆಯನ್ನು ವಿವರಿಸಿದರು.
"ದಿವಂಗತ ಆರ್‌ಎಸ್‌ಎಸ್ ಮುಖ್ಯಸ್ಥ ಕೆ ಬಿ ಹೆಡ್ಗೆವಾರ್ (RSS chief K B Hedgewar ) ಅವರ ಹೆಸರಿನ ಆಸ್ಪತ್ರೆಯನ್ನು ಔರಂಗಾಬಾದ್‌ನಲ್ಲಿ ಉದ್ಘಾಟನೆ ಆಗುವುದರಲ್ಲಿತ್ತು. ಆಗ ನಾನು ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೆ. ಆರೆಸ್ಸೆಸ್ ಹಿರಿಯ ಕಾರ್ಯಕಾರಿಯೊಬ್ಬರು ಆಸ್ಪತ್ರೆಯನ್ನು ರತನ್ ಟಾಟಾ ಅವರು ಉದ್ಘಾಟಿಸಬೇಕೆಂದು ಬಯಸಿದ್ದರು. ಈ ನಿಟ್ಟಿನಲ್ಲಿ ಸಹಾಯ ಮಾಡುವಂತೆ ನನಗೆ ಕೇಳಿದ್ದರು" ಎಂದು ಗಡ್ಕರಿ ಹೇಳಿದರು.
ನಂತರ ಅವರು ರತನ್ ಟಾಟಾ ಅವರನ್ನು ಸಂಪರ್ಕಿಸಿ, ದೇಶದ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಕೊಡುಗೆಯನ್ನು ಉಲ್ಲೇಖಿಸಿ ಆಸ್ಪತ್ರೆಯನ್ನು ಉದ್ಘಾಟಿಸಲು ಅವರಿಗೆ ಮನವೊಲಿಸಿದ್ದಾಗಿ ತಿಳಿಸಿದೆ ಎಂದು ಗಡ್ಕರಿ ಹೇಳಿದರು. "ಆಸ್ಪತ್ರೆ ತಲುಪಿದ ನಂತರ ಟಾಟಾ ಅವರು ಆಸ್ಪತ್ರೆ ಹಿಂದೂ ಸಮುದಾಯದವರಿಗೆ ಮಾತ್ರವೇ ಎಂದು ಕೇಳಿದರು. ನಾನು ಅವರನ್ನು 'ಯಾಕೆ ಹಾಗೆ ಯೋಚಿಸುತ್ತೀರಿ' ಎಂದು ಕೇಳಿದೆ. ಅದಕ್ಕೆ ತಕ್ಷಣವೇ ಉತ್ತರಿಸಿದ ಅವರು, ಇದು ಆರ್ ಎಸ್ಎಸ್ ನವರಿಗೆ ಸಂಬಂಧಪಟ್ಟ ಆಸ್ಪತ್ರೆಯಾಗಿದೆ ಎಂದು ಹೇಳಿದರು.
"ಆಸ್ಪತ್ರೆ ಎಲ್ಲಾ ಸಮುದಾಯಗಳಿಗಾಗಿ ನಿರ್ಮಿಸಲಾಗುತ್ತದೆ ಮತ್ತು ಆರ್‌ಎಸ್‌ಎಸ್‌ನಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ನಡೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ" ಎಂದು ಕೇಂದ್ರ ಸಚಿವರು ಹೇಳಿದರು. ನಂತರ ಅವರು ರತನ್ ಟಾಟಾಗೆ ಅವರಿಗೆ ಆರ್ ಎಸ್ ಎಸ್ ಕುರಿತಾದ ಹಲವಾರು ವಿಷಯಗಳನ್ನು ವಿವರಿಸಿದರು ಮತ್ತು ನಂತರ ಅವರು "ತುಂಬಾ ಸಂತೋಷಪಟ್ಟರು" ಎಂದು ಗಡ್ಕರಿ ಸೇರಿಸಿದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ, ತಡರಾತ್ರಿ ರಾಜ್ ಠಾಕ್ರೆ ಭೇಟಿಗೆ ಆಗಮಿಸಿದ ಗಡ್ಕರಿ!
ಇನ್ನು ರಾಜಕೀಯ ದೃಷ್ಟಿಯಲ್ಲಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ಎಂಎನ್‌ಎಸ್ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಜತೆಗಿನ ಬಿಜೆಪಿಯ ಆಪ್ತತೆ ಹಠಾತ್ತನೆ ಹೆಚ್ಚಾಗುತ್ತಿದೆ. ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಬಿದ್ದ ನಂತರ ಇದ್ದಕ್ಕಿದ್ದಂತೆ ಬಾಳಾಸಾಹೇಬ್ ಅವರ ಸೋದರಳಿಯ ರಾಜ್ ಠಾಕ್ರೆ ಬಿಜೆಪಿಗೆ ಹತ್ತಿರವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ ತಡರಾತ್ರಿ ರಾಜ್ ಠಾಕ್ರೆ ಮನೆಗೆ ಆಗಮಿಸಿದ ನಂತರ ರಾಜಕೀಯ ಊಹಾಪೋಹಗಳು ಕೂಡ ಶುರುವಾಗಿವೆ. ಆದರೆ, ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಹೊರಬಂದ ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜತಾಂತ್ರಿಕ ಹೇಳಿಕೆ ನೀಡುವ ಮೂಲಕ ಮತ್ತಷ್ಟು ಊಹಾಪೋಹಗಳಿಗೆ ಡೆ ಮಾಡಿಕೊಟ್ಟಿದ್ದಾರೆ.
ಹೈಡ್ರೋಜನ್ ಕಾರಲ್ಲಿ ಸಂಸತ್ತಿಗೆ ಬಂದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ!
ವಾಸ್ತವವಾಗಿ, ನಿತಿನ್ ಗಡ್ಕರಿ ಭಾನುವಾರ ತಡರಾತ್ರಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮನೆಗೆ ತಲುಪಿದ್ದರು. ರಾಜ್ ಠಾಕ್ರೆ ಅವರೊಂದಿಗಿನ ಭೇಟಿಯನ್ನು ವೈಯಕ್ತಿಕ ಭೇಟಿ ಎಂದು ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಇದು ರಾಜಕೀಯ ಸಭೆಯಲ್ಲ ಎಂದರು. ರಾಜ್ ಠಾಕ್ರೆ ಮತ್ತು ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರ ಹೊಸ ಮನೆಯನ್ನು ನೋಡಲು ಮತ್ತು ಅವರ ತಾಯಿಯ ಆರೋಗ್ಯ ವಿಚಾರಿಸಲು ತಾನು ಬಂದಿದ್ದೆ ಎಂದಿದ್ದಾರೆ.