ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ, ತಡರಾತ್ರಿ ರಾಜ್ ಠಾಕ್ರೆ ಭೇಟಿಗೆ ಆಗಮಿಸಿದ ಗಡ್ಕರಿ!

* ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಸಂಚಲನ

* ತಡರಾತ್ರಿ ರಾಜ್ ಠಾಕ್ರೆ ಭೇಟಿಯಾಗಲು ಬಂದ ನಿತಿನ್ ಗಡ್ಕರಿ

* ಮಹಾರಾಷ್ಟ್ರದಲ್ಲಿ ಹಿಂದುತ್ವ ರಾಜಕಾರಣಕ್ಕೆ ಒತ್ತು ಕೊಟ್ಟ ರಾಜ್ ಠಾಕ್ರೆ ಹೇಳಿಕೆ

Nitin Gadkari meets Raj Thackeray in Mumbai calls it family visit pod

ಮುಂಬೈ(ಏ.04): ಮಹಾರಾಷ್ಟ್ರದಲ್ಲಿ ಎಂಎನ್‌ಎಸ್‌ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಜತೆಗಿನ ಬಿಜೆಪಿಯ ಆಪ್ತತೆ ಹಠಾತ್ತನೆ ಹೆಚ್ಚಾಗುತ್ತಿದೆ. ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಬಿದ್ದ ನಂತರ ಇದ್ದಕ್ಕಿದ್ದಂತೆ ಬಾಳಾಸಾಹೇಬ್ ಅವರ ಸೋದರಳಿಯ ರಾಜ್ ಠಾಕ್ರೆ ಬಿಜೆಪಿಗೆ ಹತ್ತಿರವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ ತಡರಾತ್ರಿ ರಾಜ್ ಠಾಕ್ರೆ ಮನೆಗೆ ಆಗಮಿಸಿದ ನಂತರ ರಾಜಕೀಯ ಊಹಾಪೋಹಗಳು ಕೂಡ ಶುರುವಾಗಿವೆ. ಆದರೆ, ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿ ಹೊರಬಂದ ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜತಾಂತ್ರಿಕ ಹೇಳಿಕೆ ನೀಡುವ ಮೂಲಕ ಮತ್ತಷ್ಟು ಊಹಾಪೋಹಗಳಿಗೆ ಡೆ ಮಾಡಿಕೊಟ್ಟಿದ್ದಾರೆ.

ರಾಜ್ ಠಾಕ್ರೆ ನಿವಾಸ ತಲುಪಿದ ನಿತಿನ್ ಗಡ್ಕರಿ 

ವಾಸ್ತವವಾಗಿ, ನಿತಿನ್ ಗಡ್ಕರಿ ಭಾನುವಾರ ತಡರಾತ್ರಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮನೆಗೆ ತಲುಪಿದ್ದರು. ರಾಜ್ ಠಾಕ್ರೆ ಅವರೊಂದಿಗಿನ ಭೇಟಿಯನ್ನು ವೈಯಕ್ತಿಕ ಭೇಟಿ ಎಂದು ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಇದು ರಾಜಕೀಯ ಸಭೆಯಲ್ಲ ಎಂದರು. ರಾಜ್ ಠಾಕ್ರೆ ಮತ್ತು ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರ ಹೊಸ ಮನೆಯನ್ನು ನೋಡಲು ಮತ್ತು ಅವರ ತಾಯಿಯ ಆರೋಗ್ಯ ವಿಚಾರಿಸಲು ತಾನು ಬಂದಿದ್ದೆ ಎಂದಿದ್ದಾರೆ.

Nitin Gadkari meets Raj Thackeray in Mumbai calls it family visit pod

ಮಹಾರಾಷ್ಟ್ರದಲ್ಲಿ ಹಿಂದುತ್ವ ರಾಜಕಾರಣಕ್ಕೆ ಒತ್ತು ಕೊಟ್ಟ ರಾಜ್ ಠಾಕ್ರೆ ಹೇಳಿಕೆ

ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ಪುನರಾಗಮನ ಮಾಡಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಹೀನಾಯ ಸೋಲಿನ ನಂತರ, ರಾಜ್ ಠಾಕ್ರೆ ಹಿಂದುತ್ವದ ಕಠಿಣ ರಾಜಕೀಯದ ಹಾದಿ ತುಳಿದಿದ್ದಾರೆ. ಭಾನುವಾರವಷ್ಟೇ, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ದ್ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಧ್ವನಿವರ್ಧಕಗಳನ್ನು ಅಳವಡಿಸಿ ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದಿದ್ದರು. 

ರಾಜ್ ಠಾಕ್ರೆಯವರ ಈ ಹೇಳಿಕೆಯ ನಂತರ ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೊಮ್ಮೆ ಜಾತಿ ರಾಜಕಾರಣ ತಲೆ ಎತ್ತಿದೆ. ಬಾಳಾಸಾಹೇಬ್ ಠಾಕ್ರೆ ಅವರ ಸೋದರಳಿಯ ರಾಜ್ ಠಾಕ್ರೆ ಕೂಡ ಪ್ರಧಾನಿ ಮೋದಿಯತ್ತ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರನ್ನು ಸದಾ ಮಿಮಿಕ್ರಿ  ಮಾಡಿ ಟೀಕಿಸುತ್ತಿದ್ದ ರಾಜ್ ಠಾಕ್ರೆ, ಈಗ ಮಹಾರಾಷ್ಟ್ರದ ಮದರಸಾಗಳಲ್ಲಿ ರಾಷ್ಟ್ರವಿರೋಧಿ ಚಟುವಟಿಕೆ ನಡೆಯುತ್ತಿದೆ ಹೀಗಾಗಿ ದಾಳಿ ನಡೆಸುವಂತೆ ಕೇಳಿಕೊಂಡಿದ್ದಾರೆ.

ಮಹಾರ‍ಆfಟ್ರದಲ್ಲಿ ಬಿಜೆಪಿಗೆ ಸಂಜೀವಿನಿ?

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಯಾವಾಗಲೂ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಕಳೆದ ವರ್ಷಗಳಲ್ಲಿ ಎರಡು ಬಾರಿ ಮೈತ್ರಿ ಮುರಿದು ಬಿದ್ದ ನಂತರ, ಬಿಜೆಪಿಯನ್ನು ಬಲಪಡಿಸಲು ಮಹಾರಾಷ್ಟ್ರದಲ್ಲಿ ಗಟ್ಟಿಯಾದ ರಾಜಕೀಯ ಪಕ್ಷದ ಅಗತ್ಯವಿದೆ. ಶಿವಸೇನೆ ತೊರೆದ ನಂತರ ಬಿಜೆಪಿ ಎಂಎನ್‌ಎಸ್‌ನಲ್ಲಿ ಸಾಧ್ಯತೆಯನ್ನು ನೋಡುತ್ತಿದೆ. ಬಾಳಾಸಾಹೇಬ್ ಠಾಕ್ರೆಯವರ ಕಾಲದಲ್ಲಿ ರಾಜಕೀಯವಾಗಿ ನಂಬರ್ 2 ಆಗಿದ್ದ ರಾಜ್ ಠಾಕ್ರೆ ಅವರು ತಮ್ಮ ಪಕ್ಷವಾದ ಎಂಎನ್‌ಎಸ್‌ನೊಂದಿಗೆ ದೀರ್ಘಕಾಲದಿಂದ ಪ್ರತ್ಯೇಕವಾಗಿದ್ದರು. ಆದರೆ ಅವರ ನಿಲುವಿನಿಂದ ಬಿಜೆಪಿ ಜತೆ ಹೋಗುವ ಸಾಧ್ಯತೆಯೂ ಹೆಚ್ಚುತ್ತಿದೆ. ಆದರೆ, ಎಂಎನ್‌ಎಸ್ ಮುಖ್ಯಸ್ಥರ ಹೇಳಿಕೆ ಮತ್ತು ರಾತ್ರಿ ನಿತಿನ್ ಗಡ್ಕರಿ ಅವರ ಮನೆಗೆ ಹಠಾತ್ ಆಗಮನದೊಂದಿಗೆ, ಮಹಾರಾಷ್ಟ್ರದಲ್ಲಿ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. 

Latest Videos
Follow Us:
Download App:
  • android
  • ios