Asianet Suvarna News Asianet Suvarna News

ವಿಭಜನೆ ಬಳಿಕ ಸನಾತನ ಧರ್ಮದವರಷ್ಟೇ ದೇಶದಲ್ಲುಳಿಯಬೇಕಿತ್ತು : ಸಚಿವ

ದೇಶ ವಿಭಜನೆಯಾದಾಗ ಭಾರತದಲ್ಲಿ ಸನಾತನ ಧರ್ಮದ ಅನುಯಾಯಿಗಳು ಮಾತ್ರವೇ ಉಳಿಯಬೇಕಿತ್ತು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ. ‘

Union Minister Giriraj Singh again hit controversial statement, after India partition only sanatan people should stay in india akb
Author
First Published Dec 4, 2022, 2:58 PM IST

ಬೇಗುಸರೈ: ದೇಶ ವಿಭಜನೆಯಾದಾಗ ಭಾರತದಲ್ಲಿ ಸನಾತನ ಧರ್ಮದ ಅನುಯಾಯಿಗಳು ಮಾತ್ರವೇ ಉಳಿಯಬೇಕಿತ್ತು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ. ‘ದೇಶವು ಧರ್ಮದ ಆಧಾರದ ಮೇಲೆ ವಿಭಜನೆಯಾಯಿತು ಹಾಗಾಗಿ ಭಾರತದಲ್ಲಿ ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರವೇ ಇದ್ದಿದ್ದರೆ ಇಂದು ನಾವು ಬದ್ರುದೀನ್‌ ಹಾಗೂ ಅಸಾದುದ್ದೀನ್‌ ಓವೈಸಿಯಂತವರ ನಿಂದನೀಯ ಮಾತುಗಳನ್ನು ಸಹಿಸಿಕೊಳ್ಳಬೇಕಾಗಿರುತ್ತಿರಲಿಲ್ಲ ಎಂದು ಮುಸ್ಲಿಂ ನಾಯಕರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಜನಸಂಖ್ಯಾ ನಿಯಂತ್ರಣ ಕಾಯ್ದೆ ವಿರುದ್ಧ ಮಾತನಾಡಿದ್ದ ಬದ್ರುದ್ದೀನ್‌ಗೆ ‘ನಿಮಗೆ ಸಾಧ್ಯವಿದ್ದರೆ ಚೀನಾದ ಜನಸಂಖ್ಯಾ ನಿಯಂತ್ರಣ ಕಾಯ್ದೆ ಬಗ್ಗೆ ಮಾತನಾಡಿ’ ಎಂದಿದ್ದಾರೆ. ಅಲ್ಲದೇ ಅತಿಯಾದ ಜನಸಂಖ್ಯೆಯಿಂದ ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲವಾದ್ದರಿಂದ ನಿಯಂತ್ರಣ ಕಾಯ್ದೆ ಜಾರಿಯಾಗಬೇಕಿದೆ ಎಂದರು.

ಈ ಹಿಂದೆಯೂ ಹಲವು ಬಾರಿ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.  2047 ರಲ್ಲಿ ಭಾರತ ಮತ್ತೊಮ್ಮೆ ವಿಭಜನೆಯಾಗಬಹುದು. ಧರ್ಮದ ಆಧಾರದಲ್ಲಿ 1947 ರಲ್ಲಿ ಭಾರತ ವಿಭಜನೆಯಾಗಿತ್ತು.  72 ವರ್ಷಗಳಲ್ಲಿ 33 ಕೋಟಿಯಷ್ಟಿದ್ದ ಜನಸಂಖ್ಯೆ, 135.7 ಕೋಟಿಗೆ ಏರಿಕೆಯಾಗಿದೆ. ವಿಭಜಕ ಶಕ್ತಿಗಳ ಜನಸಂಖ್ಯಾ ಸ್ಫೋಟ ಭಯಾನಕವಾಗಿದೆ. ಪ್ರಸ್ತುತ ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು ಎಂದು ಸಚಿವ ಸಿಂಗ್ 2018ರಲ್ಲಿ ಮಾಡಿದ್ದ ಟ್ವಿಟ್ಟ ಭಾರಿ ವಿವಾದ ಸೃಷ್ಟಿಸಿತ್ತು.

ಪಾಪ್ಯುಲೇಶನ್ ಕಂಟ್ರೋಲ್ ಆಗ್ಬೇಕು: ಗಿರಿರಾಜ್ ಇಶಾರೆಗೆ ಏನ್ ಅನ್ಬೇಕು?

ಹಸುವಿನ ಸಗಣಿ ಕುರಿತು ಹೆಚ್ಚಿನ ಸಂಶೋಧನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹ!

Follow Us:
Download App:
  • android
  • ios