Asianet Suvarna News Asianet Suvarna News

Delhi-Saharanpur-Dehradun Economic Corridor: ದೇಶದ ಮೊದಲ ವನ್ಯಜೀವಿ ಕಾರಿಡಾರ್‌ಗೆ ಮೋದಿ ಶಂಕು ಸ್ಥಾಪನೆ!

*ಮೇಲ್ಸೇತುವೆ ಮೇಲೆ ಮನುಷ್ಯ, ವಾಹನಗಳ ಸಂಚಾರ
*ಕೆಳಗಡೆ ಕಾಡು ಪ್ರಾಣಿಗಳ ಸ್ವಚ್ಛಂದ ಓಡಾಟ
*ಏಷ್ಯಾದ ವಿಶಿಷ್ಟ‘ಪ್ರಾಣಿಗಳ ಹೆದ್ದಾರಿ’
*ದೆಹಲಿ-ಡೆಹ್ರಾಡೂನ್‌ ಎಕನಾಮಿಕ್‌ ಕಾರಿಡಾರ್‌ಗೆ ಮೋದಿ ಚಾಲನೆ

foundation stone was laid by PM Narendra Modi for Indias First Elevated Wildlife Corridor in uttarakhand mnj
Author
Bengaluru, First Published Dec 5, 2021, 7:04 AM IST

ಡೆಹ್ರಾಡೂನ್‌(ಡಿ. 05): ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು ಮೂರು ವರ್ಷದಲ್ಲಿ ಉತ್ತರಾಖಂಡದಲ್ಲಿ (Uttarakhand) ಏಷ್ಯಾದ ಮೊದಲ ಎಲಿವೇಟೆಡ್‌ ವೈಲ್ಡ್‌ಲೈಫ್‌ ಕಾರಿಡಾರ್‌ (Elevated Wildlife Corridor) ತಲೆಯೆತ್ತಲಿದೆ. ಅಲ್ಲಿ ಒಂದೆಡೆ ವನ್ಯಜೀವಿಗಳು ಮನುಷ್ಯರ ಹಾಗೂ ವಾಹನಗಳ ಭಯವಿಲ್ಲದೆ ಮುಕ್ತವಾಗಿ ಸಂಚರಿಸುತ್ತಿದ್ದರೆ, ಅದರ ಮೇಲಿನ ಎಲಿವೇಟೆಡ್‌ ಹೆದ್ದಾರಿಯಲ್ಲಿ ಪ್ರವಾಸಿಗರು ಸಂಚರಿಸುತ್ತಾ ತಮ್ಮ ಕೆಳಗೆ ವನ್ಯಜೀವಿಗಳು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುವುದನ್ನು ವೀಕ್ಷಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ದೆಹಲಿಯಿಂದ ಉತ್ತರಾಖಂಡದ ಡೆಹ್ರಾಡೂನ್‌ ಸಂಪರ್ಕಿಸುವ ಎಕನಾಮಿಕ್‌ ಕಾರಿಡಾರ್‌ ಯೋಜನೆಯ ಭಾಗವಾಗಿ ಈ ವಿಶಿಷ್ಟ‘ಪ್ರಾಣಿಗಳ ಹೆದ್ದಾರಿ’ ನಿರ್ಮಾಣವಾಗಲಿದೆ.

16 ಕಿ.ಮೀ. ಎಲಿವೇಟೆಡ್‌ ಕಾರಿಡಾರ್‌:

ದೆಹಲಿ, ಸಹಾರಣ್‌ಪುರ, ಡೆಹ್ರಾಡೂನ್‌ ಎಕನಾಮಿಕ್‌ ಕಾರಿಡಾರ್‌ ಯೋಜನೆಯನ್ನು (Delhi-Saharanpur-Dehradun economic corridor) 8300 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಅದು 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹೆದ್ದಾರಿಯು ದೆಹಲಿ ಮತ್ತು ಪ್ರವಾಸಿಗರ ಸ್ವರ್ಗವಾಗಿರುವ ಡೆಹ್ರಾಡೂನ್‌ ನಡುವಿನ ಪ್ರಯಾಣದ ಅವಧಿಯನ್ನು ಈಗಿನ 6 ಗಂಟೆಯಿಂದ 2.5 ಗಂಟೆಗೆ ಇಳಿಸಲಿದೆ. 

Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!

ಈ ಹೆದ್ದಾರಿ ಪೂರ್ಣಗೊಂಡ ಮೇಲೆ, ಸದ್ಯ ವಾಹನಗಳ ಸಂಚಾರಕ್ಕೆ ಬಳಕೆಯಾಗುತ್ತಿರುವ ಉತ್ತರಾಖಂಡದ ಮೊಹಂದ್‌ ಮತ್ತು ಅಶರೋಡಿ ನಡುವಿನ 16 ಕಿ.ಮೀ. ಉದ್ದದ ದ್ವಿಪಥ ಹೆದ್ದಾರಿಯನ್ನು ಪ್ರಾಣಿಗಳ ಸಂಚಾರಕ್ಕೆಂದೇ ಮೀಸಲಿಡಲಾಗುತ್ತದೆ. ಆಗ ಈ ರಸ್ತೆಯ ಮೇಲೆ ಸಂಚರಿಸುವ ಪ್ರಾಣಿಗಳನ್ನು ಮೇಲ್ಸೇತುವೆಯ ಮೇಲೆ ಸಂಚರಿಸುವ ಪ್ರಯಾಣಿಕರು ವೀಕ್ಷಿಸಬಹುದು. ಇಂತಹ ಹೆದ್ದಾರಿಯು ಏಷ್ಯಾದಲ್ಲೇ ಮೊದಲನೆಯದಾಗಲಿದೆ.

Fertilizer plant: 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ರೀ ಓಪನ್, ಯೋಗಿ ತಾಯ್ನಾಡಿಗೆ ಉಡುಗೊರೆ

ಎಲಿವೇಟೆಡ್‌ ಹೆದ್ದಾರಿಯು ಶಿವಾಲಿಕ್‌ ಪರ್ವತ ಶ್ರೇಣಿಯಲ್ಲಿರುವ (Shivalik forest range) ರಾಜಾಜಿ ಹುಲಿ ರಕ್ಷಿತಾರಣ್ಯದ ಪಕ್ಕ ಹಾದುಹೋಗುತ್ತದೆ. ಇದರ ಕೆಳಗಿನ 16 ಕಿ.ಮೀ. ಉದ್ದದ ಉದ್ದೇಶಿತ ವೈಲ್ಡ್‌ಲೈಫ್‌ ಕಾರಿಡಾರ್‌ ಜನರ ಕಣ್ಣಿಗೊಂದು ಹಬ್ಬವಾಗಲಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ದೆಹಲಿ-ಡೆಹ್ರಾಡೂನ್‌ ಎಕನಾಮಿಕ್‌ ಕಾರಿಡಾರ್‌ಗೆ 12 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಇದನ್ನು ಪ್ರಶ್ನಿಸಿ ಪರಿಸರವಾದಿಗಳು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಧಿಕರಣದಲ್ಲಿ ನಡೆಯುತ್ತಿದೆ.

ಏನಿದು ಪ್ರಾಣಿಗಳ ಹೆದ್ದಾರಿ?

- ಉತ್ತರಾಖಂಡದ ರಾಜಾಜಿ ಹುಲಿ ರಕ್ಷಿತಾರಣ್ಯದಲ್ಲಿ ಎನ್‌ಎಚ್‌ 72ಎ ಇದೆ

- ಇದು ಆನೆ ಸೇರಿದಂತೆ ನಾನಾ ತರಹದ ವನ್ಯಜೀವಿಗಳು ಸದಾ ಸಂಚರಿಸುವ ಸ್ಥಳ

- ಈಗ ಈ ಹೆದ್ದಾರಿಯ ಮೇಲೆ 16 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ

- ಉದ್ದೇಶಿತ ದಿಲ್ಲಿ-ಡೆಹ್ರಾಡೂನ್‌ 210 ಕಿ.ಮೀ. ಹೆದ್ದಾರಿಯಲ್ಲಿ ಈ ಮೇಲ್ಸೇತುವೆ

- ಮೇಲ್ಸೇತುವೆ ನಿರ್ಮಾಣ ನಂತರ ಹಳೆಯ 16 ಕಿ.ಮೀ. ರಸ್ತೆ ಪ್ರಾಣಿಗಳ ಸಂಚಾರಕ್ಕೆ

- ಮೇಲ್ಸೇತುವೆ ಮೇಲೆ ಹೋಗುವವರು ಪ್ರಾಣಿಗಳ ಸಂಚಾರ ಕಣ್ತುಂಬಿಕೊಳ್ಳಬಹುದು

- ಇಂತಹ ವಿಶಿಷ್ಟಹೆದ್ದಾರಿ ನಿರ್ಮಾಣವಾಗುತ್ತಿರುವುದು ಏಷ್ಯಾದಲ್ಲೇ ಮೊದಲು

ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

 ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣದ (Line of Control) ಬಳಿಯಿರುವ ತೀತ್ವಾಲ್‌ನಲ್ಲಿರುವ (Teetwal) ಮಾತಾ ಶಾರದಾ ದೇವಿಯ ದೇವಸ್ಥಾನದ ಮರು ನಿರ್ಮಾಣಕ್ಕೆ ಸೇವ್‌ ಶಾರದ ಸಮಿತಿ(ಶಾರದ ಸಮಿತಿ ರಕ್ಷಣೆ - Save Sharda Committee) ಶುಕ್ರವಾರ (ಡಿ. 03) ಶಂಕು ಸ್ಥಾಪನೆ (Foundation Stone) ನೆರವೇರಿಸಿದೆ. ಈ ಕಾರ್ಯಕ್ರಮದಲ್ಲಿ 200 ಮಂದಿ ಸ್ಥಳೀಯರು, ಶಾರದಾ ಯೋಜನೆ ಬೆಂಬಲಿಸುವ 100 ಮಂದಿ ಭಾಗವಹಿಸಿದ್ದರು. ಈ ವೇಳೆ ಎಲ್ಲರಿಗೂ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಲಾಯಿತು

ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರತಿಕ್ರಿಯಿಸಿದ ಸಮಿತಿ, ‘ಶತಮಾನಗಳ ಕಾಲದಿಂದಲೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (Pakistan Occupied Kashmir) ಶಾರದ ಪೀಠಕ್ಕೆ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದರು. ಚರ್ರಿ ಮುಬಾರಕ್‌ (Charri Mubarak) ಎಂದೇ ಪ್ರಖ್ಯಾತಿಯಾಗಿದ್ದ ಈ ವಾರ್ಷಿಕ ಯಾತ್ರೆಗೆ ತೀತ್ವಾಲ್‌ನ ಈ ಶಾರದಾ ದೇವಸ್ಥಾನ ಸಾಂಪ್ರದಾಯಿಕ ಮಾರ್ಗವಾಗಿದೆ. ಪಿಒಕೆಯ ಶಾರದಾ ಪೀಠಕ್ಕೆ 1948ರ ವರೆಗೆ ಭಕ್ತರ ವಾರ್ಷಿಕ ಯಾತ್ರೆ ನಡೆಯುತ್ತಿತ್ತು. ಈ ವಾರ್ಷಿಕ ಯಾತ್ರೆಯನ್ನು ಪುನಃ ಉತ್ತೇಜಿಸಲು ಉತ್ತರ ಕಾಶ್ಮೀರದ ಕುಪ್ವಾರ (Kupwara) ಜಿಲ್ಲೆಯಲ್ಲಿರುವ ಪೌರಾಣಿಕ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದೆ.

Follow Us:
Download App:
  • android
  • ios