ಜಮ್ಮು ಮತ್ತು ಕಾಶ್ಮೀರದ ಶಾಂತಿ ಸೌಹಾರ್ಧತೆಗೆ ಕೇಂದ್ರದಿಂದ ಮತ್ತೊಂದು ಕ್ರಮ ಪ್ರತ್ಯೇಕ ಹೋರಾಟದ ಸಂಘಟನೆ ಹುರಿಯತ್ ಬಣಗಳನ್ನು ನಿಷೇಧಿಸಲು ನಿರ್ಧಾರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ನಿಷೇಧಕ್ಕೆ ತಯಾರಿ
ನವದೆಹಲಿ(ಆ.22): ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಆರ್ಟಿಕಲ್ 370 ರದ್ದು ಸೇರಿದಂತೆ ಐತಿಹಾಸಿಕ ನಿರ್ಧಾರಗಳು ಸೇರಿವೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ. ಶಾಂತಿ ಹಾಗೂ ಸೌಹಾರ್ಧತೆಗೆ ಹುರಿಯತ್ ಸಂಘಟನೆಗಳ ಬಣಗಳನ್ನು ನಿಷೇಧಿಸಲು ಕೇಂದ್ರ ಮುಂದಾಗಿದೆ.
ಗೃಹ ಬಂಧನದಲ್ಲಿರುವ ಮಿರ್‌ವೈಜ್ ಬಿಡುಗಡೆ ಯಾವಾಗ? ಹುರಿಯತ್ ಅಸಮಾಧಾನ?
ಕಳೆದ ಎರಡು ದಶಕ್ಕಿಂತಲೂ ಹೆಚ್ಚಿನ ಕಾಲ ಕಾಶ್ಮೀರವನ್ನು ಪ್ರತ್ಯೇಕಗೊಳಿಸಬೇಕು ಎಂದು ಹೋರಾಡುತ್ತಿರುವ ಹುರಿಯತ್ ಸಂಘಟನೆಗಳಿಗೆ ಅಂತಿಮ ಮೊಳೆ ಹೊಡೆಯಲು ಕೇಂದ್ರ ದಿಟ್ಟ ನಿರ್ಧಾರ ಕೈಗೊಂಡಿದೆ. ಆರ್ಟಿಕಲ್ 370 ರದ್ದತಿಯೊಂದಿಗೆ ಪ್ರತ್ಯೇಕತಾವಾದದ ಘೋಷಣೆಗಳು, ಪ್ರತಿಭಟನೆಗಳು ಅಂತ್ಯಗೊಂಡಿದೆ. ಇದೀಗ ತೆರೆಯ ಹಿಂದೆ ಕುಳಿತು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಆರೋಪ ಎದುರಿಸುತ್ತಿರುವ ಹುರಿಯತ್ ಬಣಗಳನ್ನು ನಿಷೇಧಿಸಲು ಕೇಂದ್ರ ತಯಾರಿ ನಡೆಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ(UAPA)ಸೆಕ್ಷನ್ 3(1) ಅಡಿಯಲ್ಲಿ ಹುರಿಯತ್ ಬಣಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ಕೇಂದ್ರದ ಅಧಿಕೃತ ಗೆಜೆಟ್‌ನಲ್ಲಿ ಸೂಚಿಸಿರುವಂತೆ ಯಾವುದೇ ಸಂಘಟನೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ, ಆ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ಕೇಂದ್ರಕ್ಕಿದೆ.
ಸರ್ಕಾರಿ ಸೌಲಭ್ಯವಿಲ್ಲ, ಪಾಸ್‌ಪೋರ್ಟ್ ಸಿಗಲ್ಲ; ದೇಶ ವಿರೋಧಿಗಳ ವಿರುದ್ಧ ಕಠಿಣ ನಿಯಮ ಜಾರಿ!
ಇತ್ತೀಚೆಗ ನಡೆದ ತನಿಖೆಯೊಂದು ಹುರಿಯತ್ ಅಸಲಿ ಬಣ್ಣವನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಶಿಕ್ಷಣ ಸಂಸ್ಥೆ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿತ್ತು. ಆದರೆ ಹುರಿಯತ್ ಸಂಘಟನೆ ವಿದ್ಯಾರ್ಥಿಗಳಿಂದ ಪಾಕಿಸ್ತಾನ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಪಡೆಯಲು ಹಣ ಪಡೆದಿದೆ. ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು
ಜಮ್ಮು-ಕಾಶ್ಮೀರದ ಶಾಲೆಗಳಿಗೆ ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಹೆಸರು
ಹುರಿಯತ್ ಸಂಘಟನೆ ಸದಸ್ಯರು ನಿಷೇಧಿತ ಹಿಜ್ಬ್ ಉಲ್ ಮುಜಾಹಿದ್ದೀನ್ ಸೇರಿದಂತೆ ಇತರ ಕೆಲ ಉಗ್ರ ಸಂಘಟನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಕೇಂದ್ರ ಶೀಘ್ರದಲ್ಲೇ ಹುರಿಯತ್ ಬಣಗಳನ್ನು ನಿಷೇಧಿಸುವ ಘೋಷಣೆ ಮಾಡುವ ಸಾಧ್ಯತೆ ಇದೆ.
