ಗಲಭೆ, ಕಲ್ಲು ತೂರಾಟ  ಸೇರಿ ಯಾವುದೇ ಅಪರಾಧದಲ್ಲಿ ಭಾಗಿಯಾದರೆ ಸಂಕಷ್ಟ ಸರ್ಕಾರಿ ಸೌಲಭ್ಯ ಸೇರಿ ಎಲ್ಲಾ ಸೌಲಭ್ಯಕ್ಕೆ ಕತ್ತರಿ, ಹೊಸ ನಿಯಮ ಜಾರಿ ದೇಶ ವಿರೋಧಿಗಳ ವಿರುದ್ಧ ಸಮರದ ಸಾರಿದೆ ಜೆ ಮತ್ತು ಕೆ  

ಶ್ರೀನಗರ(ಆ.1): ದೇಶ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಜಮ್ಮು ಮತ್ತು ಕಾಶ್ಮೀರ ಮುಂದಾಗಿದೆ. ಕಲ್ಲು ತೂರಾಟ, ಗಲಭೆ, ಪಿತೂರಿ ಸೇರಿದಂತೆ ಯಾವುದೇ ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡವರ ಎಲ್ಲ ಸೌಲಭ್ಯ ಕಡಿತಗೊಳಿಸಲು ಜಮ್ಮು ಮತ್ತು ಕಾಶ್ಮೀರ ಹೊಸ ಆದೇಶ ಹೊರಡಿಸಿದೆ.

ಕಾಶ್ಮೀರದಲ್ಲಿ ಈ ವರ್ಷ 89 ಉಗ್ರರ ಹತ್ಯೆ!

ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಹಾಗೂ ಉಗ್ರರ ಉಪಟಳಕ್ಕೆ ಸಂಂಪೂರ್ಣ ಬ್ರೇಕ್ ಹಾಕಲು ಮತ್ತೊಂದು ಮಹತ್ವದ ಆದೇಶ ಜಾರಿಯಾಗಿದೆ. ಕಲ್ಲು ತೂರಾಟ, ಗಲಭೆ, ಸೇನೆ ಹಾಗೂ ದೇಶದ ವಿರುದ್ಧ ಚಟುವಟಿಕೆ, ಪಿತೂರಿ, ಉಗ್ರರಿಗೆ ನೆರವು ಸೇರಿದಂತೆ ಕಾನೂನು ಸ್ಯುವಸ್ಥೆ ಹಾಳುಮಾಡುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ ಅಂತವರ ಸರ್ಕಾರಿ ಸೌಲಭ್ಯ ಕಡಿತವಾಗಲಿದೆ. ಪಾಸ್‌ಪೋರ್ಟ್ ಸಿಗುವುದಿಲ್ಲ.

Scroll to load tweet…

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ನೆರವು ನೀಡಿ ಬಳಿಕ ವಿದೇಶಕ್ಕೆ ಹಾರುವುದು ವಾಡಿಕೆಯಾಗಿದೆ. ಇತ್ತ ಕಲ್ಲು ತೂರಾಟ ಸೇರಿದಂತೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಬಳಿಕ ವಿದೇಶಕ್ಕೆ ಹಾರಿ ತಲೆಮೆರೆಸಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ದೇಶ ವಿರೋಧಿ ಚಟುವಟಿಕೆ ನಡೆಸಿದವರು, ನಡೆಸುತ್ತಿರುವವರರಿಗೆ ಪಾಠ ಕಲಿಸಲು ಜಮ್ಮ ಮತ್ತು ಕಾಶ್ಮೀರ ಸರ್ಕಾರ ಇದೀಗ ಈ ಕಠಿಣ ಆದೇಶ ಜಾರಿಗೊಳಿಸಿದೆ.

ಜಮ್ಮುವಿನಲ್ಲಿ ಸ್ಫೋಟಕ ಹೊತ್ತು ತಂದ ಡ್ರೋನ್ ಪತ್ತೆ

ಜಮ್ಮ ಮತ್ತು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಕಾಶ್ಮೀರದಲ್ಲಿ ಯಾವುದೇ ಅಹಿತರರ ಘಟನೆ ಸಂಭವಿಸದಂತೆ ತಡೆಯಲು ಹೆಚ್ಚಿನ ಸೇನೆ ನಿಯೋಜಿಸಲಾಗಿದೆ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ನಡೆಯುತ್ತಿದೆ ಅನ್ನೋ ಗುಪ್ತಚರ ಮಾಹಿತಿ ಆಧರಿಸಿ ಕಣಿವೆ ರಾಜ್ಯದಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ.

ಉಗ್ರರ ಪರ ಕೆಲಸ : 11 ಸರ್ಕಾರಿ ನೌಕರರು ವಜಾ

ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಇತ್ತ ದೆಹಲಿ ಕೆಂಪು ಕೋಟೆ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಉಗ್ರರ ದಾಳಿ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ಆಯಾ ರಾಜ್ಯದ ಗಹ ಇಲಾಖೆ ಭದ್ರತೆ ಹೆಚ್ಚಿಸಲು ಮುಂದಾಗಿದೆ.