ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯ, ಮಹಿಳಾ ಮೀಸಲಾತಿ ಮಸೂದೆಗೆ ಗ್ರೀನ್ ಸಿಗ್ನಲ್?
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯಗೊಂಡಿದೆ. ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಂಪುಟ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ವರದಿಗಳು ಹೇಳುತ್ತಿದೆ. ಇಂದು ನಡೆದ ಕ್ಯಾಬಿನೆಟ್ ಮೀಟಿಂಗ್ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಸೆ.18) ಕೇಂದ್ರ ಸರ್ಕಾರ ಕರೆದ ವಿಶೇಷ ಅಧಿವೇಶನ ಆರಂಭಗೊಂಡಿದೆ. ನಾಳೆಯಿಂದ ಹೊಸ ಸಂಸತ್ತಿಲ್ಲಿ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಕರೆದ ಕೇಂದ್ರ ಕ್ಯಾಬಿನೆಟ್ ಮೀಟಿಂಗ್ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿದೆ. ಪ್ರಮುಖವಾಗಿ ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ನಾಳೆ ಮಂಡನೆಯಾಗಲಿರುವ ಮಸೂದೆಗಳ ಕುರಿತು ಚರ್ಚಿಸಿ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದ ಮೂಲಗಳು ಹೇಳಿವೆ.
ವಿಪಕ್ಷಗಳ ಪ್ರಮುಖ ಬೇಡಿಯಾಗಿದ್ದ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ. ಆದರೆ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕೆಲ ಐತಿಹಾಸಿಕ ನಿರ್ಣಯಗಳಿಗೆ ಕರೆದಿದ್ದ ಕೇಂದ್ರ ಸಚಿವ ಸಂಪುಟ ಸಭೆ ಅಂತ್ಯಗೊಂಡಿದೆ.
ಹಳೇ ಸಂಸತ್ತಿನಲ್ಲಿ ಮೋದಿ ಕೊನೆಯ ಭಾಷಣ, ಪ್ರಮುಖರ ನೆನೆದು ವಿಪಕ್ಷಗಳಿಗೆ ಪ್ರಧಾನಿ ಟಾಂಗ್!
ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಒತ್ತಾಯಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಇದೀಗ ಹೊಸ ಸಂಸತ್ ಭವನದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಕೇಂದ್ರ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ಜೊತೆಗೆ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆ ಕುರಿತು ಚರ್ಚೆ ನಡೆದಿದೆ.
ಮಹಿಳೆಯರಿಗೆ ವಿಧಾನಸಭೆ ಮತ್ತು ಸಂಸತ್‌ನಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮೀಸಲು ಇಡುವುದು ಮಸೂದೆ ಉದ್ದೇಶ. 1996ರಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಸರ್ಕಾರ ಮೊದಲ ಬಾರಿಗೆ ಈ ಮಸೂದೆ ಮಂಡಿಸಿತ್ತು. ಆದರೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆ ಕಾರಣ ಇದುವರೆಗೂ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಅಂಗೀಕಾರ ಸಾಧ್ಯವಾಗಿಲ್ಲ. ಹಾಲಿ ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.14ರಷ್ಟಿದೆ.
'ಮೋದಿ ಭಾರತದ ಡೆಂಗ್ ಕ್ಸಿಯಾಪಿಂಗ್' ಭಾರತದ ಪ್ರಧಾನಿಯನ್ನು ಚೀನಾದ ಪ್ರಖ್ಯಾತ ನಾಯಕನಿಗೆ ಹೋಲಿಸಿದ ರೇ ಡಾಲಿಯೊ !
ಇಂದಿನಿಂದ(ಸೆ.18) ಐದು ದಿನಗಳ ವಿಶೇಷ ಸಂಸತ್ ಕಲಾಪ ಆರಂಭಗೊಂಡಿದೆ. ಮೊದಲ ದಿನ ಹಳೇ ಸಂಸತ್ ಭವನದಲ್ಲಿ ಲೋಕಸಭೆ ಅಧಿವೇಶನ ನಡೆದಿತ್ತು. ನಾಳೆಯಿಂದ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ.