Asianet Suvarna News Asianet Suvarna News

ನಿಯಮ ಉಲ್ಲಂಘಿಸಿದ ಕಂಪನಿಗೆ ವಿನಾಯ್ತಿ: ಸಂಪುಟ ಅಸ್ತು!

* ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ಉದ್ದೇಶ

* ನಿಯಮ ಉಲ್ಲಂಘಿಸಿದ ಕಂಪನಿಗೆ ವಿನಾಯ್ತಿ: ಸಂಪುಟ ಅಸ್ತು

* ಲಿಮಿಟೆಡ್‌ ಲಯಬಿಲಿಟಿ ಪಾರ್ಟನರ್‌ಶಿಪ್‌(ಎಲ್‌ಎಲ್‌ಪಿ) ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ

Union Cabinet Clears Limited Liability Partnership Amendment Bill pod
Author
Bangalore, First Published Jul 29, 2021, 10:03 AM IST

ನವದೆಹಲಿ(ಜು.29): ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ, ಲಿಮಿಟೆಡ್‌ ಲಯಬಿಲಿಟಿ ಪಾರ್ಟನರ್‌ಶಿಪ್‌(ಎಲ್‌ಎಲ್‌ಪಿ) ಕಾಯ್ದೆಗೆ ತಿದ್ದುಪಡಿಗಳನ್ನು ತರಲು ನಿರ್ಧರಿಸಿದೆ.

ಇದರೊಂದಿಗೆ ಈ ಕಾನೂನುಗಳನ್ನು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಅಪರಾಧೀಕರಣ ಆರೋಪದಡಿ ಕ್ರಮ ಕೈಗೊಳ್ಳುವುದರಿಂದ ವಿನಾಯ್ತಿ ಸಿಗಲಿದೆ. ಈ ಕಾಯ್ದೆ ತಿದ್ದುಪಡಿಯಿಂದ ಕಾಯ್ದೆಯ ಹಲವು ನಿಯಮಗಳನ್ನು ಉಲ್ಲಂಘಿಸಿದ ದೇಶದ 2.30 ಲಕ್ಷ ಕಂಪನಿಗಳಿಗೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಾಂಗ್ರೆಸ್‌ ಬಣ್ಣ ಬಯಲು ಮಾಡಿ: ಬಿಜೆಪಿ ಸಂಸದರಿಗೆ ಮೋದಿ ಕರೆ!

ಈ ಪ್ರಕಾರ ಇದೀಗ ಈ ಕಾಯ್ದೆಯ ನಿಯಮಗಳನ್ನು 22ಕ್ಕೆ ಸೀಮಿತಗೊಳಸಲಾಗಿದ್ದು, ಸಂಯುಕ್ತ ಅಪರಾಧಗಳನ್ನು 7ಕ್ಕೆ ಮತ್ತು ಅಸಂಯುಕ್ತ ಅಪರಾಧಗಳ ಸಂಖ್ಯೆಯನ್ನು 3ಕ್ಕೆ ಇಳಿಕೆ ಸೇರಿದಂತೆ ಹಲವು ಬದಲಾವಣಎಗಳನ್ನು ತರಲಾಗಿದೆ ಎಂದು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಎಲ್‌ಎಲ್‌ಪಿ ಕಾಯ್ದೆಯಡಿ 81 ಸೆಕ್ಷನ್‌ಗಳು ಮತ್ತು 4 ಶೆಡ್ಯೂಲ್‌ಗಳಿವೆ.

Follow Us:
Download App:
  • android
  • ios