Asianet Suvarna News Asianet Suvarna News

ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ

ಸಂಹಿತೆ ರಾಷ್ಟ್ರೀ​ಯ ವಿಷ​ಯ, ಇದರ ಜಾರಿಗೆ ಬದ್ಧ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಘೋಷ​ಣೆ ಮಾಡಿದ್ದಾರೆ. ಕರ್ನಾ​ಟ​ಕ​ದಲ್ಲೂ ಸಂಹಿತೆ ಸದ್ದು ಎದ್ದಿ​ರುವ ನಡುವೆ ಈ ಹೇಳಿ​ಕೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. 

uniform civil code is a national issue would like to implement it in as many states as possible jp nadda ash
Author
First Published Nov 28, 2022, 9:47 AM IST

ಅಹ​ಮ​ದಾ​ಬಾ​ದ್‌: ‘ಸಾ​ಧ್ಯ​ವಾ​ದಷ್ಟು ಎಲ್ಲ ರಾಜ್ಯ​ಗ​ಳಲ್ಲಿ ಏಕ​ರೂಪ ನಾಗ​ರಿಕ ಸಂಹಿತೆ (Unifrom Civil Code) ಜಾರಿ​ಗೊ​ಳಿ​ಸ​ಲು ಬಿಜೆಪಿ ಇಚ್ಛಿ​ಸು​ತ್ತ​ದೆ’ ಎಂದು ಹೇಳಿ​ರುವ ಬಿಜೆಪಿ (BJP) ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda), ‘ಸಂಹಿತೆ ಎಂಬುದು ರಾಷ್ಟ್ರೀಯ ವಿಷಯ. ಇದರ ಜಾರಿಗೆ ಪಕ್ಷ ಬದ್ಧ’ ಎಂದಿ​ದ್ದಾ​ರೆ. ಈಗಾ​ಗಲೇ ಗುಜ​ರಾ​ತ್‌ (Gujarat), ಹಿಮಾ​ಚಲ ಪ್ರದೇಶ (Himachal Pradesh) ಹಾಗೂ ಉತ್ತ​ರಾ​ಖಂಡ​ದಲ್ಲಿ (Uttarakhand) ಏಕ​ರೂಪ ಸಂಹಿತೆ ಅಧ್ಯ​ಯ​ನಕ್ಕೆ ಸಮಿ​ತಿ ರಚನೆ ಘೋಷಿ​ಸ​ಲಾ​ಗಿದೆ. ಕರ್ನಾ​ಟಕ (Karnataka) ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ (Basavaraj Bommai) ಕೂಡ ಸಂಹಿತೆ ಜಾರಿ ಬಗ್ಗೆ ಮಾತ​ನಾ​ಡು​ತ್ತಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ನಡ್ಡಾ ಮಾತಿಗೆ ಮಹತ್ವ ಬಂದಿ​ದೆ.

ಗುಜ​ರಾತ್‌ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ‘ಪಿ​ಟಿಐ ಸುದ್ದಿ​ಸಂಸ್ಥೆ​’ ಜತೆ ಮಾತ​ನಾ​ಡಿದ ನಡ್ಡಾ ಅವರು, ‘ದೇ​ಶದ ಸಂಪ​ನ್ಮೂ​ಲ​ಗಳು ಎಲ್ಲ​ರಿಗೂ ಹೇಗೆ ಸಮಾನ ಹಂಚಿಕೆ ಆಗ​ಬೇಕೋ ಹಾಗೆಯೇ ಹೊಣೆ​ಗಾ​ರಿಕೆ ಕೂಡ ಸಮಾ​ನ​ವಾಗಿ ಹಂಚಿಕೆ ಆಗ​ಬೇಕು. ಈ ನಿಟ್ಟಿ​ನಲ್ಲಿ ಎಲ್ಲ​ರಿಗೂ ಸಮಾನ ಕಾನೂನು ನೀಡುವ ಏಕ​ರೂಪ ನಾಗ​ರಿಕ ಸಂಹಿತೆ ಸ್ವಾಗ​ತಾರ್ಹ ಹೆಜ್ಜೆ. ಸಂಹಿ​ತೆಯು ಬಿಜೆಪಿ ಪಾಲಿಗೆ ರಾಷ್ಟ್ರೀಯ ವಿಷಯ ಹಾಗೂ ಇದರ ಜಾರಿ​ಗೆ ಪಕ್ಷ ಬದ್ಧ. ನಾವು ಸಾಧ್ಯವಾದಷ್ಟು ಎಲ್ಲ ರಾಜ್ಯ​ಗ​ಳಲ್ಲಿ ಇದರ ಜಾರಿಗೆ ಇಚ್ಛಿ​ಸು​ತ್ತೇ​ವೆ’ ಎಂದ​ರು.

ಇದನ್ನು ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ

ಉಗ್ರ ನಿಗ್ರ​ಹ ಘಟ​ಕಕ್ಕೆ ಸಮ​ರ್ಥ​ನೆ
ಭಾರತ ವಿರೋಧಿ ಶಕ್ತಿಗಳ ಸ್ಲೀಪರ್‌ ಸೆಲ್‌ಗಳನ್ನು ಗುರುತಿಸಿ, ಮಟ್ಟಹಾಕಲು ಪ್ರತ್ಯೇಕ ಮೂಲಭೂತವಾದ ನಿಗ್ರಹ ಘಟಕಕ್ಕೆ ಗುಜ​ರಾತ್‌ ಬಿಜೆ​ಪಿ ಪ್ರಣಾ​ಳಿ​ಕೆ​ಯಲ್ಲಿ ಘೋಷಣೆ ಆಗಿ​ದ್ದರ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ನಡ್ಡಾ, ‘ಮಾನ​ವನ ದೇಹ​ದಲ್ಲಿ ಪ್ರತಿ​ಕಾಯ ಶಕ್ತಿ​ಗಳು ರೋಗ ತಡೆ​ಯು​ತ್ತವೆ. ಅದೇ ರೀತಿ ರಾಷ್ಟ್ರ ವಿರೋಧಿ ಶಕ್ತಿ​ಗ​ಳನ್ನು ತಡೆ​ಯು​ವುದು ಎಲ್ಲ ರಾಜ್ಯ​ಗಳ ಹೊಣೆ​ಗಾ​ರಿ​ಕೆ’ ಎಂದು ಸಮ​ರ್ಥಿ​ಸಿ​ಕೊಂಡ​ರು.

ಮುಸ್ಲಿ​ಮ​ರಿಗೆ ಟಿಕೆಟ್‌ ಏಕಿ​ಲ್ಲ?:
‘ಗುಜ​ರಾ​ತ್‌​ನಲ್ಲಿ ಮುಸ್ಲಿ​ಮ​ರಿಗೆ ಟಿಕೆಟ್‌ ಏಕೆ ನೀಡಿ​ಲ್ಲ?’ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ‘ಗೆ​ಲು​ವಿನ ಮಾನ​ದಂಡ ಆಧ​ರಿಸಿ ಟಿಕೆಟ್‌ ನೀಡಿದ್ದೇವೆ. ಜಾತಿ ಧರ್ಮ ಆಧ​ರಿಸಿ ಅಲ್ಲ. ಆದರೆ ಬಿಜೆಪಿ ಮುಸ್ಲಿ​ಮ​ರನ್ನೂ ರಾಷ್ಟ್ರಪತಿ, ರಾಜ್ಯ​ಪಾ​ಲ​ರ​ನ್ನಾಗಿ ಮಾಡಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಮ್ಮ ಧ್ಯೇಯ’ ಎಂದ​ರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧ: ಅಮಿತ್‌ ಶಾ

ನಮ್ಮದು ಪುಕ್ಕಟೆ ಕೊಡುಗೆ ಅಲ್ಲ:
‘ಒಂದು ಕಡೆ ವಿಪ​ಕ್ಷ​ಗಳ ಪುಕ್ಕಟೆ ಕೊಡುಗೆ ಟೀಕಿಸಿ ಗುಜ​ರಾ​ತ್‌ನ ನಿಮ್ಮ ಪ್ರಣಾ​ಳಿ​ಕೆ​ಯಲ್ಲೂ ಪುಕ್ಕಟೆ ಕೊಡುಗೆ ಘೋಷ​ಣೆ ಮಾಡಿ​ದ್ದೀ​ರ​ಲ್ಲ?’ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ನಡ್ಡಾ, ‘ನ​ಮ್ಮದು ಪುಕ್ಕಟೆ ಕೊಡುಗೆ ಎನ್ನ​ಲಾ​ಗದು. ಯಾರು ದುರ್ಬ​ಲ​ರಿ​ದ್ದಾರೋ ಅವರ ಉದ್ಧಾ​ರಕ್ಕೆ ಮಾತ್ರ ಉಚಿತ ಕೊಡುಗೆ ನೀಡ​ಲಾ​ಗು​ತ್ತಿದೆ. ಕಾಂಗ್ರೆಸ್‌, ಆಪ್‌​ನಂತೆ ಎಲ್ಲ​ರಿಗೂ ಉಚಿತ ಕೊಡುಗೆ ನೀಡು​ತ್ತೇವೆ ಎಂದು ನಾವು ಘೋಷಿ​ಸಿಲ್ಲ. ಆಪ್‌ ಹಾಗೂ ಕಾಂಗ್ರೆ​ಸ್‌ ಅಧಿ​ಕಾ​ರ​ಕ್ಕೆ ಬರ​ಲ್ಲ. ಅದಕ್ಕೆ ಅವರು ರಾಜ್ಯದ ಆರ್ಥಿಕ ಸ್ಥಿತಿ ಮನ​ಗಾ​ಣದೆ ಬಾಯಿಗೆ ಬಂದಂತೆ ಪುಕ್ಕಟೆ ಕೊಡುಗೆ ಘೋಷಿ​ಸು​ತ್ತಿವೆ. ಆದರೆ ನಾವು ರಾಜ್ಯದ ಆರ್ಥಿಕತೆ ಗಮ​ನ​ದಲ್ಲಿ ಇರಿ​ಸಿ​ಕೊಂಡು ದುರ್ಬ​ಲ​ರಿಗೆ ಮಾತ್ರ ಉಚಿತ ಕೊಡುಗೆ ನೀಡು​ತ್ತೇ​ವೆ’ ಎಂದ​ರು.

ಇದನ್ನೂ ಓದಿ: ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ

Follow Us:
Download App:
  • android
  • ios