ವಿಡಿಯೋದ ಆರಂಭದಲ್ಲಿ ಈ ವ್ಯಕ್ತಿ ಏನೋ ಒಂದು ಕಲೆಯನ್ನು ತೋರಿಸಲಿದ್ದಾನೆ ಎಂದು ನಿಮಗೆ ಅನಿಸುತ್ತದೆ. ಆದರೆ ಕೊನೆಯಲ್ಲಿ ನೀವು ಖಂಡಿತವಾಗಿಯೂ ಸರ್‌ಪ್ರೈಸ್ ಆಗ್ತೀರಿ. ಹಾಗಾದರೆ ವಿಡಿಯೋದಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ..

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ವಿಡಿಯೋಗಳು ಮಾತ್ರ ಬಳಕೆದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ. ಇಂತಹುದೇ ಒಂದು ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಅದನ್ನು ನೋಡಿದರೆ ಖಂಡಿತ ನೀವು ಬಿದ್ದು ಬಿದ್ದು ನಗುತ್ತೀರಿ. ಅಷ್ಟಕ್ಕೂ ಆಗಿದ್ದೇನು ಅಂತೀರಾ?. ಬಹುಶಃ ಈ ವಿಡಿಯೋ ನೋಡಿದ ಮೇಲೆ ನಿಮಗನಿಸುವುದು ನೋಡಲು ಇದೊಂದು ಬಾಕಿ ಉಳಿದಿತ್ತು. ವಿಡಿಯೋದ ಆರಂಭದಲ್ಲಿ ಈ ವ್ಯಕ್ತಿ ಏನೋ ಒಂದು ಕಲೆಯನ್ನು ತೋರಿಸಲಿದ್ದಾನೆ ಎಂದು ನಿಮಗೆ ಅನಿಸುತ್ತದೆ. ಆದರೆ ಕೊನೆಯಲ್ಲಿ ನೀವು ಖಂಡಿತವಾಗಿಯೂ ಸರ್‌ಪ್ರೈಸ್ ಆಗ್ತೀರಿ. ಹಾಗಾದರೆ ವಿಡಿಯೋದಲ್ಲಿ ಅಂಥದ್ದೇನಿದೆ ನೋಡೋಣ ಬನ್ನಿ..

ವಿಡಿಯೋದಲ್ಲೇನಿದೆ?
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬ ಹುಡುಗ ಪಾಲಿಥಿನ್ ಬ್ಯಾಗ್‌ನಲ್ಲಿ ಹಲವು ಸೋಪುಗಳನ್ನು ತರುವುದನ್ನು ಕಾಣಬಹುದು. ಇದಾದ ನಂತರ, ಅವನು ಅವುಗಳನ್ನು ನೆಲದ ಮೇಲೆ ಇರಿಸಿ ಆ ಎಲ್ಲಾ ಸೋಪುಗಳನ್ನು ಪ್ಯಾಕೆಟ್‌ನಿಂದ ಒಂದೊಂದಾಗಿ ಹೊರತೆಗೆಯಲು ಪ್ರಾರಂಭಿಸುತ್ತಾನೆ. ಕೊನೆಗೆ ಅವನು ಅವುಗಳನ್ನು ಸೂಜಿ ಮತ್ತು ದಾರದ ಸಹಾಯದಿಂದ ಪೋಣಿಸಲು ಪ್ರಾರಂಭಿಸುತ್ತಾನೆ. ಕೊನೆಯವರೆಗೆ ಅವನು ಏನು ಮಾಡುತ್ತಿದ್ದಾನೆಂದು ಸ್ಪಷ್ಟವಾಗಿ ಗೊತ್ತಾಗಲ್ಲ. ಆದರೆ ಕೊನೆ ಕ್ಷಣದಲ್ಲಿ ಅವನ ವಿಡಿಯೋ ನೋಡಿದ್ಮೇಲೆ ಸುಸ್ತಾಗ್ತೀರಿ. ಹೌದು, ಅವನು ಆ ಸೋಪುಗಳ ಸಹಾಯದಿಂದ ಹುಡುಗಿಯ ಉಡುಪನ್ನು ತಯಾರಿಸಿ ಅದನ್ನು ಧರಿಸಿಯೂ ತೋರಿಸುತ್ತಾನೆ.

Scroll to load tweet…

ನೆಟ್ಟಿಗರು ಹೇಳಿದ್ದೇನು?
ನೀವು ಈಗಷ್ಟೇ ನೋಡಿದ ವಿಡಿಯೋವನ್ನು @desimojito ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಗುಪ್ತವಾಗಿ ಉಳಿಯಬೇಕಾದ ಗುಪ್ತ ಪ್ರತಿಭೆ' ಎಂದು ಶೀರ್ಷಿಕೆ ಕೊಡಲಾಗಿದೆ. ಸುದ್ದಿ ಬರೆಯುವವರೆಗೂ, ಅನೇಕ ಜನರು ವಿಡಿಯೋ ನೋಡಿದ್ದಾರೆ. ವಿಡಿಯೋ ನೋಡಿದ ನಂತರ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಹೋದರ, "ಈ ಹುಡುಗರು ಈ ದಿನಗಳಲ್ಲಿ ಏಕೆ ಹುಡುಗರಲ್ಲ?" "ಇದು ಏನು"?, "ಸಂತೂರ್ ಗರ್ಲ್" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ಕಾಣಬಹುದು.

ಸಖತ್ ವೈರಲ್ ಆದ ಮತ್ತೊಂದು ವಿಡಿಯೋ
ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ರೊಟ್ಟಿಯನ್ನು ತಟ್ಟುವ ವಿಶಿಷ್ಟ ವಿಧಾನ (Roti-Making Method Earlier) ವೈರಲ್ ಆಗಿತ್ತು. ಅವರ ಈ ಟೆಕ್ನಿಕ್‌ನಿಂದ ಏಕಕಾಲದಲ್ಲಿ 4-5 ರೊಟ್ಟಿಗಳನ್ನು ತಟ್ಟಿ ಬೇಯಿಸಿದ್ದರು. ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ವಿಶಿಷ್ಟವಾಗಿ ಏಕಕಾಲದಲ್ಲಿ ಅನೇಕ ರೊಟ್ಟಿಗಳನ್ನು ತಯಾರಿಸುವುದನ್ನು ಕಾಣಬಹುದು. ಈ ವಿಧಾನವು ತುಂಬಾ ಪರಿಣಾಮಕಾರಿ ಮತ್ತು ಆಸಕ್ತಿದಾಯಕವಾಗಿದ್ದು, ಜನರು ಅದನ್ನು ನೋಡಿ ಬೆರಗಾಗುತ್ತಾರೆ ಮತ್ತು ಅನೇಕ ಜನರು ಇದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆ
ವಿಡಿಯೋದಲ್ಲಿ ಮಹಿಳೆ ಸಾಂಪ್ರದಾಯಿಕ ವಿಧಾನಗಳಾದ ಲಟ್ಟಣಿಗೆಯಲ್ಲಿ ತಟ್ಟೋದು ಮತ್ತು ಸ್ಟೌವ್‌ನಲ್ಲೇ ಮಾಡೋದನ್ನು ಹೊರತುಪಡಿಸಿ ಭಿನ್ನವಾದ ವಿಧಾನವನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಇದರಲ್ಲಿ 4 ರಿಂದ 5 ರೊಟ್ಟಿಗಳನ್ನು ಏಕಕಾಲದಲ್ಲಿ ತಟ್ಟಿ ಬೇಯಿಸಲಾಗುತ್ತದೆ. ಕೆಲವರು ಇದನ್ನು 'ಮಲ್ಟಿ-ಟಾಸ್ಕಿಂಗ್ ರೊಟ್ಟಿ ಸ್ಟೈಲ್' ಎಂದು ಕರೆಯುತ್ತಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡಲು ಸ್ಮಾರ್ಟ್ ತಂತ್ರಗಳನ್ನು ಅಳವಡಿಸಿಕೊಳ್ಳಲು ಬಯಸುವ ಮಹಿಳೆಯರು ಮತ್ತು ಗೃಹಿಣಿಯರು ಈ ವಿಡಿಯೋವನ್ನು ವಿಶೇಷವಾಗಿ ಇಷ್ಟಪಟ್ಟಿದ್ದಾರೆ. ಕಡಿಮೆ ಸಮಯ, ಕಡಿಮೆ ಶ್ರಮ ಮತ್ತು ಹೆಚ್ಚಿನ ಉತ್ಪಾದನೆ ಈ ಸ್ಟೈಲ್‌ನ ವಿಶೇಷತೆಯಾಗಿದೆ. ವಿಡಿಯೋ ಸಾವಿರಾರು ಲೈಕ್ಸ್‌ ಮತ್ತು ಶೇರ್‌ಗಳನ್ನು ಪಡೆದುಕೊಂಡಿದೆ. ಜನರು ಸಹ ಇದಕ್ಕೆ ಅತ್ಯುತ್ತಮ ರೀತಿಯಲ್ಲೇ ಕಾಮೆಂಟ್ ಮಾಡುತ್ತಿದ್ದಾರೆ.