Asianet Suvarna News Asianet Suvarna News

ಜಮ್ಮು ಕಾಶ್ಮೀರ, ಲಡಾಖ್‌ ಬಿಟ್ಟು ಭಾರತದ ನಕ್ಷೆಯನ್ನು ಚಿತ್ರಿಸಿದ ವಿಶ್ವಸಂಸ್ಥೆ: ಹೊಸ ವಿವಾದ ಸೃಷ್ಟಿ

ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ಕೈ ಬಿಡಲಾಗಿದೆ. ಆದರೂ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಭಾರತದ ಭೂಪಟವನ್ನು ತಪ್ಪಾಗಿ ಚಿತ್ರಿಸಿರುವುದು ಇದೇ ಮೊದಲಲ್ಲ.

un world population dashboard shows ladakh jammu and kashmir as regions separate from india ash
Author
First Published Apr 19, 2023, 3:49 PM IST

ನವದೆಹಲಿ (ಏಪ್ರಿಲ್ 19, 2023): ವಿಶ್ವದ ಜನಸಂಖ್ಯೆ ವಿಚಾರದಲ್ಲೀಗ ಭಾರತವೇ ನಂಬರ್ 1. ಈ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿದ್ದು, ಚೀನಾವನ್ನು ನಮ್ಮ ದೇಶ ಹಿಂದಿಕ್ಕಿದೆಯಂತೆ. ಇನ್ನು, ಈ ವಿಚಾರ ಪ್ರಕಟಿಸಲು ಹೋಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. ನಮ್ಮ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌ ಹಾಗೂ ಜಮ್ಮು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕ ಪ್ರದೇಶವೆಂದು ಡ್ಯಾಶ್‌ಬೋರ್ಡ್‌ನಲ್ಲಿ ಈ ಸಂಸ್ಥೆ ತೋರಿಸುತ್ತದೆ.

ಹೌದು, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು (United Nations Population Fund) ತನ್ನ ವಿಶ್ವ ಜನಸಂಖ್ಯೆಯ ಡ್ಯಾಶ್‌ಬೋರ್ಡ್‌ನಲ್ಲಿ ಭಾರತದ (India) ನಕ್ಷೆಯನ್ನು ತಪ್ಪಾಗಿ ಚಿತ್ರಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಮತ್ತು ಜನಸಂಖ್ಯೆಯ (Population) ವಿಷಯದಲ್ಲಿ ನಮ್ಮ ದೇಶವು ಚೀನಾವನ್ನು (China) ಮೀರಿಸಿದೆ ಎಂದು ತಿಳಿಸಿದೆ. ಈ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ (Jammu and Kashmir) ಪಾಕ್ ಆಕ್ರಮಿತ ಕಾಶ್ಮೀರ (Pak Occupied Kashmir) ಮತ್ತು ಲಡಾಖ್‌ನ (Ladakh) ಕೆಲವು ಭಾಗಗಳನ್ನು ಕೈ ಬಿಡಲಾಗಿದೆ. ಆದರೂ, ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಭಾರತದ ಭೂಪಟವನ್ನು ತಪ್ಪಾಗಿ ಚಿತ್ರಿಸಿರುವುದು ಇದೇ ಮೊದಲಲ್ಲ ಬಿಡಿ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕ ಪ್ರದೇಶಗಳಾಗಿ ಶೇಡ್‌ ಮಾಡಿರುವ ನಿದರ್ಶನಗಳೂ ಇವೆ.

ಇದನ್ನು ಓದಿ: India Population Surpasses China: ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಭಾರತ!

ಈ ಬಾರಿ, ಅಕ್ಸಾಯ್ ಚಿನ್, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ವಿವಾದಿತ ಗಡಿಯನ್ನು ಪ್ರತ್ಯೇಕ ಪ್ರದೇಶವೆಂದು ತೋರಿಸಲಾಗಿದೆ ಮತ್ತು ಪಿಒಕೆ ಅನ್ನು ಪಾಕಿಸ್ತಾನ ದೇಶದ ಭಾಗವಾಗಿ ತೋರಿಸಲಾಗಿದೆ. ಇನ್ನು, ಈ ತಪ್ಪಾದ ನಕ್ಷೆ ಬಗ್ಗೆ ಡಿಸ್‌ಕ್ಲೇಮರ್‌ ಅನ್ನು ಹಾಕಿಕೊಂಡಿರುವ ವಿಶ್ವ ಜನಸಂಖ್ಯೆಯ ಡ್ಯಾಶ್‌ಬೋರ್ಡ್  "ಈ ನಕ್ಷೆಯಲ್ಲಿ ತೋರಿಸಿರುವ ಗಡಿಗಳು ಮತ್ತು ಹೆಸರುಗಳು ಹಾಗೂ ಪದನಾಮಗಳು ವಿಶ್ವಸಂಸ್ಥೆಯ ಅಧಿಕೃತ ಅನುಮೋದನೆ ಅಥವಾ ಸ್ವೀಕಾರವನ್ನು ಸೂಚಿಸುವುದಿಲ್ಲ’’ ಎಂದು ಸಮರ್ಥನೆಯನ್ನೂ ಕೊಟ್ಟುಕೊಂಡಿದೆ.

2021 ರಲ್ಲಿ ಸಹ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದ ತಪ್ಪಾದ ನಕ್ಷೆಯನ್ನು ಚಿತ್ರಿಸಿತ್ತು. ಈ ಸಮಸ್ಯೆ ಬಗ್ಗೆ ಕೆಂದ್ರ ಸರ್ಕಾರ ಪ್ರಶ್ನೆ ಮಾಡಿ, ಬಳಿಕ ತನ್ನ ವೆಬ್‌ಸೈಟ್‌ನಲ್ಲಿ ಹಕ್ಕು ನಿರಾಕರಣೆ (ಡಿಸ್‌ಕ್ಲೇಮರ್‌) ಹಾಕಲು ಒತ್ತಾಯಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ ಜಮ್ಮು ಮತ್ತು ಕಾಶ್ಮೀರ  ಹಾಗೂ ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳನ್ನು ಭಾರತದ ಉಳಿದ ಭಾಗಗಳಿಗಿಂತ ವಿಭಿನ್ನ ಬಣ್ಣಗಳಲ್ಲಿ ತೋರಿಸಿ ವಿವಾದಕ್ಕೀಡಾಗಿತ್ತು.

ಇದನ್ನೂ ಓದಿ: ಯುವಕರು ಮದುವೆಯಾಗದೇ ಜಪಾನ್‌ನಲ್ಲಿ ಜನಸಂಖ್ಯೆ ಹೆಚ್ಚಾಗಲ್ಲ: ಅಸ್ತಿತ್ವವನ್ನೇ ಕಳಕೊಳ್ಳುವ ಭೀತಿ..!
 
ಕೇಂದ್ರಾಡಳಿತ ಪ್ರದೇಶಗಳನ್ನು ಬೂದು ಬಣ್ಣದಲ್ಲಿ ತೋರಿಸಿದ್ದ ನಕ್ಷೆಯು ಭಾರತದ ಉಳಿದ ಭಾಗಗಳನ್ನು ಮಾತ್ರ ಗಾಢ ನೀಲಿ ಬಣ್ಣದಲ್ಲಿ ತೋರಿಸಿತ್ತು. ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿ ಪ್ರದೇಶವಾದ ಅಕ್ಸಾಯ್ ಚಿನ್ ಕೂಡ ನೀಲಿ ಪಟ್ಟೆಗಳೊಂದಿಗೆ ಬೂದು ಬಣ್ಣವನ್ನು ಹೊಂದಿತ್ತು.

ಇದೇ ರೀತಿ, ವಿಶ್ವಸಂಸ್ಥೆಯ ಅಂಗಸಂಸ್ಥೆ ಸಹ ಹೊಸ ವಿವಾದ ಸೃಷ್ಟಿ ಮಾಡಿದ್ದು, ಈ ವಿಷಯದ ಬಗ್ಗೆ ವಿದೇಶಾಂಗ ಇಲಾಖೆಯ (ಎಂಇಎ)  ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಸ್ವಿಟ್ಜರ್ಲೆಂಡ್‌ನ ಈ ಗ್ರಾಮದಲ್ಲಿ ನೆಲೆಸಿದ್ರೆ ನಿಮಗೆ ಸಿಗುತ್ತೆ ಕೋಟಿ ಕೋಟಿ ಹಣ..!

Follow Us:
Download App:
  • android
  • ios