ಸ್ವಿಟ್ಜರ್ಲೆಂಡ್‌ನ ಈ ಗ್ರಾಮದಲ್ಲಿ ನೆಲೆಸಿದ್ರೆ ನಿಮಗೆ ಸಿಗುತ್ತೆ ಕೋಟಿ ಕೋಟಿ ಹಣ..!

ಸ್ವಿಟ್ಜರ್ಲೆಂಡ್ ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ದೇಶವು ತುಲನಾತ್ಮಕವಾಗಿ ಕಡಿಮೆ ಹಿಂಸಾತ್ಮಕ ಅಪರಾಧ ದರವನ್ನು ಹೊಂದಿದೆ. ಹೆಚ್ಚುವರಿಯಾಗಿ, ಅಲ್ಬಿನೆನ್ ಗ್ರಾಮವು ಉತ್ತಮ ಗಾಳಿಯ ಗುಣಮಟ್ಟವನ್ನು ನೀಡುತ್ತದೆ, ವರ್ಷವಿಡೀ ಹಲವು ಗಂಟೆಗಳಷ್ಟು ಸೂರ್ಯನ ಬೆಳಕು ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.

get rs 50 lakh to settle in this stunning village in switzerland check eligibility ash

ಸ್ವಿಟ್ಜರ್ಲೆಂಡ್‌ (ಮಾರ್ಚ್‌ 15, 2023):  ಸ್ವಿಟ್ಜರ್ಲೆಂಡ್‌ ಜಗತ್ತಿನ ಅದ್ಭುತ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಹೋಗ್ತಾರೆ. ನಾವೂ ಸ್ವಿಡ್ಜರ್ಲೆಂಡ್‌ಗೆ ಹೋದ್ರೆ ಹೇಗೆ, ಅಲ್ಲಿನ ಪರಿಸರ, ಅದ್ಭುತ ವಾತಾವರಣವನ್ನು ಎಂಜಾಯ್‌ ಮಾಡ್ಬೋದು ಅಂತ ಅನೇಕರಿಗೆ ಅನಿಸಿರುತ್ತೆ. ಅಲ್ಲದೆ, ಟೂರ್‌ ಹೋಗೋಕೂ ಅನೇಕರು ಪ್ಲ್ಯಾನ್‌ ಮಾಡ್ತಿರ್ತಾರೆ. ಟೂರ್‌ ಏಕೆ.. ನೀವು ಅಲ್ಲೇ ಹೋಗಿ ಸೆಟಲ್‌ ಆಗ್ಬೋದು ನೋಡಿ.. ನಿಮಗೆ ಸ್ವಿಟ್ಜರ್ಲೆಂಡ್‌ನಲ್ಲೇ ಹೋಗಿ ವಾಸ ಮಾಡಲು ಇಚ್ಛಿಸುತ್ತಿದ್ರೆ ನಿಮಗೆ ಇಲ್ಲಿದೆ ಅದ್ಭುತ ಅವಕಾಶ. ನೀವು ಅಲ್ಲಿಗೆ ಹೋದ್ರೆ ನಿಮಗೆ ದುಡ್ಡೂ ಸಿಗುತ್ತೆ ನೋಡಿ..

ಸ್ವಿಡ್ಜರ್ಲೆಂಡ್‌ಗೆ (Switzerland) ಹೋಗೋ ಆಸೆ.. ಆದ್ರೆ, ಹಣ (Money) ಇಲ್ಲ ಅಂತ ಚಿಂತೆನಾ.. ನೀವು ಸ್ವಿಟ್ಜರ್ಲೆಂಡ್‌ನ ಈ ಹಳ್ಳಿಗೆ (Village) ಹೋಗಿ ಸೆಟಲ್‌ ಆದ್ರೆ ನಿಮಗೇ 50 ಲಕ್ಷ ರೂ. ಕೊಡ್ತಾರೆ ನೋಡಿ.. ಹೌದು, ಸ್ವಿಟ್ಜರ್ಲೆಂಡ್‌ನ ವಲೈಸ್ ಕ್ಯಾಂಟನ್‌ನಲ್ಲಿರುವ ಅಲ್ಬಿನೆನ್ (Albinen) ಗ್ರಾಮವು ಈ ಅವಕಾಶ ನೀಡ್ತಿದೆ. ಸುಂದರವಾದ ಪರ್ವತ ಕಣಿವೆಯ (Mountain Valley) ಹಳ್ಳಿಗೆ ನಿಮ್ಮ ಕುಟುಂಬದೊಡನೆ ಸ್ಥಳಾಂತರಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತಿದೆ. ಈ ಗ್ರಾಮವು ಸಮುದ್ರ ಮಟ್ಟದಿಂದ 4,265 ಅಡಿ ಎತ್ತರದಲ್ಲಿದ್ದು, ಮತ್ತು ಹಿಮದಿಂದ ಆವೃತವಾದ ಶಿಖರಗಳ ಅದ್ಭುತ ನೋಟವನ್ನು ನೀಡುತ್ತದೆ.

ಇದನ್ನು ಓದಿ: ಇಬ್ಬರು ಹೆಂಡಿರ ಮುದ್ದಿನ ಗಂಡ: ಇಬ್ಬರ ಜೊತೆಗೂ ವಾರದಲ್ಲಿ 3 ದಿನ ಕಳೆಯಲು ಆದೇಶಿಸಿದ ಕೋರ್ಟ್‌..!

ಆದರೂ, ಈ ಗ್ರಾಮದಲ್ಲಿದ್ದ ಹೆಚ್ಚಿನ ನಿವಾಸಿಗಳು ಸುತ್ತಮುತ್ತಲಿನ ನಗರಗಳಲ್ಲಿ ಸೆಟಲ್‌ ಆಗಲು ಗ್ರಾಮೀಣ ಸಮುದಾಯವನ್ನು ತೊರೆಯುತ್ತಿರುವುದರಿಂದ ಸಣ್ಣ ಹಳ್ಳಿಯು ಜನಸಂಖ್ಯೆಯ ಕೊರತೆಯ ಭೀತಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆ ಗ್ರಾಮವನ್ನು ಖಾಲಿಯಾಗದಂತೆ ತಡೆಯಲು ಆಲ್ಬಿನೆನ್‌ಗೆ ತೆರಳಲು ಕುಟುಂಬಗಳಿಗೆ £50,000 (₹50 ಲಕ್ಷ) ಕ್ಕಿಂತ ಹೆಚ್ಚು ಪಾವತಿಸುವ ಯೋಜನೆಯನ್ನು 2018 ರಲ್ಲೇ ಪ್ರಾರಂಭಿಸಿದೆ. 50 ಲಕ್ಷ ಅಷ್ಟೇ ಅಲ್ಲ. ನಾಲ್ವರನ್ನು ಒಳಗೊಂಡ ಕುಟುಂಬದ ಪ್ರತಿ ವಯಸ್ಕರಿಗೆ 25,000 ಸ್ವಿಸ್ ಫ್ರಾಂಕ್‌ಗಳನ್ನು (₹22.5 ಲಕ್ಷ) ಮತ್ತು ಪ್ರತಿ ಮಗುವಿಗೆ ಇನ್ನೂ 10,000 ಸ್ವಿಸ್ ಫ್ರಾಂಕ್‌ಗಳನ್ನು (₹9 ಲಕ್ಷ)ವನ್ನು ನೀಡುತ್ತಾರೆ ಎಂದು ತಿಳಿದುಬಂದಿದೆ.

ಈ ಯೋಜನೆಯು ಸಿ ನಿವಾಸದ ಪರವಾನಿಗೆ ಹೊಂದಿರುವ ಸ್ವಿಸ್ ಪ್ರಜೆಗಳಿಗೆ ಮತ್ತು EU ಅಥವಾ ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ ದೇಶಗಳ ನಾಗರಿಕರಿಗೆ ಮತ್ತು US ಹಾಗೂ ಕೆನಡಾದ ನಾಗರಿಕರಿಗೆ ಮುಕ್ತವಾಗಿದೆ. ಅವರು ಐದು ವರ್ಷಗಳ ಕಾಲ ಸ್ವಿಟ್ಜರ್ಲೆಂಡ್‌ನಲ್ಲಿ ವಾಸಿಸಿದ ನಂತರ ಈ ಪರವಾನಗಿಯನ್ನು ಪಡೆಯಬಹುದು.

ಇದನ್ನೂ ಓದಿ: ಯುವಕರು ಮದುವೆಯಾಗದೇ ಜಪಾನ್‌ನಲ್ಲಿ ಜನಸಂಖ್ಯೆ ಹೆಚ್ಚಾಗಲ್ಲ: ಅಸ್ತಿತ್ವವನ್ನೇ ಕಳಕೊಳ್ಳುವ ಭೀತಿ..!

ಕಂಡೀಷನ್ಸ್‌ ಅಪ್ಲೈ..!
ಈ ಯೋಜನೆಗೆ ಅರ್ಹತೆ ಪಡೆಯಲು, ಅರ್ಜಿದಾರರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಕನಿಷ್ಠ ಹತ್ತು ವರ್ಷಗಳ ಕಾಲ ಅಲ್ಬಿನೆನ್‌ ಗ್ರಾಮದಲ್ಲಿ ಕನಿಷ್ಠ 200,000 ಸ್ವಿಸ್ ಫ್ರಾಂಕ್‌ಗಳ (₹1.8 ಕೋಟಿ) ಮೌಲ್ಯದ ಮನೆಯಲ್ಲಿ ವಾಸಿಸಲು ಒಪ್ಪಿಕೊಳ್ಳಬೇಕು. ಇನ್ನು, ಒಬ್ಬ ವ್ಯಕ್ತಿಯು 10 -ವರ್ಷದ ಅವಧಿಗೆ ಮುಂಚೆಯೇ ಹೋದರೆ, ಅವರು £50,000 ಹಣವನ್ನು ಮರುಪಾವತಿಸಬೇಕಾಗುತ್ತದೆ. ಅವಶ್ಯಕತೆಗಳು ಕಟ್ಟುನಿಟ್ಟಾಗಿ ತೋರುತ್ತದೆಯಾದರೂ, ಸ್ವಿಟ್ಜರ್ಲೆಂಡ್‌ನಲ್ಲಿ ವಾಸಿಸುವ ಪ್ರಯೋಜನಗಳು ಹಲವಾರು.

ಅಲ್ಬಿನೆನ್ ಏಕೆ ?

ಸ್ವಿಟ್ಜರ್ಲೆಂಡ್ ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ದೇಶವು ತುಲನಾತ್ಮಕವಾಗಿ ಕಡಿಮೆ ಹಿಂಸಾತ್ಮಕ ಅಪರಾಧ ಪ್ರಮಾಣವನ್ನು ಹೊಂದಿದೆ. ಹೆಚ್ಚುವರಿಯಾಗಿ, ಅಲ್ಬಿನೆನ್ ಗ್ರಾಮವು ಉತ್ತಮ ಗಾಳಿಯ ಗುಣಮಟ್ಟವನ್ನು ನೀಡುತ್ತದೆ, ವರ್ಷವಿಡೀ ಹಲವು ಗಂಟೆಗಳಷ್ಟು ಸೂರ್ಯನ ಬೆಳಕು ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.  ಆದರೆ, ಒಂದು ಕುಟುಂಬಕ್ಕೆ ಒಂದು ಮನೆಗೆ ಮಾತ್ರ ಅವಕಾಶವಿದ್ದು, ಎರಡನೇ ಮನೆ ಮತ್ತು ಹೂಡಿಕೆದಾರರ ಗುಂಪುಗಳ ದೊಡ್ಡ ವಸತಿ ಸಂಕೀರ್ಣಗಳನ್ನು ಗ್ರಾಮದಲ್ಲಿ ಅನುಮತಿಸಲಾಗುವುದಿಲ್ಲ.

Latest Videos
Follow Us:
Download App:
  • android
  • ios