Asianet Suvarna News Asianet Suvarna News

India Population Surpasses China: ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಭಾರತ!

2023ರ ಮಧ್ಯವರ್ಷದ ವೇಳೆಗೆ ಭಾರತ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆ ಹೊಂದಿರುವ ದೇಶವಾಗಿರಲಿದೆ. ಈ ವರ್ಷದ ಮಧ್ಯದಲ್ಲಿ ಭಾರತವು ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರಲಿದೆ. ಯುಎನ್ ವಿಶ್ವ ಜನಸಂಖ್ಯೆಯ ಡ್ಯಾಶ್‌ಬೋರ್ಡ್ ಪ್ರಕಾರ, ಭಾರತವು 1,428.6 ಮಿಲಿಯನ್ ಜನರನ್ನು ಹೊಂದಿದ್ದರೆ, ಚೀನಾದ ಜನಸಂಖ್ಯೆಯು 1,425.7 ಮಿಲಿಯನ್ ಆಗಿರಲಿದೆ.
 

UN world population dashboard India becomes worlds most populous country than China san
Author
First Published Apr 19, 2023, 3:16 PM IST

ನವದೆಹಲಿ (ಏ.19): ಈ ವರ್ಷದ ಮಧ್ಯದ ವೇಳೆ ಭಾರತ ಚೀನಾಕ್ಕಿಂತ 29 ಲಕ್ಷ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರಲಿದ್ದು, ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವರದಿಯ ಡ್ಯಾಶ್‌ಬೋರ್ಡ್‌ ಮಾಹಿತಿ ನೀಡಿದೆ. ಈ ವರ್ಷದ ಮಧ್ಯದಲ್ಲಿ ಭಾರತದ ಜನಸಂಖ್ಯೆ 142.86 ಕೋಟಿ ಆಗಿರಲಿದ್ದರೆ, ಚೀನಾದ ಜನಸಂಖ್ಯೆ 142.57 ಕೋಟಿ ಆಗಿರಲಿದೆ ಎಂದು ಅಂದಾಜು ಮಾಡಲಾಗಿದೆ .1960ರ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕಳೆದ ವರ್ಷ ಭಾರೀ ಇಳಿಕೆ ಕಂಡಿತ್ತು. ಇದರ ಬೆನ್ನಲ್ಲಿಯೇ ಚೀನಾ ತನ್ನ ಅತ್ಯಂತ ಕಠಿಣ 'ಒಂದೇ ಮಕ್ಕಳ ನೀತಿ' ಯನ್ನು ರದ್ದು ಮಾಡಿತ್ತು. ದೇಶದ ಅತಿಯಾದ ಜನಸಂಖ್ಯೆಯ ಅಪಾಯವನ್ನು ಅರಿತ ಚೀನಾ 1980ರಲ್ಲಿ ಈ ನೀತಿಯನ್ನು ಜಾರಿ ಮಾಡಿತ್ತು. 2021ರಿಂದ ಚೀನಾದಲ್ಲಿ ದಂಪತಿಗಳು ಮೂವರು ಮಕ್ಕಳನ್ನು ಹೊಂದಬಹುದು ಎಂದು ಹೇಳಲಾಗಿದೆ. ಜನನ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಹಾಗೂ ವಯಸ್ಸಾಗುತ್ತಿರುವ ಕಾರ್ಮಿಕರ ಪ್ರಮಾಣದಲ್ಲಿ ಭಾರೀ ಏರಿಕೆ ಆಗುತ್ತಿದ್ದ ಕಾರಣ ಚೀನಾ ಈ ನಿರ್ಧಾರ ಮಾಡಿತ್ತು. ಯುಎನ್‌ಎಫ್‌ಪಿಎಯ 'ದಿ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್, 2023' ಬುಧವಾರ ಬಿಡುಗಡೆ ಮಾಡಲಾದ 'ಜನಸಂಖ್ಯಾ ಸೂಚಕಗಳು' ವರ್ಗದ ಅಡಿಯಲ್ಲಿ ಇತ್ತೀಚಿನ ಅಂಕಿಅಂಶಗಳನ್ನು ನೀಡಲಾಗಿದೆ.

ಇನ್ನು 1950ರ ಬಳಿ ಮೊದಲ ಬಾರಿಗೆ ಭಾರತ ಜನಸಂಖ್ಯೆಯನ್ನು ಚೀನಾವನ್ನು ಹಿಂದಿಕ್ಕಲಿದೆ. 1950 ರಿಂದ ವಿಶ್ವಸಂಸ್ಥೆಯು ಜನಸಂಖ್ಯೆಯ ಮಾಹಿತಿಯನ್ನು ಪಡೆಯುವುದು ಹಾಗೂ ಪ್ರತಿವರ್ಷ ಬಿಡುಗಡೆ ಮಾಡುವ ಅಭ್ಯಾಸವನ್ನು ಆರಂಭ ಮಾಡಿತು.

165 ಕೋಟಿಗೆ ಏರಲಿದೆ ಭಾರತದ ಜನಸಂಖ್ಯೆ: ಯುಎಸ್‌ಎಫ್‌ಪಿಎ ಇತ್ತೀಚಿನ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 25 ರಷ್ಟು 0-14 ವರ್ಷ ವಯಸ್ಸಿನವರು, ಶೇಕಡಾ 18 ರಷ್ಟು 10 ರಿಂದ 19 ವಯಸ್ಸಿನವರು, ಶೇಕಡಾ 26 ರಷ್ಟು 10 ರಿಂದ 24 ವರ್ಷ ವಯಸ್ಸಿನವರು, ಶೇ.68ರಷ್ಟು ಮಂದಿ 15 ರಿಂದ 64 ವರ್ಷ ವಯಸ್ಸಿನವರಲ್ಲಿ ಶೇ.7ರಷ್ಟ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ. ಹಲವಾರು ಏಜೆನ್ಸಿಗಳ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯು 165 ಕೋಟಿ ತಲುಪುವವರೆಗೂ ಏರುತ್ತಲೇ ಇರುತ್ತದೆ. 165 ಕೋಟಿ ತಲುಪಿದ ಬಳಿಕವೇ ಕ್ಷೀಣಿಸಲು ಆರಂಭಿಸುತ್ತದೆ ಎಂದಿದೆ.

ಮದ್ವೆಯಾಗದೆ ಮಕ್ಕಳು ಮಾಡಿಕೊಂಡ್ರೂ ಸರ್ಕಾರಿ ಸೌಲಭ್ಯ ಸಿಗುತ್ತೆ, ಜನಸಂಖ್ಯೆ ಹೆಚ್ಚಿಳಕ್ಕೆ ಚೀನಾ ಕ್ರಮ

ಹಿಂದೂಸ್ತಾನ್ ಟೈಮ್ಸ್‌ನ ವರದಿಯು ಯುಎನ್‌ಎಫ್‌ಪಿಎ ಮಾಧ್ಯಮ ಮತ್ತು ಸಂವಹನ ಸಲಹೆಗಾರ ಅನ್ನಾ ಜೆಫರೀಸ್ ಅವರನ್ನು ಉಲ್ಲೇಖಿಸಿ ವರದಿ ಮಾಡಿದ್ದಯ, "ಕ್ರಾಸ್‌ಒವರ್ ಯಾವಾಗ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಮತ್ತು ದೇಶಗಳ ವೈಯಕ್ತಿಕ ಡೇಟಾ ಸಂಗ್ರಹಣೆಯ ಸ್ವಲ್ಪ ವಿಭಿನ್ನ ಸಮಯಗಳಿಂದ ನೇರ ಹೋಲಿಕೆಗಳು ಕಷ್ಟಕರವಾಗಿರುತ್ತದೆ' ಎಂದಿದ್ದಾರೆ.
"ನಾವು ಹೇಳುವುದೇನೆಂದರೆ, ಚೀನಾದ ಜನಸಂಖ್ಯೆಯು ಕಳೆದ ವರ್ಷ ಉತ್ತುಂಗಕ್ಕೇರಿದ್ದು ಆ ಬಳಿಕ ಕುಸಿಯಲು ಆರಂಭಿಸಿದೆ. ಈ ನಡುವೆ ಭಾರತದ ಜನಸಂಖ್ಯೆಯು ಬೆಳೆಯುತ್ತಿರುವಾಗ, ಅದರ ಜನಸಂಖ್ಯೆಯ ಬೆಳವಣಿಗೆಯ ದರವು 1980 ರಿಂದ ಕ್ಷೀಣಿಸುತ್ತಿದೆ" ಎಂದು ಅವರು ಹೇಳಿದ್ದಾರೆ.  ಆದಾಗ್ಯೂ, ಯುಎನ್ ವರದಿಯ ಪ್ರಕಾರ, ಚೀನಾವು ಭಾರತಕ್ಕಿಂತ ಜೀವಿತಾವಧಿಯಲ್ಲಿ ಉತ್ತಮವಾಗಿದೆ, ಇದು ಮಹಿಳೆಯರ ವಿಷಯದಲ್ಲಿ 82 ಮತ್ತು ಪುರುಷರಿಗಿಂತ 76 ಆಗಿದೆ. ಭಾರತದ ಅಂಕಿಅಂಶಗಳು 74 ಮತ್ತು 71 ಆಗಿದೆ.

ಚೀನಾದಲ್ಲಿ ಹೊಸ ರೂಲ್ಸ್‌, ವರದಕ್ಷಿಣೆ ನಿಷೇಧ, ಮದುವೆ ಆಗದೆ ಮಕ್ಕಳು ಮಾಡ್ಕೊಳ್ಳೋಕೆ ಅವಕಾಶ!

ವರದಿಯ ಪ್ರಕಾರ, 2023 ರ ಮಧ್ಯದ ವೇಳೆಗೆ ಜಾಗತಿಕ ಜನಸಂಖ್ಯೆಯು 8.045 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಪ್ರವೃತ್ತಿ ಆಫ್ರಿಕಾದಲ್ಲಿಯೂ ಕಾಣಬಹುದು ಎಂದು ವರದಿ ಹೇಳಿದೆ. 10 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಹೊಂದಿರುವ ಎಂಟು ಯುರೋಪ್‌ ರಾಷ್ಟ್ರಗಳು, ಕಳೆದ ದಶಕದಿಂದ ಜನಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ ಎಂದು ವರದಿ ಹೇಳಿದೆ. ಜಪಾನ್ ತನ್ನ ವಯಸ್ಸಾದ ಜನಸಂಖ್ಯೆಯ ಕಾರಣದಿಂದಾಗಿ ಕುಸಿತವನ್ನು ಕಂಡಿದೆ, 2011 ಮತ್ತು 2021 ರ ನಡುವೆ ಮೂರು ದಶಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಕಳೆದುಕೊಂಡಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಭೂಮಿಯಲ್ಲಿ ಮಾನವನ ಜನಸಂಖ್ಯೆ 10.4 ಶತಕೋಟಿಗೆ ತಲುಪಿದ ಬಳಿಕವೇ ಕುಸಿಯಲು ಆರಂಭವಾಗುತ್ತದೆ. 2090ರಿಂದ ಇದು ಆರಂಭವಾಗಲಿದೆ ಎಂದು ಹೇಳಿದೆ.

Follow Us:
Download App:
  • android
  • ios