ಸವಾಲಿನಲ್ಲಿ ಸೋತ ಗಡ್ಕರಿ: ಸಂಸದನಿಗೆ ಕೊಡಬೇಕು 32 ಸಾವಿರ ಕೋಟಿ ರೂಪಾಯಿ ಏನಿದು?

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಕೆಲ ತಿಂಗಳ ಹಿಂದೆ ಉಜ್ಜಯಿನಿಯ ಸಂಸದ ಅನಿಲ್ ಫಿರೊಜಿಯಾ ಅವರಿಗೆ ಸವಾಲು ಹಾಕಿದ್ದರು. ಆ ಸವಾಲನ್ನು ಸಂಸದರು ಗೆದ್ದಿದ್ದಾರೆ. ಏನದು ಸವಾಲು ಈ ಸ್ಟೋರಿ ಓದಿ

Ujjain MP Anil Firojiya takes Union Minister Gadkari challenge very seriously and lost 32 kg akb

ಮುಂಬೈ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಕೆಲ ತಿಂಗಳ ಹಿಂದೆ ಉಜ್ಜಯಿನಿಯ ಸಂಸದ ಅನಿಲ್ ಫಿರೊಜಿಯಾ ಅವರಿಗೆ ಸವಾಲು ಹಾಕಿದ್ದರು. ಅದರಂತೆ ಸಚಿವ ಗಡ್ಕರಿ, ಸಂಸದ ಅನಿಲ್ ಫಿರೊಜಿಯಾ ಅವರಿಗೆ ನೀವು ತೂಕ ಇಳಿಸಿದರೆ, ಇಳಿಸಿದ ತಲಾ ಒಂದು ಕೆಜಿ ತೂಕಕ್ಕೆ ಒಂದು ಸಾವಿರ ಕೋಟಿ ರೂಪಾಯಿಯಂತೆ ಸ್ಥಳೀಯ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಸಚಿವರ ಮಾತನ್ನು ಗಂಭೀರವಾಗಿ ಸ್ವೀಕರಿಸಿದ ಸಂಸದ ಫಿರೊಜಿಯಾ ಈಗ ಬರೋಬ್ಬರಿ 32 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹೀಗಾಗಿ ಈ ಸವಾಲನ್ನು ಸಚಿವ ಗಡ್ಕರಿ ಸೋತಂತಾಗಿದ್ದು, ಅನಿಲ್ ಫಿರೊಜಿಯಾ ಅವರಿಗೆ 32 ಸಾವಿರ ಕೋಟಿ ರೂಪಾಯಿಯನ್ನು ಸ್ಥಳೀಯ ಅಭಿವೃದ್ಧಿಗೆ ನೀಡಬೇಕಾಗಿದೆ.

ಫೆಬ್ರವರಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ನಿತಿನ್ ಗಡ್ಕರಿ (nithin Gadkari) ಅವರು ಫಿರೊಜಿಯಾ (Anil Firojiya)ಅವರಿಗೆ ಈ ಸವಾಲು ಹಾಕಿದ್ದರು. ಈ ಸವಾಲು ಹಾಕಿ 7 ತಿಂಗಳುಗಳೇ ಕಳೆದಿದ್ದು, ಸಂಸದರು 32 ಕೆಜಿ ತೂಕ ಇಳಿಸಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಗಡ್ಕರಿ ಅವರು ತಮ್ಮದೇ ಹಳೆಯ ಫೋಟೋವೊಂದನ್ನು ತೋರಿಸಿಕೊಂಡಿದ್ದರು. ಅದರಲ್ಲಿ ಅವರು 135 ಕೆಜಿ ಅಂದರೆ ಫಿರೊಜಿಯಾ ಅವರಿಗಿಂತಲೂ ಅತೀ ಹೆಚ್ಚು ತೂಕ ಹೊಂದಿದ್ದು, ಇದೇ ಕಾರಣಕ್ಕೆ ಅದು ಅವರೇ ಎಂದು ಗುರುತಿಸಲಾಗುತ್ತಿರಲಿಲ್ಲ. ಆದರೆ ಅವರ ಆ ಸಂದರ್ಭದಲ್ಲಿ ತೂಕ ಇಳಿಸಿಕೊಂಡು 93 ಕೆಜಿ ಆಗಿದ್ದರು. ಅವರ ಈ ತೂಕ ಇಳಿಕೆಯನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಉಜ್ಜಯಿನಿಯ ಸಂಸದ ಫಿರೋಜಿಯಾ ಅವರು ಒಟ್ಟು 32 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

Weight loss: ಏನೇನೋ ಸರ್ಕಸ್ ಮಾಡೋ ಬದಲು ಚೆನ್ನಾಗಿ ನಿದ್ರಿಸಿ!

ಇದಾದ ಬಳಿಕ ಜೂನ್‌ನಲ್ಲಿ ಫಿರೊಜಿಯಾ 15 ಕೆಜಿ ತೂಕ ಇಳಿಸಿಕೊಂಡಿದ್ದರು. ಆಗ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಕಳೆದುಕೊಳ್ಳುವ ಪ್ರತಿ ಕಿಲೋಗ್ರಾಂಗೆ, ನಾನು ಉಜ್ಜಯಿನಿ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ  ₹ 1,000 ಕೋಟಿ ಗಳಿಸುತ್ತೇನೆ ಎಂದು ವೇದಿಕೆಯ ಮೇಲೆ ಹೇಳಿದ್ದರು, ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಇಲ್ಲಿಯವರೆಗೆ 15 ಕೆ.ಜಿ. ತೂಕ ಇಳಿಸಿದ್ದೇನೆ. ನಾನು ನನ್ನ ತೂಕವನ್ನು ಮತ್ತಷ್ಟು ಕಡಿಮೆ ಮಾಡುತ್ತೇನೆ ಮತ್ತು ಗಡ್ಕರಿ ಅವರು ಭರವಸೆ ನೀಡಿದಂತೆ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದರು.

ನನ್ನ ತೂಕ ಇಳಿಕೆಯಿಂದ ಉಜ್ಜಯಿನಿ ಕ್ಷೇತ್ರಕ್ಕೆ ಹೆಚ್ಚಿನ ಹಣ ಬರುತ್ತದೆ ಎಂದಾದರೆ ನಾನು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಈ ಫಿಟ್‌ನೆಸ್‌ ಅಭಿಯಾನವನ್ನು ಮುಂದುವರಿಸಲು ಸಿದ್ಧ ಎಂದು ಅವರು ಹೇಳಿದ್ದರು. ತಾನು ತೂಕ ಇಳಿಸಿಕೊಳ್ಳಲು ಕಟ್ಟುನಿಟ್ಟಾದ ಆಹಾರ ಕ್ರಮ ಜೀವನ ಪದ್ಧತಿಯನ್ನು ಅನುಸರಿಸುವುದಾಗಿ ಅನಿಲ್ ಫಿರೋಜಿಯಾ ಹೇಳಿದ್ದಾರೆ. ಬೆಳಗ್ಗೆ 5:30 ಕ್ಕೆ ಎದ್ದು ವಾಕಿಂಗ್, ಪ್ರತಿದಿನ ಬೆಳಗ್ಗೆ ಯೋಗ, ಏರೋಬಿಕ್ಸ್ ಮತ್ತು ಓಟವನ್ನು ಅಭ್ಯಾಸ ಮಾಡುವುದಾಗಿ ತಮ್ಮ ದೈನಂದಿನ ದಿನಚರಿಯನ್ನು ಫಿರೋಜಿಯಾ ವಿವರಿಸಿದ್ದಾರೆ.

ತೂಕ ಇಳಿಸಿಕೊಳ್ಳುವ ಆತುರದಲ್ಲಿ ಆರೋಗ್ಯ ಹಾಳು ಮಾಡ್ಕೊಳ್ಳಬೇಡಿ

ಆಯುರ್ವೇದ ಆಹಾರ ಪದ್ಧತಿಯಂತೆ ಮುಂಜಾನೆ ಲಘು ಉಪಹಾರವನ್ನು (breakfast) ಸೇವಿಸುತ್ತಾರೆ. ಸಲಾಡ್, ಒಂದು ಬಟ್ಟಲು ಹಸಿರು ತರಕಾರಿಗಳು (green veggies) ಮತ್ತು ವಿವಿಧ ಧಾನ್ಯಗಳಿಂದ (variety of cereals) ಮಾಡಿದ ಒಂದು ರೊಟ್ಟಿಯನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸೇವಿಸುತ್ತಾರೆ. ಜೊತೆಗೆ ಕೆಲವೊಮ್ಮೆ ಒಣ ಹಣ್ಣುಗಳು (dry fruits) ಮತ್ತು ಕ್ಯಾರೆಟ್ ಸೂಪ್ ಅನ್ನು ಪರ್ಯಾಯವಾಗಿ ಸೇವಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

ಅಕ್ಟೋಬರ್ 17 ರಂದು ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅನಿಲ್ ಫಿರೋಜಿಯಾ ತಾನು ಸಚಿವರ ಸವಾಲನ್ನು ಸ್ವೀಕರಿಸಿದ್ದೇನೆ ಮತ್ತು ಸರಿ ಸುಮಾರು 32 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡರು. ಅಲ್ಲದೇ ನಂತರ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿಯಾದ ಉಜ್ಜಯಿನಿ ಸಂಸದರು ತಾವು ತೂಕ ಇಳಿಸಿದ ಬಗ್ಗೆ ಮಾತನಾಡಿದ್ದು, ಇದನ್ನು ಕಂಡು ಗಡ್ಕರಿ ಅವರು ಖುಷಿ ಪಟ್ಟರು. ಜೊತೆಗೆ ಅವರ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು ಎಂದು ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios