Asianet Suvarna News Asianet Suvarna News

ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ!

* ಬಂಡಾಯ ಶಾಸಕರ ಪತ್ನಿಯರಿಗೆ ಸಿಎಂ ಪತ್ನಿ ರಶ್ಮಿ ದೂರವಾಣಿ ಕರೆ

* ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ

Uddhav wife Rashmi steps into Maha talks contacts wives of rebels to convince them to return pod
Author
Bangalore, First Published Jun 27, 2022, 8:53 AM IST

ಮುಂಬೈ(ಜೂ.27): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದ ಹಿನ್ನೆಲೆಯಲ್ಲಿ ಇದೀಗ ಸ್ವತಃ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಪತ್ನಿ ರಶ್ನಿ, ಸರ್ಕಾರ ಉಳಿಸಲು ಕಣಕ್ಕಿಳಿದಿದ್ದಾರೆ. ರಶ್ಮಿ ಠಾಕ್ರೆ ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ಪತ್ನಿಯರಿಗೆ ಕರೆ ಮಾಡಿದ್ದು, ಸರ್ಕಾರ ಉಳಿಸಲು ಬೆಂಬಲ ನೀಡುವ ಕುರಿತು ತಮ್ಮ ಪತಿಯೊಂದಿಗೆ ಅವರ ಮಾತನಾಡುವಂತೆ ಮನವೊಲಿಕೆ ಯತ್ನ ಮಾಡಿದ್ದಾರೆ.

ಶಿಂಧೆ ಬಣಕ್ಕೆ ಮತ್ತಷ್ಟು ಬಲ: ಸಂಜಯ್‌ ರಾವುತ್‌ ಸೋದರನಿಂದಲೂ ಬಂಡಾಯ?

ಬಂಡಾಯ ನಾಯಕರು ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯ ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ್ದು, ಎಂಎಲ್‌ಸಿ ಚುನಾವಣಾ ಫಲಿತಾಂಶದ ನಂತರ ಶಾಸಕರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಇನ್ನಷ್ಟುಶಾಸಕರು, ಸ್ವತಂತ್ರ್ಯ ಅಭ್ಯರ್ಥಿಗಳು ಬಂಡಾಯ ಶಾಸಕರ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಉದ್ಧವ್‌ ಪತ್ನಿ ರಶ್ಮಿ ಠಾಕ್ರೆ ತಾವೇ ಶಾಸಕರ ಪತ್ನಿಯರಿಗೆ ಕರೆ ಮಾಡಿದ್ದಾರೆ. ತಮ್ಮ ತಮ್ಮ ಪತಿಯಂದಿರ ಜೊತೆಗೆ ಸರ್ಕಾರ ಉಳಿಸಲು ಬೆಂಬಲ ನೀಡುವ ಕುರಿತು ಮಾತನಾಡುವಂತೆ ಅವರ ಮನವೊಲಿಸಿದ್ದಾರೆ.

ಉದ್ಧವ್‌ ಜೊತೆ 20 ಬಂಡಾಯ ಶಾಸಕರ ಸಂಪರ್ಕ?

 ಏಕನಾಥ್‌ ಶಿಂಧೆ ಜೊತೆಯಲ್ಲಿ ಗುವಾಹಟಿಯಲ್ಲಿರುವ 39 ಬಂಡಾಯ ಶಾಸಕರ ಪೈಕಿ 20 ಜನರು, ಉದ್ಧವ್‌ ಬಣಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದು ಈಗಾಗಲೇ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಪ್ರಸ್ತಾಪಕ್ಕೆ ವಿರೋಧ ಹೊಂದಿರುವ ಶಾಸಕರು ಉದ್ಧವ್‌ ಜೊತೆ ಸಂಪರ್ಕದಲ್ಲಿದ್ದಾರೆ.

ಗುವಾಹಟಿಯಿಂದ 40 ಶಾಸಕರ ಶವ ತಲುಪುತ್ತೆ: ಬಂಡಾಯವೆದ್ದವರಿಗೆ ಶಿವಸೇನೆ ನಾಯಕನ ಬಹಿರಂಗ ಬೆದರಿಕೆ!

ಶಿಂಧೆ ಬಣಕ್ಕೆ ಮತ್ತಷ್ಟು ಬಲ

 

ಬಂಡಾಯ ಹತ್ತಿಕ್ಕಲು ಯತ್ನಿಸುತ್ತಿರುವ ಶಿವಸೇನೆಗೆ ಮತ್ತಷ್ಟುಆಘಾತವಾಗಿದೆ. ಪಕ್ಷದ ಮತ್ತೋರ್ವ ಶಾಸಕ, ಸಚಿವ ಉದಯ್‌ ಸಾವಂತ್‌ ಉದ್ಧವ್‌ ಬಣ ಬಿಟ್ಟು ಭಾನುವಾರ ಬಂಡಾಯ ಬಣ ಸೇರಿಕೊಂಡಿದ್ದಾರೆ. ಇದರೊಂದಿಗೆ ಮಹಾ ಆಘಾಡಿ ಸರ್ಕಾರದ 8ನೇ ಸಚಿವ ಬಂಡಾಯ ಬಣಕ್ಕೆ ಜಿಗಿದಂತಾಗಿದೆ.

ಸಾವಂತ್‌ ವಿಶೇಷ ವಿಮಾನದಲ್ಲಿ ಭಾನುವಾರ ಮುಂಬೈನಿಂದ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ಇದರೊಂದಿಗೆ ಶಿವಸೇನೆಯ 56 ಶಾಸಕರ ಪೈಕಿ 39 ಜನರು ಶಿಂಧೆ ಬಣಕ್ಕೆ ಬಂದಂತೆ ಆಗಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಬಂಡಾಯದ ವಿರುದ್ಧ ಭಾರೀ ಆಕ್ರೋಶದ ಮಾತುಗಳನ್ನು ಆಡುತ್ತಿರುವ ಶಿವಸೇನೆ ಹಿರಿಯ ನಾಯಕ ಸಂಜಯ್‌ ರಾವುತ್‌ ಅವರ ಸೋದರ, ಶಾಸಕ ಸುನಿಲ್‌ ರಾವುತ್‌ ಕೂಡಾ ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಖಚಿತಪಟ್ಟರೆ ಉದ್ಧವ್‌ ಮತ್ತು ರಾವುತ್‌ಗೆ ಭಾರೀ ಮುಖಭಂಗವಾಗಲಿದೆ.

Follow Us:
Download App:
  • android
  • ios