* ಬಂಡಾಯ ಹತ್ತಿಕ್ಕಲು ಯತ್ನಿಸುತ್ತಿರುವ ಶಿವಸೇನೆ* ಶಿಂಧೆ ಬಣಕ್ಕೆ ಮತ್ತಷ್ಟುಬಲ* ಗುವಾಹಟಿ ಸೇರಿಕೊಂಡ ಸಚಿವ ಉದಯ್‌ ಸಾವಂತ್‌* ಸಂಜಯ್‌ ರಾವುತ್‌ ಸೋದರನಿಂದಲೂ ಬಂಡಾಯ?

ಮುಂಬೈಜೂ.27): ಬಂಡಾಯ ಹತ್ತಿಕ್ಕಲು ಯತ್ನಿಸುತ್ತಿರುವ ಶಿವಸೇನೆಗೆ ಮತ್ತಷ್ಟುಆಘಾತವಾಗಿದೆ. ಪಕ್ಷದ ಮತ್ತೋರ್ವ ಶಾಸಕ, ಸಚಿವ ಉದಯ್‌ ಸಾವಂತ್‌ ಉದ್ಧವ್‌ ಬಣ ಬಿಟ್ಟು ಭಾನುವಾರ ಬಂಡಾಯ ಬಣ ಸೇರಿಕೊಂಡಿದ್ದಾರೆ. ಇದರೊಂದಿಗೆ ಮಹಾ ಆಘಾಡಿ ಸರ್ಕಾರದ 8ನೇ ಸಚಿವ ಬಂಡಾಯ ಬಣಕ್ಕೆ ಜಿಗಿದಂತಾಗಿದೆ.

ಸಾವಂತ್‌ ವಿಶೇಷ ವಿಮಾನದಲ್ಲಿ ಭಾನುವಾರ ಮುಂಬೈನಿಂದ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ಇದರೊಂದಿಗೆ ಶಿವಸೇನೆಯ 56 ಶಾಸಕರ ಪೈಕಿ 39 ಜನರು ಶಿಂಧೆ ಬಣಕ್ಕೆ ಬಂದಂತೆ ಆಗಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಬಂಡಾಯದ ವಿರುದ್ಧ ಭಾರೀ ಆಕ್ರೋಶದ ಮಾತುಗಳನ್ನು ಆಡುತ್ತಿರುವ ಶಿವಸೇನೆ ಹಿರಿಯ ನಾಯಕ ಸಂಜಯ್‌ ರಾವುತ್‌ ಅವರ ಸೋದರ, ಶಾಸಕ ಸುನಿಲ್‌ ರಾವುತ್‌ ಕೂಡಾ ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಖಚಿತಪಟ್ಟರೆ ಉದ್ಧವ್‌ ಮತ್ತು ರಾವುತ್‌ಗೆ ಭಾರೀ ಮುಖಭಂಗವಾಗಲಿದೆ.

ಇನ್ನಷ್ಟುದಿನ ಹೋಟೆಲ್‌ ವಾಸ:

ಈ ನಡುವೆ ಬಿಜೆಪಿ ಶಾಸಕರು ಉಳಿದುಕೊಂಡಿರುವ ಗುವಾಹಟಿಯ ರಾರ‍ಯಡಿಸನ್‌ ಬ್ಲ್ಯೂ ಹೋಟೆಲ್‌ನ 70 ಕೋಣೆಗಳ ಬುಕಿಂಗ್‌ ಅನ್ನು ಜೂ.30ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಬಿಕ್ಕಟ್ಟು ಇನ್ನಷ್ಟುದಿನ ಮುಂದುವರೆಯುವ ಸುಳಿವು ಕಾಣಸಿಕ್ಕಿದೆ.