Asianet Suvarna News Asianet Suvarna News

ವಿಶ್ವಾಸಮತ ಯಾಚಿಸದೇ ಸಿಎಂ ಸ್ಥಾನ ಕಳೆದುಕೊಂಡ ಉದ್ಧವ್‌ !

ಕಳೆದ ವರ್ಷ ಜೂನ್‌ನಲ್ಲಿ ತಮ್ಮ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಒಂದು ವೇಳೆ ಅವರು ಸೋಲು ಖಚಿತವಿದ್ದರೂ, ವಿಶ್ವಾಸಮತ ಯಾಚನೆ ಮಾಡಿ ಬಳಿಕ ಸೋಲನ್ನಪ್ಪಿದ್ದರೆ, ಗುರುವಾರ ಮತ್ತೆ ಅವರಿಗೆ ಸಿಎಂ ಆಗುವ ಭಾಗ್ಯ ಮರಳಿ ದಕ್ಕುತ್ತಿತ್ತು!

Uddhav Thackeray lost the position of CM without asking for vote of confidence If the confidence vote is lost, the chance to return to power akb
Author
First Published May 12, 2023, 7:34 AM IST

ನವದೆಹಲಿ: ಕಳೆದ ವರ್ಷ ಜೂನ್‌ನಲ್ಲಿ ತಮ್ಮ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಒಂದು ವೇಳೆ ಅವರು ಸೋಲು ಖಚಿತವಿದ್ದರೂ, ವಿಶ್ವಾಸಮತ ಯಾಚನೆ ಮಾಡಿ ಬಳಿಕ ಸೋಲನ್ನಪ್ಪಿದ್ದರೆ, ಗುರುವಾರ ಮತ್ತೆ ಅವರಿಗೆ ಸಿಎಂ ಆಗುವ ಭಾಗ್ಯ ಮರಳಿ ದಕ್ಕುತ್ತಿತ್ತು! ಹೌದು. ಈ ವಿಷಯವನ್ನು ಗುರುವಾರ ಮಹಾ ಅಘಾಡಿ ಸರ್ಕಾರಕ್ಕೆ ಸಂಬಂಧಪಟ್ಟಂತೆ ನೀಡಲಾದ ತೀರ್ಪಿನ ವೇಳೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.

ಶಿವಸೇನೆ (Shiv Sena) ಬಣದ ಶಾಸಕರು ಬೆಂಬಲ ವಾಪಸ್‌ ಪಡೆಯಲು ಕೈಗೊಂಡ ನಿರ್ಧಾರದ ಆಧಾರದ ಮೇಲೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಉದ್ಧವ್‌ಗೆ ಸೂಚಿಸಿದ್ದು ತಪ್ಪು ನಿರ್ಧಾರ. ಆದರೆ ಈ ಸೂಚನೆ ಬಳಿಕ ಉದ್ಧವ್‌ (Uddhav Thackeray) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಉದ್ಧವ್‌ ಠಾಕ್ರೆ ವಿಶ್ವಾಸಮತ ಯಾಚನೆ ಮಾಡದೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ರಾಜ್ಯಪಾಲರು ಸದನದಲ್ಲಿ ದೊಡ್ಡ ಪಕ್ಷವಾದ ಶಿಂಧೆ ಬಣಕ್ಕೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದು ಸರಿಯಾಗಿದೆ. ಹೀಗಾಗಿ ಉದ್ಧವ್‌ ಠಾಕ್ರೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮಹಾವಿಕಾಸ ಅಘಾಡಿ ಸರ್ಕಾರವನ್ನು ಪುನರ್‌ಸ್ಥಾಪನೆ ಮಾಡಿ ಉದ್ಧವ್‌ರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೇಮಿಸಲು ಸಾಧ್ಯವಿಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿದೆ.

ಏಕನಾಥ್‌ ಶಿಂಧೆ ಹಾಗೂ 15 ಶಿವಸೇನೆ ಶಾಸಕರ ಅನರ್ಹ ಸಾಧ್ಯವಿಲ್ಲ: ಸುಪ್ರೀಂಕೋರ್ಟ್‌

ಶಾಸಕರ ಅನರ್ಹ ಬಗ್ಗೆ ಸ್ಪೀಕರ್‌ ನಿರ್ಧರಿಸಲಿ: ಸುಪ್ರೀಂ

ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಶಾಸಕರನ್ನು ಪಕ್ಷಾಂತರ ತಡೆ ಕಾಯ್ದೆಯಡಿ ಅನರ್ಹಗೊಳಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತಾನು ಸಾಮಾನ್ಯ ಪ್ರಕರಣಗಳ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗದು ಎಂದಿರುವ ಸುಪ್ರೀಂಕೋರ್ಟ್ (Supreme Court), ಈ ವಿಷಯದಲ್ಲಿ ವಿಧಾನಸಭೆಯ ಸ್ಪೀಕರ್‌ ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ.

ಸಿಎಂ ಏಕನಾಥ್‌ ಶಿಂಧೆ ಮತ್ತು ಇತರೆ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸಲ್ಲಿಸಿದ್ದ ಅರ್ಜಿ ಕುರಿತು ಗುರುವಾರದ ತನ್ನ ತೀರ್ಪಿನಲ್ಲಿ ಪ್ರತಿಕ್ರಿಯಿಸಿರುವ ಸಾಂವಿಧಾನಿಕ ಪೀಠ, ಈ ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡಬೇಕಾದ ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಿಲ್ಲ. ಮೊದಲು ಈ ವಿಷಯದಲ್ಲಿ ಸ್ಪೀಕರ್‌ ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಅತ್ಯಂತ ಅಸಾಧಾರಣ ಪರಿಸ್ಥಿತಿ ಹೊರತುಪಡಿಸಿ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಸಂಪೂರ್ಣವಾಗಿ ಸಾಂವಿಧಾನಿಕ ಹೊಣೆ ಹೊಂದಿರುವ ಸ್ಪೀಕರ್‌ ಅವರದ್ದಾಗಿರುತ್ತದೆ ಎಂದು ಹೇಳಿದೆ.

ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಹೋರಾಟ ಗೆದ್ದ ದೆಹಲಿ ಸರ್ಕಾರ!

Follow Us:
Download App:
  • android
  • ios