Asianet Suvarna News Asianet Suvarna News

ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಹೋರಾಟ ಗೆದ್ದ ದೆಹಲಿ ಸರ್ಕಾರ!

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಹೋರಾಟದಲ್ಲಿ ದೆಹಲಿ ಸರ್ಕಾರ ಗೆಲುವು ಕಂಡಿದೆ. ಕಾನೂನು ಸುವ್ಯವಸ್ಥೆ ಹಾಗೂ ಭೂಮಿಯ ಹೊರತಾಗಿ ಸಿಬ್ಬಂದಿಗಳ ಮೇಲೆ ತನ್ನ ನಿಯಂತ್ರಣ ಪಡೆದುಕೊಂಡಿದೆ. ದೆಹಲಿ ಸರ್ಕಾರವು ರಾಜಧಾನಿಯಲ್ಲಿನ ಸೇವೆಗಳ ಮೇಲೆ ಶಾಸಕಾಂಗ ಮತ್ತು ಕಾರ್ಯಕಾರಿ ನಿಯಂತ್ರಣವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
 

Supreme Court says LG will work on the advice of Delhi government san
Author
First Published May 11, 2023, 12:26 PM IST | Last Updated May 11, 2023, 12:45 PM IST

ನವದೆಹಲಿ (ಮೇ.11): ದೆಹಲಿಯಲ್ಲಿ ಸಿಬ್ಬಂದಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಸಿಜೆಐ ಡಿವೈ ಚಂದ್ರಚೂಡ್ ಅವರು ತೀರ್ಪನ್ನು ಪ್ರಕಟಿಸಿದ್ದು, ಪೀಠದಲ್ಲಿರುವ ಉಳಿದ ನ್ಯಾಯಾಧೀಶರು ಕೂಡ ದೆಹಲಿಯಲ್ಲಿ ಉಂಟಾದ ಪರಿಸ್ಥಿತಿ ಮತ್ತೆ ಯಾವ ರಾಜ್ಯದಲ್ಲೂ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಂಟಿ ಕಾರ್ಯದರ್ಶಿ ಮಟ್ಟಕ್ಕಿಂತ ಹೆಚ್ಚಿನ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿ ಭೂಷಣ್ ಅವರ 2019 ರ ತೀರ್ಪನ್ನು ನಾವು ಒಪ್ಪುವುದಿಲ್ಲ. ನ್ಯಾಷನಲ್‌ ಕ್ಯಾಪಿಟಲ್‌ ಟೆರಿಟರಿ ದೆಹಲಿ ಒಂದು ಪೂರ್ಣ ರಾಜ್ಯವಲ್ಲದಿದ್ದರೂ ಸಹ, ಅದು ಕಾನೂನು ಮಾಡುವ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ.  ಗುರುವಾರ ತನ್ನ ಸರ್ವಾನುಮತದ ತೀರ್ಪಿನಲ್ಲಿ ಚುನಾಯಿತ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭೂಮಿ ಹೊರತುಪಡಿಸಿ ಎಲ್ಲಾ ಸೇವೆಗಳ ಮೇಲೆ ಸರ್ಕಾರವೇ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದೆ. ಅಧ್ಯಕ್ಷರು ವಹಿಸಿದಂತೆ ಆಡಳಿತಾತ್ಮಕ ಪಾತ್ರದ ಅಡಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಗಳನ್ನು ಚಲಾಯಿಸಬೇಕು ಎಂದಿದೆ.

ಶಾಸಕಾಂಗ ಸಭೆ ಕೂಡ ನಿರ್ಣಯಿಸಲಾಗದ ವಿಷಯಗಳಿಗೆ ಮಾತ್ರವೇ ಕಾರ್ಯನಿರ್ವಾಹಕ ಆಡಳಿತಕ್ಕೆ ವಿಸ್ತರಿಸಬಹುದು. ಆದರೆ, ಇದು ಸಂಪೂರ್ಣ ಎನ್‌ಸಿಟಿಡಿ ಮೇಲೆ ಆಡಳಿತವನ್ನು ಅರ್ಥೈಸಲು ಸಾಧ್ಯವಿಲ್ಲ, ಇಲ್ಲದಿದ್ದರೆ ದೆಹಲಿಯಲ್ಲಿ ಪ್ರತ್ಯೇಕ ಚುನಾಯಿತ ಸಂಸ್ಥೆಯನ್ನು ಹೊಂದುವ ಉದ್ದೇಶವು ನಿರರ್ಥಕವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರಬೇಕು ಎಂದು ಅದು ತೀರ್ಮಾನಿಸಿದೆ.

ಜನವರಿ 18ಕ್ಕೆ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್‌: ವರ್ಗಾವಣೆ ಮತ್ತು ಪೋಸ್ಟಿಂಗ್ ಹಕ್ಕುಗಳ ಬಗ್ಗೆ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಗಳ ನಡೆದಿತ್ತು. ಈ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಮಧ್ಯಪ್ರವೇಶಿಸಬಾರದು ಎಂದು ದೆಹಲಿ ಸರ್ಕಾರ ಹೇಳಿದೆ. ಮತ್ತು ದೆಹಲಿ ಸರ್ಕಾರ ಈ ಬಗ್ಗೆ ಅರ್ಜಿ ಸಲ್ಲಿಸಿತ್ತು.

ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಂಆರ್ ಶಾ, ನ್ಯಾಯಮೂರ್ತಿ ಕೃಷ್ಣ ಮುರಾರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಇದ್ದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಸಂವಿಧಾನ ಪೀಠ ಈ ಕುರಿತಾಗಿ ತೀರ್ಪು ನೀಡಿದೆ. ಇದಕ್ಕೂ ಮೊದಲು, ನ್ಯಾಯಾಲಯವು ಜನವರಿ 18 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ವಿಷಯವನ್ನು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ 2022ರ ಮೇ 6 ರಂದು ನೀಡಲಾಗಿತ್ತು.

 

ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್‌

ವಿಸ್ತ್ರತ ಪೀಠಕ್ಕೆ ನೀಡುವಂತೆ ಒತ್ತಾಯಿಸಿದ ಕೇಂದ್ರ: ಜನವರಿಯಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರವು ಈ ವಿಷಯವನ್ನು ವಿಸ್ತೃತ ಪೀಠಕ್ಕೆ ಕಳುಹಿಸಲು ಒತ್ತಾಯಿಸಿತ್ತು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಾಡಿದ್ದರು. ದೇಶದ ರಾಜಧಾನಿಯ ಕುರಿತಾದ ವಿಚಾರವಾಗಿದೆ. ಆದ್ದರಿಂದ, ಅದನ್ನು ವಿಸ್ತ್ರತ ಪೀಠಕ್ಕೆ ಕಳುಹಿಸಬೇಕು. ನಾವು ದೇಶದ ರಾಜಧಾನಿಯನ್ನು ಸಂಪೂರ್ಣ ಅರಾಜಕತೆಗೆ ಹಸ್ತಾಂತರಿಸಿದ್ದೇವೆ ಎಂಬುದನ್ನು ಇತಿಹಾಸವು ನಮಗೆ ನೆನಪಿಸದಿರಬಹುದು, ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ವಿಳಂಬ ಮಾಡುವುದು ರೂಢಿಯಾಗಬಾರದು. ವಿಚಾರಣೆ ಪೂರ್ಣಗೊಳ್ಳುತ್ತಿರುವಾಗ, ಅಂತಹ ಬೇಡಿಕೆಯನ್ನು ಹೇಗೆ ಮಾಡಬಹುದು? ಕೇಂದ್ರ ಈ ಹಿಂದೆ ಏಕೆ ಚರ್ಚೆ ಮಾಡಲಿಲ್ಲ? ಇದಾದ ಬಳಿಕ ನ್ಯಾಯಾಲಯ ಅವರ ಬೇಡಿಕೆಯನ್ನು ತಿರಸ್ಕರಿಸಿತ್ತು.

ಬಡವರ ಪಕ್ಷದ ಸಿಎಂ ಅರವಿಂದ್‌ ಕೇಜ್ರಿವಾಲ್‌ರಿಂದ ಮನೆ ನವೀಕರಣಕ್ಕೆ 171 ಕೋಟಿ ಖರ್ಚು: ಕಾಂಗ್ರೆಸ್‌ ಬಾಂಬ್‌!

Latest Videos
Follow Us:
Download App:
  • android
  • ios