Asianet Suvarna News Asianet Suvarna News

ರದ್ದಾಗಿದ್ದ ಮರಾಠಾ ಮೀಸಲು ಬೇರೆ ರೂಪದಲ್ಲಿ ಜಾರಿ!

* ಶಿಕ್ಷಣ, ಸರ್ಕಾರಿ ಉದ್ಯೋ​ಗ​ದ​ಲ್ಲಿ ಶೇ.10ರಷ್ಟು ಮೀಸಲು

 * ರದ್ದಾಗಿದ್ದ ಮರಾಠಾ ಮೀಸಲು ಬೇರೆ ರೂಪದಲ್ಲಿ ಜಾರಿ

 * ಒಬಿಸಿ ಬದಲು ಇಡಬ್ಲ್ಯುಎಸ್‌ ವಿಭಾಗದಲ್ಲಿ ಮೀಸಲಿಗೆ ಆದೇಶ

Uddhav govt offers 10pc reservation to Maratha students under EWS category pod
Author
Bangalore, First Published Jun 1, 2021, 9:47 AM IST

ಮುಂಬೈ(ಜೂ.01): ಮಹಾ​ರಾ​ಷ್ಟ್ರ​ದಲ್ಲಿ ಪ್ರಬಲ ಸಮು​ದಾ​ಯ​ವಾದ ‘ಮರಾಠ’ ಸಮು​ದಾ​ಯದ ಹಿಂದುಳಿದ ವರ್ಗದ ಮೀಸ​ಲಾ​ತಿ​ಯನ್ನು ಸುಪ್ರೀಂ ಕೋರ್ಟ್‌ ರದ್ದು​ಗೊ​ಳಿ​ಸಿ​ತ್ತು. ಆದರೆ ಮಹಾ​ರಾಷ್ಟ್ರ ಮುಖ್ಯ​ಮಂತ್ರಿ ಉದ್ಧವ್‌ ಠಾಕ್ರೆ ನೇತೃ​ತ್ವದ ಸರ್ಕಾ​ರವು ಈಗ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಮರಾಠರಿಗೆ ಆರ್ಥಿ​ಕ​ ಹಿಂದು​ಳಿದ ವರ್ಗ​ಗ​ಳ (ಇಡಬ್ಲ್ಯುಎಸ್‌) ಕೋಟಾ ಅಡಿ​ಯಲ್ಲಿ ಶಿಕ್ಷಣ ಸಂಸ್ಥೆ​ಗ​ಳು ಮತ್ತು ಸರ್ಕಾರಿ ಉದ್ಯೋ​ಗ​ದಲ್ಲಿ ಶೇ.10 ಮೀಸ​ಲಾ​ತಿಗೆ ಅವ​ಕಾಶ ಕಲ್ಪಿ​ಸಲು ನಿರ್ಧರಿಸಿದೆ.

ಮಹಾರಾಷ್ಟ್ರದಲ್ಲಿ ಮರಾಠ ಮೀಸಲು ರದ್ದು : ಸುಪ್ರೀಂ ಮಹತ್ವದ ಆದೇಶ!

2018ರಲ್ಲಿ ಮಹಾ​ರಾಷ್ಟ್ರ ಸರ್ಕಾ​ರವು ಮರಾಠ ಸಮು​ದಾ​ಯಕ್ಕೆ ಶಿಕ್ಷಣ ಸಂಸ್ಥೆ​ಗಳು ಮತ್ತು ಸರ್ಕಾರಿ ನೌಕ​ರಿ​ಯಲ್ಲಿ ಶೇ.13ರಷ್ಟುಒಬಿಸಿ ಮೀಸ​ಲಾತಿ ನೀಡಿತ್ತು. ಆದರೆ ಮೀಸ​ಲಾತಿ ಶೇ.50 ಮೀರ​ಬಾ​ರದು ಎಂಬ ಕಾರ​ಣ​ಕ್ಕೆ 2021ರ ಮೇ 5ರಂದು ಮರಾ​ಠರ ಮೀಸ​ಲಾ​ತಿ​ಯನ್ನು ಸುಪ್ರೀಂ ರದ್ದು​ಗೊ​ಳಿ​ಸಿತ್ತು.

'ಮರಾಠ ನಿಗಮ ಹಿಂಪಡೆಯದಿದ್ದರೆ ಸಾಹಿತ್ಯ ಸಮ್ಮೇಳನ ನಡೆಸಲು ಬಿಡಲ್ಲ’

ಆ ಬಳಿಕ, ಮರಾ​ಠ​ರಿಗೆ ಮೀಸ​ಲಾತಿ ಕಲ್ಪಿ​ಸ​ಲೇ​ಬೇಕೆಂದು ಮಹಾ​ರಾ​ಷ್ಟ್ರ ಸರ್ಕಾ​ರ​ದ ಮೇಲೆ ತೀವ್ರ ಒತ್ತಡ ಹೇರ​ಲಾ​ಗಿತ್ತು. ಈ ಹಿನ್ನೆ​ಲೆ​ಯಲ್ಲಿ ಮರಾಠ ಮೀಸ​ಲಾತಿ ವಿಚಾ​ರ​ದಲ್ಲಿ ಸುಪ್ರೀಂ ಕೋರ್ಟ್‌ ಆದೇ​ಶ​ದಿಂದ ತಪ್ಪಿ​ಸಿ​ಕೊ​ಳ್ಳಲು ಮಹಾ​ರಾಷ್ಟ್ರ ಸರ್ಕಾ​ರವು ಆರ್ಥಿ​ಕ​ವಾಗಿ ಹಿಂದು​ಳಿದ ವರ್ಗ​ಗ​ಳಡಿ ಮರಾ​ಠ​ರಿಗೆ ಶೇ.10 ಮೀಸ​ಲಾತಿ ಕಲ್ಪಿ​ಸಿದೆ.

Follow Us:
Download App:
  • android
  • ios