Asianet Suvarna News Asianet Suvarna News
breaking news image

ಸನಾತನ ಧರ್ಮ ಅವಹೇಳನ ಪ್ರಕರಣ; ಉದಯ್ ನಿಧಿ ಸ್ಟಾಲಿನ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್

ಸನಾತನ ಧರ್ಮ ಅವಮಾನಿಸಿದ ಆರೋಪ ಸಂಬಂಧ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ ತಮಿಳನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್. ನ್ಯಾಯಾಲಯವು ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ನೀಡಿದೆ.

Sanatana Dharma defamation case Court grants conditional bail to Uday Nidhi Stalin at bengaluru
Author
First Published Jun 25, 2024, 12:45 PM IST

ಬೆಂಗಳೂರು (ಜೂ.25) ಸನಾತನ ಧರ್ಮ ಅವಮಾನಿಸಿದ ಆರೋಪ ಸಂಬಂಧ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ ತಮಿಳನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್. ನ್ಯಾಯಾಲಯವು ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ನೀಡಿದೆ.

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಹೇಳಿಕೆ ನೀಡಿದ್ದರಿಂದ ಉದಯ್ ನಿಧಿ ಸ್ಟಾಲಿನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್ ಎಂಬುವವರು ಮಾನನಸ್ಟ ಕೇಸ್ ದಾಖಲಿಸಿದ್ದರು. ಪರಮೇಶ್ ಸಲ್ಲಿಸಿದ್ದ ಅರ್ಜಿ ಆಧರಿಸಿ ನ್ಯಾಯಾಲಯ ಉದಯ್ ನಿಧಿ ಸ್ಟಾಲಿನ್‌ಗೆ ಖುದ್ದಾಗಿ ಹಾಜರಾಗುವಂತೆ 42 ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆ ಇಂದು ನ್ಯಾಯಾಲಯಕ್ಕೆ ಹಾಜರಾದ ಉದಯ್ ನಿಧಿ ಸ್ಟಾಲಿನ್. ಬೇಲ್ ವಿಚಾರಣೆ ನಡೆಸಿದ ನ್ಯಾಯಾಲಯ ನಟ ಉದಯ್‌ ನಿಧಿ ಸ್ಟಾಲಿನ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹಿಂದೂ ಧರ್ಮದ ಅವಹೇಳನ: ಉದಯನಿಧಿ ಸ್ಟಾಲಿನ್‌ಗೆ ಮತ್ತೆ ಚಾಟಿ ಬೀಸಿದ ಸುಪ್ರೀಂ

ಘಟನೆ ಹಿನ್ನೆಲೆ

ಕಳೆದ ವರ್ಷ ಸೆಪ್ಟಂಬರ್ 4 ರಂದು ಚೆನ್ನೈನ ತೇನಂಪೇಟೆಯಲ್ಲಿ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉದಯ್ ನಿಧಿ ಸ್ಟಾಲಿನ್ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಅಷ್ಟೇ ಅಲ್ಲ ಅದು ಕೊರೊನಾ ಇದ್ದಂತೆ. ಸಾಮಾಜಿಕ ಸಮಾನತೆಗೆ ಹಿಂದೂ ಧರ್ಮ ವಿರುದ್ಧವಾಗಿ ಇಂತಹ ಹಿಂದೂ ಧರ್ಮವನ್ನ ನಿರ್ಮೂಲನೆ ಮಾಡಬೇಕಿದೆ ಎಂದು ಕರೆ ನೀಡಿದ್ದರು. 

ಸನಾತನ ಧರ್ಮವನ್ನು ಡೆಂಗ್ಯು, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ, ಬೆಂಗಳೂರು ಕೋರ್ಟ್‌ನಿಂದ ಸಮನ್ಸ್‌!

 ಈ ಹೇಳಿಕೆ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಿತ್ತು. ಹಿಂದೂ ಧರ್ಮದ ಆಕ್ರೋಶ ಗುರಿಯಾಗಿತ್ತು. ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ನಲ್ಲೂ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ರಾಜ್ಯದಲ್ಲೂ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು.

Latest Videos
Follow Us:
Download App:
  • android
  • ios