ತಮಿಳುನಾಡು(ಜೂ.10): ಕೊರೋನಾ ವೈರಸ್ 2ನೇ ಅಲೆ ಕ್ಷೀಣಿಸುತ್ತಿದೆ. ಎಪ್ರಿಲ್ ತಿಂಗಳಿನಿಂದ ಉಲ್ಭಣಗೊಂಡ ಸೋಂಕು ಜೂನ್ ತಿಂಗಳ ಆರಂಭದಲ್ಲಿ ಕೊಂಚ ತಗ್ಗಿದೆ. ಆದರೆ ಮತ್ತೊಂದು ಸಮಸ್ಯೆ ಎದುರಾಗಿದೆ. ಇದೀಗ ಮೃಗಾಲಯದ ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೆ ತಮಿಳುನಾಡಿನ ಅರಿನಗರ ಅಣ್ಣಾ ಮೃಗಾಲಯದಲ್ಲಿನ ಸಿಂಹವೊಂದು ಕೊರೋನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಇದೀಗ ಮತ್ತೆರಡು ಸಿಂಹಕ್ಕೆ ಕೊರೋನಾ ದೃಢಪಟ್ಟಿದೆ.

ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

ಅರಿಗನಗರ ಅಣ್ಣಾ ಮೃಗಾಲಯದಲ್ಲಿನ 2 ಸಿಂಹಗಳು ಆಸ್ವಸ್ಥಗೊಂಡಿದೆ. ಹೀಗಾಗಿ ತಕ್ಷಣವೇ ಮೃಗಾಲಯದ ಅಧಿಕಾರಿಗಳು ನಾಲ್ಕು ಹುಲಿ ಹಾಗೂ ಮೂರು ಸಿಂಹಗಳ ಮಾದರಿ ಸಂಗ್ರಹಿಸಿ ಐವಿಆರ್‌ಐ ಸಂಸ್ಥೆಗೆ ಕಳುಹಿಸಿದೆ. ಇದೀಗ ವರದಿ ಬಂದಿದ್ದು, 7 ಮಾದರಿಗಳ ಪೈಕಿ 2 ಸಿಂಹಗಳಿಗೆ ಕೊರೋನಾ ದೃಢಪಟ್ಟಿದೆ.

ನಾಲ್ಕು ಹುಲಿ ಹಾಗೂ ಮತ್ತೊಂದು ಸಿಂಹ ವರದಿ ನೆಗಟೀವ್ ಆಗಿದೆ. ಇದೀಗ ಸೋಂಕು ಕಾಣಿಸಿಕೊಂಡ ಸಿಂಹಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಮೃಗಾಲಯದಲ್ಲಿ ಸೋಂಕು ಹರಡದಂತೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ಅರಿನಗರ ಅಣ್ಣಾ ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮಧುರಮೈಲೆ ರಕ್ಷಿತಾರಣ್ಯದ 28 ಆನೆಗೆ ಕೋವಿಡ್ ಪರೀಕ್ಷೆ!...

ಜೂನ್ 5 ರಂದು ಇದೇ ಅರಿನಗರ ಮೃಗಾಲಯದ ಸಿಂಹವೊಂದು ಕೊರೋನಾಗೆ ಬಲಿಯಾಗಿತ್ತು. ಈ ಮೂಲಕ ಭಾರತದಲ್ಲಿ  ಕೊರೋನಾಗೆ ಬಲಿಯಾದ ಮೊದಲ ಪ್ರಾಣಿ ಎನಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆರೆಡು ಸಿಂಹಗಳು ಆಸ್ವಸ್ಥಗೊಂಡಿದೆ. ಇಷ್ಟೇ ಅಲ್ಲ ಕೊರೋನಾ ದೃಡಪಟ್ಟಿರುವುದು ಆತಂಕ ಹೆಚ್ಚಿಸಿದೆ.