ಸಿಂಹಗಳಲ್ಲಿ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಆನೆಗಳ ಪರೀಕ್ಷೆ ಮಧುರಮಲೈ 28 ಆನೆಗಳ ಮಾದರಿ ಸಂಗ್ರಹಿಸಿ ರವಾನೆ

ತಮಿಳುನಾಡು(ಜೂ.08): ಕೊರೋನಾ ವೈರಸ್ 2ನೇ ಅಲೆ ಭೀಕರತೆ ಇನ್ನೂ ಕಡಿಮೆಯಾಗಿಲ್ಲ. ಪ್ರಕರಣ ಸಂಖ್ಯೆ ಕಡಿಮೆಯಾಗಿದೆ ನಿಜ. ಆದರೆ ಕೊರೋನಾ ಮಾಸಿಲ್ಲ. ಇದರ ನಡುವೆ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೆದಿದೆ. ತಮಿಳುನಾಡಿನ ಮಧುರಮಲೈ ರಕ್ಷಿತಾರಣ್ಯದ 28 ಆನೆಗಳ ಮಾದರಿ ಸಂಗ್ರಹಿಸಿ ಕೋವಿಡ್ ಪರೀಕ್ಷೆ ಕಳುಹಿಸಲಾಗಿದೆ. 

ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

ಜೂನ್ 3 ರಿಂದ ತಮಿಳುನಾಡಿನ ವಂದಲೂರು ಮೃಗಾಲಯದ 9 ಸಿಂಹಗಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಇತರ ಮೃಗಾಲಯದಲ್ಲಿ ಮುಂಜಾಗ್ರತ ಕ್ರಮವಾಗಿ ಇದೀಗ ಪ್ರಾಣಿಗಳ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಮಧುರಮಲೈ ರಕ್ಷಿತಾರಣ್ಯದ 28 ಆನೆಗಳ ಮಾದರಿ ಸಂಗ್ರಹಿಸಿ ಉತ್ತರ ಪ್ರದೇಶದ ವೆಟರ್ನಿಟಿ ರಿಸರ್ಚ್ ಸಂಸ್ಥೆಗೆ ರವಾನಿಸಲಾಗಿದೆ.

Scroll to load tweet…

ಆನೆಗಳ ಮಾದರಿ ಸಂಗ್ರಹಿಸಲಾಗಿದೆ. ಮೊದಲ ಹಂತದಲ್ಲಿ 28 ಆನೆಗಳ ಮಾದರಿ ಸಂಗ್ರಹಿಸಲಾಗಿದೆ. ಇದೀಗ ಕೋವಿಡ್ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ತೆಪ್ಪಕಾಡು ಆನೆ ಶಿಬಿರದ ಫಾರೆಸ್ಟ್ ರೇಂಜರ್ ಹೇಳಿದ್ದಾರೆ.

ಕೊರೋನಾ ಸೋಂಕಿಗೊಳಗಾಗಿದ್ದ ಸಿಂಹಗಳು ಗುಣಮುಖ: ಟೆಸ್ಟ್ ನೆಗೆಟಿವ್

ವಂದಲೂರು ಮೃಗಾಲಯದಲ್ಲಿನ ಸಿಂಹಗಳು ಅಸ್ವಸ್ಥಗೊಂಡಿತ್ತು.ಹೀಗಾಗಿ ಪರೀಕ್ಷೆ ನಡೆಸಿದಾಗ ಕೊರೋನಾ ದೃಢಪಟ್ಟಿತು. ಮಧುರಮಲೈ ಅನೆ ಶಿಬಿರದಲ್ಲಿನ ಆನೆಗಳು ಆರೋಗ್ಯವಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ರೇಂಜರ್ ಹೇಳಿದ್ದಾರೆ.