Asianet Suvarna News Asianet Suvarna News

ತಮಿಳುನಾಡಿನಲ್ಲಿ ಕೊರೋನಾಗೆ ಸಿಂಹ ಬಲಿ!

* ತಮಿ​ಳ್ನಾಡು ಉದ್ಯಾ​ನ​ದ​ಲ್ಲಿ ಕೋವಿಡ್‌ಗೆ ಸಿಂಹ ಬಲಿ

* ಕೋವಿಡ್‌ಗೆ ಬಲಿಯಾದ ದೇಶದ ಮೊದಲ ಪ್ರಾಣಿ

* ಇನ್ನೂ 8 ಸಿಂಹಗಳಿಗೆ ಸೋಂಕು

* ಕೋವಿಡ್‌ ಖಚಿತ ಮಾಡಿಕೊಳ್ಳಲು ಮತ್ತೊಮ್ಮೆ ಪರೀಕ್ಷೆ

Lioness Dies of Coronavirus at Tamil Nadu Zoo Other Lions Also Positive pod
Author
Bangalore, First Published Jun 5, 2021, 8:08 AM IST

ಚೆನ್ನೈ(ಜೂ.05): ತಮಿ​ಳು​ನಾ​ಡಿನ ವಂದ​ಲೂರು ಪಟ್ಟ​ಣ​ದ​ಲ್ಲಿ​ರುವ ಆರಿ​ಗ​ನಾರ್‌ ಅಣ್ಣಾ ಪ್ರಾಣಿ​ಶಾ​ಸ್ತ್ರದ ಮೃಗಾಲಯದಲ್ಲಿ ಕೋವಿಡ್‌ ಸೋಂಕಿನಿಂದ ಸಿಂಹ​ವೊಂದು ಸಾವಿ​ಗೀ​ಡಾ​ಗಿದೆ. ಇದು ಕೋವಿಡ್‌ ಸೋಂಕಿಗೆ ದೇಶದಲ್ಲಿ ಬಲಿಯಾದ ಮೊದಲ ಪ್ರಾಣಿ ಎನ್ನಿಸಿಕೊಂಡಿದೆ.

ಮೊದಲ ಪರೀಕ್ಷೆಯಲ್ಲಿ ಇದಕ್ಕೆ ಕೋವಿಡ್‌ ದೃಢಪಟ್ಟಿದೆ. ಆದಾಗ್ಯೂ, ಮೃಗಾಲಯದ ಅಧಿಕಾರಿಗಳು ‘ನೀಲಾ’ ಎಂಬ ಈ ಸಿಂಹ ನಿಜಕ್ಕೂ ಕೋವಿಡ್‌ಗೇ ಬಲಿಯಾಗಿದೆಯೇ ಅಥವಾ ಪೂರ್ವರೋಗಗಳು ಅಥವಾ ಇನ್ನಾವುದೋ ವೈರಸ್‌ಗೆ ಬಲಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೈದರಾಬಾದ್‌ ಹಾಗೂ ಉತ್ತರ ಪ್ರದೇಶದ ಬರೇಲಿಯ ಉನ್ನತ ಪ್ರಯೋಗಾಲಯಕ್ಕೆ ಸಿಂಹಗಳ ಸ್ಯಾಂಪಲ್‌ ಕಳಿಸಿಕೊಡಲು ನಿರ್ಧರಿಸಿದ್ದಾರೆ.

ಉದ್ಯಾ​ನ​ದಲ್ಲಿ ಒಟ್ಟಾರೆ 11 ಸಿಂಹ​ಗ​ಳಿದ್ದು, ಅವು​ಗಳ ಗಂಟಲು ದ್ರವದ ಮಾದ​ರಿ​ಯನ್ನು ಪರೀ​ಕ್ಷೆ​ಗೊ​ಳ​ಪ​ಡಿ​ಸ​ಲಾ​ಗಿದೆ. ಈ ಪ್ರಕಾರ, ಮೊದಲಿನ ಪರೀಕ್ಷೆಯಲ್ಲಿ 9 ಸಿಂಹ​ಗ​ಳಲ್ಲಿ ಕೋವಿಡ್‌ ವೈರಾಣು ಪತ್ತೆ​ಯಾ​ಗಿದೆ. ಇದ​ರಲ್ಲಿ ನೀಲಾ ಎಂಬ ಸಿಂಹಿಣಿ ಮೃತ​ಪ​ಟ್ಟಿದೆ. ಉಳಿದ 8 ಸಿಂಹಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಝೂ ಪ್ರಕಟಣೆ ತಿಳಿಸಿದೆ.

ಕೋವಿಡ್‌ ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಲಾಕ್‌​ಡೌನ್‌ ಜಾರಿ​ಯ​ಲ್ಲಿದ್ದು, ಉದ್ಯಾ​ನ​ವ​ನ​ವನ್ನು ಸಹ ಕಳೆ​ದೊಂದು ತಿಂಗ​ಳಿಂದ ಮುಚ್ಚ​ಲಾ​ಗಿದೆ. ಆದಾಗ್ಯೂ, ಸಿಂಹ​ಗ​ಳಿಗೆ ಸೋಂಕು ಹೇಗೆ ಹಬ್ಬಿತು ಎಂಬುದು ಸಿಬ್ಬಂದಿಯ ತಲೆ​ಬಿ​ಸಿ​ಯಾ​ಗಿದೆ.

ಇತ್ತೀ​ಚೆ​ಗಷ್ಟೇ ಹೈದ​ರಾ​ಬಾ​ದ್‌ನ ನೆಹರೂ ಪ್ರಾಣಿ​ಗಳ ಉದ್ಯಾ​ನ​ವ​ನ​ದಲ್ಲಿ 8 ಸಿಂಹ​ಗಳು ಕೋವಿ​ಡ್‌ಗೆ ಸಿಲು​ಕಿ​ದ್ದವು.

Follow Us:
Download App:
  • android
  • ios