ದೆಹಲಿಯ ಕರೋಲ್‌ ಬಾಘ್‌ ಮೆಟ್ರೋ ಸ್ಟೇಷನ್‌ನ ವಿಡಿಯೋ ದೃಶ್ಯ ಇದಾಗಿದೆ. ಇದನ್ನು ಟ್ವಿಟರ್‌ನಲ್ಲಿ ಅಮಾನ್‌ ಹೆಸರಿನ ವ್ಯಕ್ತಿ ಶೇರ್‌ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಹಲವರು ಈ ಯವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ನವದೆಹಲಿ (ಜೂ. 10): ಇಬ್ಬರು ಯುವಕರು ಮೆಟ್ರೋ ರೈಲಿನ ಸೆನ್ಸಾರ್‌ ಡೋರ್‌ಗಳು ಕ್ಲೋಸ್‌ ಆಗೋದಕ್ಕೆ ಅಡ್ಡಿ ಪಡಿಸುವ ಮೂಲಕ ವಿಕೃತ ಆನಂದ ಅನುಭವಿಸುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ವ್ಯಕ್ತಿಗಳೆಲ್ಲರೂ ಈ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಟ್ವಿಟರ್‌ನಲ್ಲಿ ಅಮಾನ್‌ ಎನ್ನುವ ವ್ಯಕ್ತಿ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋಗೆ ಸ್ವತಃ ದೆಹಲಿ ಮೆಟ್ರೋ ಪ್ರಾಧಿಕಾರ ಕೂಡ ಪ್ರತಿಕ್ರಿಯೆ ನೀಡಿದ್ದು, ಇಂಥ ವರ್ತನೆಯನ್ನು ಸಹಿಸಲ್ಲ. ಇಂಥ ಘಟನೆಗಳು ನಿಮ್ಮ ಗಮನಕ್ಕೆ ಬಂದರೆ ಸಹಾಯವಾಣಿಗೆ ತಿಳಿಸಿ ಎಂದು ಹೇಳಿದೆ. ಅದರಲ್ಲದೆ, ಇದು ಶಿಕ್ಷಾರ್ಹ ಅಪರಾಧ ಹೇಗಾಗುತ್ತದೆ ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿದೆ. ಹಿಂದಿಯಲ್ಲಿ ವಿಡಿಯೋವನ್ನು ಅಮಾನ್‌ ಶೇರ್‌ ಮಾಡಿಕೊಂಡಿದ್ದು, 'ಇಂಥ ವ್ಯಕ್ತಿಗಳ ಕಾರಣದಿಂದಾಗಿಯೇ ಮೆಟ್ರೋಗಳು ಲೇಟ್‌ ಆಗುತ್ತದೆ' ಎಂದು ಬರೆದಿದ್ದಾರೆ. ಇಂಥ ವೈರಲ್‌ ವಿಡಿಯೋಗಳ ಸಂಖ್ಯೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗ ಹರಡುತ್ತಿದೆ. ಕ್ಷಣಮಾತ್ರಕ್ಕೆ ಜನಪ್ರಿಯತೆ ಹಾಗೂ ಕುಖ್ಯಾತಿಯನ್ನೂ ಈ ವಿಡಿಯೋಗಳು ತಂದುಕೊಡುತ್ತಿದೆ. ಅದರಲ್ಲೂ ದೆಹಲಿ ಮೆಟ್ರೋದಲ್ಲಿ ಆಗುವ ವೈರಲ್‌ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ರಾಡಾರ್‌ನಲ್ಲಿದೆ.

ದೆಹಲಿಯ ಮೆಟ್ರೋ ಕೋಚ್‌ ಒಂದರ ಒಳಗಿನಿಂದ ತೆಗೆದಿರುವ ವಿಡಿಯೋ ಇದಾಗಿದ್ದು, ಇಬ್ಬರು ಬೇಜವಾಬ್ದಾರಿಯುತ ಯುವಕರ ವರ್ತನೆ ವೈರಲ್‌ ಆಗಿದೆ. ಮೆಟ್ರೋ ಕೋಚ್‌ನ ಡೋರ್‌ನ ಅಕ್ಕಪಕ್ಕದಲ್ಲಿ ನಿಂತಿರುವ ಈ ಯುವಕರು, ಸೆನ್ಸಾರ್‌ ಡೋರ್‌ ಇನ್ನೇನು ಮುಚ್ಚಬೇಕು ಎನ್ನುವ ಸಮಯದಲ್ಲಿ ತಮ್ಮ ಕಾಲು ಅಡ್ಡ ಹಾಕುತ್ತಾರೆ. ಮೂರು-ನಾಲ್ಕು ಬಾರಿ ಅವರು ಇದೇ ರೀತಿ ಮಾಡುತ್ತಾರೆ. ಇದರಿಂದಾಗಿ ಅಟೋಮೇಟೆಡ್‌ ಡೋರ್‌ಗಳು ಮತ್ತೆ ತೆರೆದುಕೊಳ್ಳುತ್ತದೆ. ಅವರು ಹೀಗೆ ಮಾಡುತ್ತಿದ್ದರೆ, ಅಕ್ಕಪಕ್ಕದಲ್ಲಿ ಇರುವವರು ನಗುತ್ತಿರುತ್ತಾರೆ.

ಕೊನೆಗೆ ಪ್ರಯಾಣಿಕರೊಬ್ಬರೇ ಬಂದು, ನಿಲ್ಲಿಸಿ ಎಂದು ಹೇಳುವವರೆಗೂ ಯುವಕರು ಅದೇ ರೀತಿ ಮಾಡುತ್ತಿರುತ್ತಾರೆ. 'ಮೆಟ್ರೋ ರೈಲಿನ ಡೋರ್‌ಗಳು ಮುಚ್ಚುವುದನ್ನು ತಡೆಯುವುದು ಶಿಕ್ಷಾರ್ಹ ಅಪರಾಧ. ಪ್ರಯಾಣಿಕರು ಹಾಗೇನಾದರೂ ಇಂಥ ವರ್ತನೆ ಕಂಡು ಬಂದಲ್ಲಿ ಡಿಎಂಆರ್‌ಸಿ ಸಹಾಯವಾಗಿ 155370ಗೆ ಸಂಪರ್ಕ ಮಾಡಿ' ಎಂದು ದೆಹಲಿ ಮೆಟ್ರೋ ರೈಲ್‌ ಕಾರ್ಪೋರೇಷನ್‌ (ಡಿಎಂಆರ್‌ಸಿ) ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಾನ್‌, ಇದರ ಕೋಚ್‌ ನಂಬರ್‌ ಯಾವುದು ಅನ್ನೋದು ಗೊತ್ತಾಗ್ತಿಲ್ಲ. ಈ ವಿಡಿಯೋವನ್ನು ನಾನು ನೋಡಿದ್ದು ಇನ್ಸ್‌ಟಾಗ್ರಾಮ್‌ ರೀಲ್ಸ್‌ನಲ್ಲಿ. ಆದರೆ ಇದು ಬ್ಲ್ಯೂಲೈನ್‌ ಅನ್ನೋದು ಗೊತ್ತಾಗುತ್ತಿದೆ. ಇವರ ಮುಖಗಳನ್ನು ನೀವೂ ಕೂಡ ನೋಡಬಹುದು' ಎಂದು ಬರೆದಿದ್ದಾರೆ. ಇವರೆಲ್ಲರ ಬಗೆಗಿನ ವಿವರಗಳನ್ನು ನೀವು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದಿದ್ದಾರೆ. 

Watch: KSRTC ಬಸ್‌ನಲ್ಲಿ ಇಬ್ಬರು ಹುಡುಗಿಯರ ಮಧ್ಯೆಯೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ!

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ 35 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. ಅದರೊಂದಿಗೆ ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. 'ಕನಿಷ್ಠ 50 ಸಾವಿರ ದಂಡವನ್ನು ವಿಧಿಸಿ' ಎಂದು ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಬರೆದಿದ್ದಾರೆ. ' ಇವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಿ' ಎಂದು ಇನ್ನೊಬ್ಬರು ಬರೆದಿದ್ದಾರೆ. ಇಲ್ಲಿವರೆಗೂ ಅವರನ್ನೇಕೆ ಬಂಧಿಸಿಲ್ಲ ಎಂದು ಇನ್ನೊಬ್ಬರು ಬರೆದಿದ್ದು, ಬಹುಶಃ ಅನಾಗರೀಕರಂತೆ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಅಷ್ಟೇ ಅಲ್ಲ ಕ್ಯಾಬ್‌ನಲ್ಲೂ ಇನ್ಮುಂದೆ ರೊಮ್ಯಾನ್ಸ್ ಮಾಡಂಗಿಲ್ಲ!