ಲಸಿಕೆ ಪಡೆದವರಲ್ಲಿ ಕೊರೋನಾ| ಲಸಿಕೆ ಪಡೆದ ಇಬ್ಬರು ವೈದ್ಯರು, ಕಲೆಕ್ಟರ್‌ಗೆ ಕೊರೋನಾ| ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ ಪ್ರಕರಣ| ಇಷ್ಟಾದರೂ ಮೌನ ವಹಿಸಿದ ಆರೋಗ್ಯ ಇಲಾಖೆ

ಭೋಪಾಲ್(ಮಾ.17): ಮಧ್ಯಪ್ರದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಕೈ ಮೀರಲಾರಂಭಿಸಿದೆ. ಮಂಗಳವಾರವೂ ಕೊರೋನಾ ಸೋಂಕಿತರ ಸಂಖ್ಯೆ 817 ದಾಖಲಾಗಿದೆ. ಲಸಿಕೆ ಹಾಕಿಸಿಕೊಂಡವರಿಗೂ ಕೊರೋನಾ ಸೋಂಕು ತಗುಲುತ್ತಿದೆ. ಮಹಿಳಾ ವೈದ್ಯೆ ಬಳಿಕ ಜಬಲ್ಪುರ್‌ನ ಕಲೆಕ್ಟರ್ ಕರ್ಮ್‌ವೀರ್ ಶರ್ಮಾರವರಿಗೂ ಸೋಂಕು ತಗುಲಿದೆ. 

ಇನ್ನು ಈ ಕಲೆಕ್ಟರ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಹೀಗಿದ್ದರೂ ಸೋಂಕು ಕಾಣಿಸಿಕೊಂಡಿದೆ. ಸದ್ಯ ಇಲ್ಲಿನ ಆರೋಗ್ಯ ಇಲಾಖೆ ಮಾತ್ರ ಈ ವಿಚಾರವಾಗಿ ಮೌನ ವಹಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಇಲ್ಲಿನ ಸರ್ಕಾರ ರಾತ್ರಿ ಹತ್ತು ಗಂಟೆ ಬಳಿಕ ಮಾರುಕಟ್ಟೆ ಮುಚ್ಚಲು ಆದೇಶಿಸಿದೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: ಕೋವಿಡ್ ಕೇರ್ ಸೆಂಟರ್ ಓಪನ್

ಜಬಲ್ಪುರದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡ ಹದಿನೇಳು ದಿನದ ಬಳಿಕ ಇಬ್ಬರು ವೈದ್ಯರಲ್ಲಿ ಕೊರೋನಾ ಸೊಮಕು ಕಾಣಿಸಿಕೊಂಡಿದೆ. ಲಭ್ಯವಾದ ಮಾಹಿತಿ ಅನ್ವಯ ಸರ್ಕಾರಿ ಮೆಡಿಕಲ್ ಕಾಲೇಜಿನ ಇಬ್ಬರು ವೈದ್ಯರಿಗೆ ಕೋವಿಶೀಲ್ಡ್ ಲಸಿಕೆ ನಿಡಲಾಗಿತ್ತು. ಅಲ್ಲದೇ ಫೆಬ್ರವರಿ 22ರಂದು ಇವರಿಗೆ ಎರಡನೇ ಡೋಸ್‌ ಕೂಡಾ ನೀಡಲಾಗಿತ್ತು. ಆದರೆವ ಮಾರ್ಚ್ 7, 8 ರಂದು ಇಬ್ಬರಲ್ಲೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿವೆ. ಮಾರ್ಚ್ ಹತ್ತರಂದು ಟೆಸ್ಟ್‌ ನಡೆಸಿದಾಗ ಇಬ್ಬರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಾದ ಬಳಿಕ ಇಬ್ಬರನ್ನೂ ಐಸೋಲೇಟ್ ಮಾಡಲಾಗಿದೆ.

ಇನ್ನು ಈ ಪ್ರಕರಣದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮೆಡಿಕಲ್ ಕಾಲೇಜಿನ ಡೀನ್ ಲಸಿಕೆ ಪಡೆದ ಹದಿನೈದು ದಿನಗಳವರೆಗೆ ಎಚ್ಚರದಿಂದಿರಿ ಹಾಗೂ ಸ್ಯಾನಿಟೈಸರ್ ಬಳಕೆ ತಪ್ಪಿಸದಿರಿ ಎಂದಿದ್ದಾರೆ. ಅದೇನಿದ್ದರೂ ಲಸಿಕೆ ಹಾಕಿಸಿಕೊಂಡ ಬಳಿಕವೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅನೇಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. 

ಕೊರೋನಾ ತೆಡೆಯುವ ನಿಟ್ಟಿನಲ್ಲಿ ಜನವರಿ 16ರಿಂದ ಅರಂಭವಾದ ಲಸಿಕೆ ಅಭಿಯಾನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆದೇಶದ ಮೂಲೆ ಮೂಲೆಯಲ್ಲೂ ಕೊರೋನಾ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ. ಬಾರತದ ಲಸಿಕೆಗೆ ವಿದೇಶಗಳಿಂದಲೂ ಭಾರೀ ಬೆಡಿಕೆ ವ್ಯಕ್ತವಾಗಿದೆ.