ಪೌರತ್ವ ಕಾಯ್ದೆ ಜಾರಿಗೆ ದಿನಾಂಕ ಫಿಕ್ಸ್ ಮಾಡಿದ ಅಮಿತ್ ಶಾ!
ಕೇಂದ್ರ ಸರ್ಕಾರದ ವಿವಾದಿತ ಪೌರತ್ವ ಕಾಯ್ದೆ ಜಾರಿಗೆ ಸಿದ್ದತೆ ನಡೆಸುತ್ತಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ ಇದೀಗ ಭಾರಿ ಸಂಚನ ಸೃಷ್ಟಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕೋಲ್ಕತಾ(ಫೆ.11): ಕೇಂದ್ರ ಸರ್ಕಾರ ವಿವಾದಿತ ಪೌರತ್ವ ಕಾಯ್ದೆ ದೇಶದಲ್ಲಿ ಸೃಷ್ಟಿಸಿದ ಕೋಲಾಹಲ ಅಷ್ಟಿಷ್ಟಲ್ಲ. ಮಂಗಳೂರು ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ನಡೆದಿತ್ತು. ಕೊರೋನಾ ವಕ್ಕರಿಸಿದ ಬಳಿಕ ಸಿಎಎ ಪ್ರತಿಭಟನೆ ತಣ್ಣಗಾಗಿತ್ತು. ಆದರೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವ ಕಾಯ್ದೆ ಜಾರಿಗೆ ದಿನಾಂಕ ನಿಗದಿ ಮಾಡಿದ್ದಾರೆ.
ಪೌರತ್ವ ಕಾಯ್ದೆ ಹೋರಾಟಕ್ಕೆ PFI ಹಣ, ಡಿಜಿಹಳ್ಳಿ ಗಲಭೆಯಲ್ಲೂ ಕೈವಾಡ
ಕೊರೋನಾ ಲಸಿಕೆ ವಿತರಣೆ ಅಭಿಯಾನ ಅಂತ್ಯದ ಬೆನ್ನಲ್ಲೇ ಪೌರತ್ವ ಕಾಯ್ದೆ ಜಾರಿಗೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಆಯೋಜಿಸಿದ ರ್ಯಾಲಿಯಲ್ಲಿ ಅಮಿತ್ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
ಪೌರತ್ವ ಕಾಯ್ದೆ ಜಾರಿಯಿಂದ ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಇಲ್ಲ. ವಿರೋಧ ಪಕ್ಷಗಳು ಈ ಕುರಿತು ತಪ್ಪು ಮಾಹಿತಿಯನ್ನು ಹರಡುತ್ತಿದೆ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿನ ಯಾವುದೇ ಪ್ರಜೆಗೂ ಸಮಸ್ಯೆಯಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.