ಉತ್ತರ ಪ್ರದೇಶ(ಫೆ.11): ಉತ್ತರ ಪ್ರದೇಶದಲ್ಲಿ ಕೋಮು ಸೌಹಾರ್ಧತೆಗೆ ಭಂಗ ತಂದ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು  ವಿದ್ಯಾರ್ಥಿ ವಿಭಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆಯ ಐವರು ಪದಾಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಕಾನಾನು ಕ್ರಮ ಜರುಗಿಸಿದೆ.

ಹಾಥ್ರಸ್‌ ಸಂತ್ರಸ್ತೆ ಮೇಲೆ ಗ್ಯಾಂಗ್‌ ರೇಪ್‌ ಆಗಿತ್ತು: ಜೈಲಿನಲ್ಲಿರುವ ಆರೋಪಿಗಳಿಗೆ ಹಿನ್ನಡೆ!

ಜಾರಿ ನಿರ್ದೇಶನಾಲಯದ ಪ್ರಕಾರ ಕೊಲ್ಲಿ ರಾಷ್ಟ್ರಗಳಿಂದ 1.36 ಕೋಟಿ ರೂಪಾಯಿ ಹಣ ಭಾರತಕ್ಕೆ ಬಂದಿದೆ. ಈ ಹಣವನ್ನು ಉತ್ತರ ಪ್ರದೇಶದಲ್ಲಿ ಕೋಮು ಸೌಹಾರ್ಧತೆಗೆ ಭಂಗ ತರಲು ಬಳಸಲಾಗಿದೆ. 1.36 ಕೋಟಿ ರೂಪಾಯಿ ಹಣವನ್ನು PFI ಹಾಗೂ  CFI ಐವರು ಪದಾಧಿಕಾರಿಗಳು ಪಡೆದುಕೊಂಡಿದ್ದಾರೆ.

ವಿದೇಶದಿಂದ ಹಣ ಪಡೆದು ಭಾರತದಲ್ಲಿ ಕೋಮು ಸೌಹಾರ್ಧತೆ ಧಕ್ಕೆ ತರುವ ಹಲವು ಯತ್ನಗಳು ನಡೆಯುತ್ತಿದೆ. ಮಂಗಳೂರಿನಲ್ಲಿ ನಡೆದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲೂ ಇದೇ ರೀತಿಯ ಹಣ ದುರ್ಬಳೆ ಆರೋಪಗಳು  ಕೆಲ ಸಂಘಟನೆ ಮೇಲೆ ಕೇಳಿ ಬಂದಿದೆ. 

ಹತ್ರಾಸ್ ಘಟನೆಯಲ್ಲಿ ಬಂಧಿಸಿದ ಕೇರಳ ಮೂಲದ ಪತ್ರಕರ್ತ ಸಿದ್ಧಿಕ್ ಕಪ್ಪನ್ ಮನೆ ಜಾಲಾಡಿದ ಬಳಿಕ ಈ ಕುರಿತ ಮಹತ್ವದ ಮಾಹಿತಿ ಲಭ್ಯವಾಗಿತ್ತು ಎಂದು ಉತ್ತರ ಪ್ರದೇಶದ ಸರ್ಕಾರದ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 2001ರಲ್ಲಿ ನಿಷೇಧಿತ ಸಿಮಿ ಸಂಘಟನೆಯ ಹಾಗೂ ಅದರ ಕಾರ್ಯವನ್ನು ಚುರುಕುಗೊಳಿಸುವ ಕುರಿತು ಹಲವು ದಾಖಲೆಗನ್ನು ಸುಪ್ರೀಂ ಕೋರ್ಟ್‌ಗೆ ನೀಡಿತ್ತು.