PM Narenddra Modi ಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಿದ ಕಾರ್ಮಿಕರು!

ರೈಲ್ವೆ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಕಾನೂನುಬಾಹಿರ ತೆಗೆದುಹಾಕಿದ್ದನ್ನು ಖಂಡಿಸಿ ಮಂಗಳವಾರ ಕಾರ್ಮಿಕರು ರಕ್ತದಲ್ಲಿ ಪತ್ರ ಬರೆಯುವ ಚಳವಳಿ ನಡೆಸಿದರು.

The labour  sent a letter to Prime Minister Modi in blood at hubli rav

ಹುಬ್ಬಳ್ಳಿ (ಡಿ.21) : ರೈಲ್ವೆ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರನ್ನು ಕಾನೂನುಬಾಹಿರ ತೆಗೆದುಹಾಕಿದ್ದನ್ನು ಖಂಡಿಸಿ ಮಂಗಳವಾರ ಕಾರ್ಮಿಕರು ರಕ್ತದಲ್ಲಿ ಪತ್ರ ಬರೆಯುವ ಚಳವಳಿ ನಡೆಸಿದರು. ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದ 4ನೇ ದಿನದಲ್ಲಿ ಸುಮಾರು 100 ಜನ ಕಾರ್ಮಿಕರು ರಕ್ತದಲ್ಲಿ ಬರೆದ ಪತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರವಾನಿಸಿದರು. ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಫಾಯಿ ಕರ್ಮಚಾರಿಗಳಿಗೆ ಪಾದಪೂಜೆ ಮಾಡಿ ವಿಶೇಷವಾದ ಗೌರವ ಸಲ್ಲಿಸಿದ್ದಾರೆ. ಆದರೆ ಪ್ರಸ್ತುತ ದೇಶದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಡಬಲ್‌ ಎಂಜಿನ್‌ ಸರ್ಕಾರವಿದೆ. ಆದರೆ, ಹುಬ್ಬಳ್ಳಿಯ ದಲಿತ ಸಫಾಯಿ ಕರ್ಮಚಾರಿಗಳ ಕಣ್ಣಲ್ಲಿ ರಕ್ತ ಸುರಿಯುತ್ತಿದೆ. ಇದು ರೈಲ್ವೆ ಇಲಾಖೆ ದಲಿತರ ಮೇಲೆ ಮಾಡಿರುವಂತಹ ಅಮಾನವೀಯ ಶೋಷಣೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಸ್ಸಾಂ ವಲಸಿಗರಿಂದ ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ

ಸ್ವಚ್ಛತಾ ಕಾರ್ಮಿಕರ ಕುರಿತು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆಯು ಯಾವುದೇ ಸ್ಪಂದನೆ ನೀಡಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಸೇವಾ ಭದ್ರತೆ ಒದಗಿಸಬೇಕು. ಅವೈಜ್ಞಾನಿಕವಾಗಿ ನೀಡಿರುವ ಗುತ್ತಿಗೆ ರದ್ದುಪಡಿಸಿ 95 ಜನ ಕಾರ್ಮಿಕರನ್ನು ಪುನಃ ತೆಗೆದುಕೊಳ್ಳುವಂತೆ ಟೆಂಡರ್‌ ಕರಾರುಗಳನ್ನು ರೂಪಿಸಬೇಕು. ವಿವಿಧ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಘಿಸಿರುವ ಕಿಂಗ್‌ ಸೆಕ್ಯುರಿಟಿ ಗಾರ್ಡ್‌್ಸ ಸರ್ವಿಸಸ್‌ ಪ್ರೈ.ಲಿ. ಗುತ್ತಿಗೆಯನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

95 ಸ್ವಚ್ಛತಾ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಕಾರ್ಮಿಕ ಕಾಯ್ದೆಗಳ ವ್ಯತ್ಯಾಸದ ಬಾಕಿ ಮೊತ್ತವನ್ನು ಈ ಕೂಡಲೇ ಪಾವತಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಕಾರ್ಮಿಕರು ಸೋಮವಾರ ನಗರದಲ್ಲಿ ಬೃಹತ್‌ ಅರಬೆತ್ತಲೆ ಮೆರವಣಿಗೆ ನಡೆಸಿದ್ದರು. ಆ ವೇಳೆ ನಾಲ್ವರು ಅಸ್ವಸ್ಥರಾಗಿದ್ದರು.

ಶವ ಸಂಸ್ಕಾರಕ್ಕೆ ಹಣವಿಲ್ಲದೇ ಪ್ಲಾಸ್ಟಿಕ್‌ ಚೀಲದಲ್ಲಿ ಪತ್ನಿಯ ದೇಹ ಸಾಗಿಸಿದ ಪತಿ

ಪರಿಶಿಷ್ಟಜಾತಿ-ಪರಿಶಿಷ್ಟಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಕಾರ್ಮಿಕರಾದ ಬಸವರಾಜ ಹಾಲಾಪೂರ, ನೇತ್ರಾವತಿ ಜೋಗಳದಿನ್ನಿ, ನಾಗರತ್ನ ಪೆನಗೊಂಡ, ಶಕುಂತಲಾ ಭಂಡಾರಿ, ಶಾಂತವ್ವ ಬಾಗಲಾಡ, ಮಹೇಶ ರಾಮದಾಸ, ಸಿದ್ದಪ್ಪ ಸಂದಿಮನಿ, ಪಿ. ಮೇರಿ, ವಸಂತ ಬಳ್ಳಾರಿ, ನೇತ್ರಾವತಿ ಭಂಡಾರಿ ಇತರರಿದ್ದರು.

Latest Videos
Follow Us:
Download App:
  • android
  • ios